ಕರ್ನಾಟಕದಲ್ಲಿ ಕೈ ಹಿಡಿದ ಗ್ಯಾರಂಟಿಯನ್ನೇ ನೆಚ್ಚಿಕೊಂಡ ಕಾಂಗ್ರೆಸ್: ಪ್ರಣಾಳಿಕೆಯಲ್ಲಿ ಇವುಗಳೇ ಹೈಲೈಟ್
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿತು. ಇದಕ್ಕೆ ರಾಜ್ಯದ ಮತದಾರ ಫುಲ್ ಮಾರ್ಕ್ಸ್ ನೀಡಿದ್ದಾನೆ. ಈ ಒಂದು ತಂತ್ರದಿಂದಲೇ ಈ ಬಾರಿ ಕಾಂಗ್ರೆಸ್ ಮತ್ತೊಂದು ರಣ ತಂತ್ರವನ್ನು ಹೆಣೆದುಕೊಂಡಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದನ್ನು ನೋಡಿದರೆ ಕರ್ನಾಟಕದ ಚುನಾವಣೆ ಈ ಪಕ್ಷದ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದು ತಿಳಿಯುತ್ತದೆ.
ಕಾಂಗ್ರೆಸ್ 2023ರ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿಗಳೊಂದಿಗೆ ಜನರ ಬಳಿ ತೆರಳಿತ್ತು. 200 ಯುನಿಟ್ ವಿದ್ಯುತ್ ಉಚಿತ್, ಮಹಿಳೆಯರಿಗೆ ಬಸ್ ಫ್ರಿ, ಪ್ರತಿ ಗೃಹಿಣಿಗೆ ಗೃಹ ಲಕ್ಷಿಯೋಜನೆಯಡಿ ತಿಂಗಳಿಗೆ 2000 ರೂ. ಸಹಾಯಧನ, ಬಿಪಿಎಲ್ ಕುಟುಂಬದ ಪ್ರತಿಯೊಬ್ಬರಿಗೂ ಅನ್ನಭಾಗ್ಯ ಯೊಜನೆಯಡಿ 10 ಕೆಜಿ ಉಚಿತ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಯೋಜನೆಯಡಿ ಮಾಸಿಕ 3000 ರೂ. ಈ ಗ್ಯಾರಂಟಿಗಳಿಗೆ ಇಲ್ಲಿನ ಮತದಾರ ಜೈ ಎಂದಿದ್ದಾನೆ.

ಗ್ಯಾರಂಟಿ ಸುತ್ರ ಕರ್ನಾಟಕದಲ್ಲಿ ವರ್ಕ್‌ಔಟ್ ಆಗುತ್ತಿದ್ದಂತೆ, ನಂತರ ನಡೆದ ಪಂಚ ರಾಜ್ಯ ಚುನಾವಣೆಗಳಲ್ಲೂ ಇದನ್ನು ಪಸರಿಸಿತು. ಆದರೆ ಆಗ ಗ್ಯಾರಂಟಿಗಳು ಅಷ್ಟಾಗಿ ವರ್ಕ್ ಆಗಲಿಲ್ಲ. ಮತ್ತೆ ಕಾಂಗ್ರೆಸ್ ದೇಶದ ಜನರ ಮುಂದೆ 25 ಹೊಸ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.
ಕರ್ನಾಟಕದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದಂತೆ ರಾಷ್ಟ್ರದಲ್ಲೂ ಕಾಂಗ್ರೆಸ್ ಐದು ನ್ಯಾಯಗಳನ್ನು ಘೋಷಣೆ ಮಾಡಿದೆ. ಭಾಗಿತ್ವ ನ್ಯಾಯ', 'ಕಿಸಾನ್ ನ್ಯಾಯ', 'ಮಹಿಳಾ ನ್ಯಾಯ', 'ಕಾರ್ಮಿಕ ನ್ಯಾಯ' ಮತ್ತು 'ಯುವ ನ್ಯಾಯ' ಘೋಷಿಸಿದೆ. ಸಮನಾತೆಯ ನ್ಯಾಯದ ಅಡಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದೆ.
#WATCH | Congress Party releases its manifesto for the 2024 Lok Sabha elections, at AICC headquarters in Delhi.
— ANI (@ANI) April 5, 2024
#LokSabhaElections2024 pic.twitter.com/lNZETTLDLY
ಕಾಂಗ್ರೆಸ್ ಘೋಷಿಸದ ಪ್ರಣಾಳಿಕೆಯಲ್ಲಿ ಏನಿದೆ?
ಕಾಂಗ್ರೆಸ್ ಘೋಷಿಸಿದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೇಂದ್ರ ಸರ್ಕಾರದ ಉಸ್ಯೋಗಗಳಲ್ಲಿ ಸ್ತ್ರೀಯರಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಆಶಾ, ಬಿಸಿಯೂಟ ಕಾರ್ಯಕರ್ತೆಯ ಸಂಬಳವನ್ನು ದ್ವಿಗುಣದ ಭರವಸೆಯನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದೆ. ಮಹಿಳಾ ಕಾರ್ಮಿಕರ ಹಾಸ್ಟೆಲ್‌ಗಳನ್ನು ಎರಡು ಪಟ್ಟು ಹೆಚ್ಚಿಸಲಾಗುವುದು ಎಂದು ಘೋಷಿಸಿದೆ. ಅಲ್ಲದೆ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ನೆರವು ನೀಡಲು ತಮ್ಮ ಪಕ್ಷ ಬದ್ಧವಾಗಿರುವುದಾಗಿ ಘೋಷಿಸಿದೆ.
ದೇಶದ ಬೆನ್ನೆಲೆಬು ಎಂದೇ ಕರಿಸಿಕೊಳ್ಳುವ ರೈತರಿಗೂ ಘೋಷಣಾ ಪತ್ರದಲ್ಲಿ ಸ್ಥಾನ ಸಿಕ್ಕಿದೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಎಂಎಸ್ ಸ್ವಾಮಿನಾಥನ್ ಆಯೋಗದ ಶಿಫಾರಿಸನಂತೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ನೀಡಲು ಕೈ ಪಕ್ಷ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ರೈತರ ಸಾಲವನ್ನು ಮನ್ನ ಮಾಡಲು ಆಯೋಗ ರಚಿಸಲಾಗುವುದು ಎಂದು ಘೋಷಣೆಯಲ್ಲಿ ತಿಳಿಸಿದ್ದು, ರೈತ ಸ್ನೇಹಿ ಕೃಷಿ ರಫ್ತು ರೂಪಿಸಲಾಗುವುದು ಎಂದು ತಿಳಿಸಿದೆ.
ಶಿಕ್ಷಣ ಪಡೆದ ನಿರುದ್ಯೋಗಿ ಯುವಜನತೆಗೆ ವಾರ್ಷಿಕ 1 ಲಕ್ಷ ರೂ. ಸಹಾಯದನ ನೀಡಲು ತೀರ್ಮಾನಿಸಲಾಗಿದ್ದು, 30 ಲಕ್ಷ ಉದ್ಯೋಗ ಸೃಷ್ಟಿಸುವ ಕನಸನ್ನು ಪ್ರಣಾಳಿಕೆ ಹೊಂದಿದೆ. ಯುವಕರಿಗೆ ಸ್ಟಾರ್ಟಪ್ ಅಪ್ ಫಂಡ್ ಐದು ಸಾವಿರ ನೀಡುವುದಾಗಿ ಕಾಂಗ್ರೆಸ್ ತಿಳಿಸಿದ್ದು, ಗುತ್ತಿಗಿ ಆಧಾರಿತ ಉದ್ಯೋಗಿಗಳ ರಕ್ಷಣೆ ಕಾಂಗ್ರೆಸ್ ಬೆಳಕು ಚೆಲ್ಲಿದೆ.












Click it and Unblock the Notifications