Tomato Price Hike: ಗುಜರಾತ್ ಸಿಎಂ ಗೆ ಕಾಂಗ್ರೆಸ್ ನಾಯಕ ಕೊಟ್ಟ ದುಬಾರಿ ಗಿಫ್ಟ್ ಏನು?
ಗಾಂಧಿನಗರ, ಜುಲೈ 13: ಗುಜರಾತ್ ಸೇರಿದಂತೆ ದೇಶಾದ್ಯಂತ ಸದ್ಯ ಟೊಮೇಟೊ ಬೆಲೆ ಗಗನಕ್ಕೇರಿದೆ. ಟೊಮೇಟೊ ಬೆಲೆ ಇದುವರೆಗಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಕೆಜಿಗೆ 156 ರೂ.ಗೆ ಮಾರಾಟವಾಗುವ ಟೊಮೇಟೊ ಮಧ್ಯಮ ಮತ್ತು ಬಡವರ ಕೈಗೆಟುಕದಂತಾಗಿದೆ.
ಗಗನಕ್ಕೇರಿರು ಟೊಮೇಟೋವನ್ನ ಕಾಂಗ್ರೆಸ್ ನಾಯಕ ಅಮಿತ್ ಚಾವ್ಡಾ ಅವರು ಅಮೆಜಾನ್ ಮೂಲಕ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಎರಡು ಕಿಲೋ ಟೊಮೆಟೊವನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ.

ಬೆಲೆ ಏರಿಕೆ ವಿರುದ್ಧ ಗೃಹಿಣಿಯರ ದನಿ ಮತ್ತು ಅವರ ಸಂಕಟಕ್ಕೆ ಸಾಂಕೇತಿಕವಾಗಿ ಧ್ವನಿ ಎಂದು ಕಾಂಗ್ರೆಸ್ ನಾಯಕ ಅಮಿತ್ ಚಾವ್ಡಾ ಹೇಳಿದ್ದಾರೆ. ಟೊಮೆಟೊ ಬೆಲೆ ಏರಿಕೆ ವಿಚಾರದಲ್ಲಿ ವಿಶಿಷ್ಟ ರೀತಿಯಲ್ಲಿ ತಮ್ಮ ವಿರೋಧವನ್ನ ಅಮಿತ್ ಚಾವ್ಡಾ ಅವರು ವ್ಯಕ್ತಪಡಿಸಿದ್ದಾರೆ.

ಪ್ರತಿ ಕೆಜಿಗೆ 22 ರೂ.ಗೆ ಮಾರಾಟವಾದ ಟೊಮೆಟೊ ಬೆಲೆ ಜೂನ್‌ನಲ್ಲಿ 100 ರೂ ದಾಟಿದೆ ಮತ್ತು ಜುಲೈನಲ್ಲಿ ದೇಶದ ಕೆಲವು ಭಾಗಗಳಲ್ಲಿ ರೂ 200 ತಲುಪಿದೆ. ಹೀಗಾಗಿ ಟೊಮೆಟೊ ಬೆಲೆ ಶೇ.445ರಷ್ಟು ಜಿಗಿದಿದೆ. ಇದರಿಂದಾಗಿ ದೇಶದಲ್ಲಿ ಟೊಮೆಟೊಗಿಂತ ಪೆಟ್ರೋಲ್-ಡೀಸೆಲ್ ಅಗ್ಗವಾಗಿದೆ. ಜುಲೈ 15ರ ನಂತರ ಟೊಮೇಟೊ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಟೊಮೇಟೊ ಬೆಲೆ ಕಡಿಮೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.












Click it and Unblock the Notifications