ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೇರಿ ಸಿಎಂ ಆದ ಈಶಾನ್ಯ ರಾಜ್ಯದ ಕಾಂಗ್ರೆಸ್ ನಾಯಕರು!

|
Google Oneindia Kannada News

ನವದೆಹಲಿ, ಮೇ 15: ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ, ತತ್ವ, ಸಿದ್ದಾಂತಗಳು ಯಾವಾಗಲೂ ಪರಸ್ಪರ ವಿರುದ್ಧವಾದವು. ಆದರೆ ಸದ್ಯ ಬಿಜೆಪಿಯ ನಾಲ್ವರು ಮುಖ್ಯಮಂತ್ರಿಗಳು ಈ ಹಿಂದೆ ಕಾಂಗ್ರೆಸ್‌ ಪಕ್ಷದಲ್ಲಿದ್ದರು. ನಾಲ್ವರು ನಾಯಕರ ಪರಿಚಯ ಇಲ್ಲಿದೆ ನೋಡಿ.

ಪ್ರಸ್ತುತ ದೇಶದ 18 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಶನಿವಾರ ತ್ರಿಪುರಾದಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಾಯಿಸಿದೆ. ಭಾನುವಾರ ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಡಾ. ಮಾಣಿಕ್ ಸಹಾ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ ಕೂಡ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು.

ವರ್ಷಗಟ್ಟಲೇ ಕಾಂಗ್ರೆಸ್ ಬಾವುಟ ಹಿಡಿದಿದ್ದ ಡಾ. ಮಾಣಿಕ್ ಸಹಾ ಬಿಜೆಪಿ ಸೇರಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಮಾಣಿಕ್ ಸಹ ಮಾತ್ರ ಈ ಸಾಧನೆ ಮಾಡಿದ ನಾಯಕನಲ್ಲ, ಕಾಂಗ್ರೆಸ್‌ನ ನಾಲ್ವರು ನಾಯಕರು ಬಿಜೆಪಿ ಸೇರಿ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಶೇಷ ವೆಂದರೆ ಈ ನಾಲ್ವರು ನಾಯಕರು ಈಶಾನ್ಯ ರಾಜ್ಯಗಳಿಗೆ ಸೇರಿದವರು.

 ಡಾ. ಮಾಣಿಕ್ ಸಹಾ

ಡಾ. ಮಾಣಿಕ್ ಸಹಾ

ಮುಂದಿನ ವರ್ಷ ಫೆಬ್ರವರಿಯಲ್ಲಿ ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸದ್ಯ ಬಿಜೆಪಿ ಇಲ್ಲಿ ನಾಯಕತ್ವ ಬದಲಿಸಿದೆ. ಮಾಜಿ ಮುಖ್ಯಮಂತ್ರಿ ಬಿಪ್ಲವ್ ದೇವ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ನಂತರ ಬಿಜೆಪಿ ಇಲ್ಲಿನ ಶಾಸಕಾಂಗ ಪಕ್ಷದ ನಾಯಕನಾಗಿ ಮಾಣಿಕ್ ಸಹಾ ಆಯ್ಕೆ ಮಾಡಿದೆ. ವೃತ್ತಿಯಲ್ಲಿ ದಂತ ವೈದ್ಯರಾಗಿದ್ದ ಡಾ.ಮಾಣಿಕ್ ಸಹಾ ಕಾಂಗ್ರೆಸ್ ತೊರೆದು 2016ರಲ್ಲಿ ಬಿಜೆಪಿ ಸೇರಿದ್ದರು. ನಾಲ್ಕು ವರ್ಷಗಳ ನಂತರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಯಿತು. ಬಿಜೆಪಿಯಲ್ಲಿ ಯಶಸ್ವಿ ನಾಯಕತ್ವ ನಿಭಾಯಿಸಿದ ಹಿನ್ನಲೆಯಲ್ಲಿ ಈಗ ಮುಖ್ಯಮಂತ್ರಿ ಪದವಿಯೂ ಸಿಕ್ಕಿದೆ.

 ನೇಫಿಯು ರಿಯೊ

ನೇಫಿಯು ರಿಯೊ

ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಸಿ. ಜಮೀರ್ ಜೊತೆ ರಾಜ್ಯದ ಸಮಸ್ಯೆಗಳ ಕುರಿತು ವಾಗ್ವಾದಕ್ಕಿಳಿದ ನಂತರ ನಾಗಾ ಪೀಪಲ್ಸ್ ಪಾರ್ಟಿಗೆ ಸೇರ್ಪಡೆಗೊಂಡರು. ನಂತರ ಈ ಪಕ್ಷವು ಬಿಜೆಪಿ ಸೇರಿದಂತೆ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಡೆಮಾಕ್ರಟಿಕ್ ಅಲಯನ್ಸ್ ಆಫ್ ನಾಗಾಲ್ಯಾಂಡ್ ಎಂಬ ರಾಜಕೀಯ ಸಂಘಟನೆಯನ್ನು ರಚಿಸಿತು. ನಂತರ ನೆಫಿಯು ರಿಯೊ ರಾಜ್ಯದ ಮುಖ್ಯಮಂತ್ರಿಯಾದರು. 2018ರಲ್ಲಿ ಎನ್‌ಪಿಎಫ್ ಮತ್ತು ಬಿಜೆಪಿ ಮತ್ತು ಮೈತ್ರಿ ಮುರಿದುಬಿತ್ತು. ನೇಫಿಯು ರಿಯೊ ನಂತರ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಗೆ ಸೇರಿದರು. ಚುನಾವಣೆಯಲ್ಲಿ ಗೆದ್ದು ಮತ್ತೆ ರಾಜ್ಯದ ಮುಖ್ಯಮಂತ್ರಿಯಾದರು.

 ಹಿಮಂತ್ ಬಿಸ್ವಾ ಶರ್ಮಾ

ಹಿಮಂತ್ ಬಿಸ್ವಾ ಶರ್ಮಾ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ 2015ರ ತನಕ ಕಾಂಗ್ರೆಸ್‌ನಲ್ಲಿದ್ದರು. 2016ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಹಿಮಂತ ಬಿಸ್ವಾ ಶರ್ಮಾ ಬಂದ ನಂತರ ಬಿಜೆಪಿ ಯಶಸ್ಸುಗಳಿಸಿತು. ಇದರಿಂದ ಅವರಿಗೆ ಬಿಜೆಪಿಗೆ ಪಕ್ಷದ ಲಾಭವೂ ಸಿಕ್ಕಿದೆ. 2016ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯ ಪ್ರಚಾರದಿಂದ ಬಿಜೆಪಿಗೆ ದೊಡ್ಡ ಜಯ ಸಿಕ್ಕಿದೆ. 2021ರಲ್ಲಿ ಸರ್ಬಾನಂದ ಸೋನೋವಾಲ್ ಅವರ ಸ್ಥಾನದಲ್ಲಿ ಅವರನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡಿತು. ಬಿಜೆಪಿಯಿಂದ ಹೇಮಂತ್ ಬಿಸ್ವಾ ಶರ್ಮಾ ಕೂಡ ಕೇಂದ್ರ ಸಚಿವರಾದರು. ಅವರು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಚಾಲಕರೂ ಆಗಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಹಿಡಿತ ಸಾಧಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ.

 ಎನ್. ಬಿರೇನ್ ಸಿಂಗ್

ಎನ್. ಬಿರೇನ್ ಸಿಂಗ್

ಎನ್. ಬಿರೇನ್ ಸಿಂಗ್ ಮಣಿಪುರದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಇವರು 2016ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. 2017ರ ವಿಧಾನಸಭಾ ಚುನಾವಣೆಯಲ್ಲಿ 15 ವರ್ಷಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾದ ನಂತರ ಬಿಜೆಪಿ ಅವರನ್ನು ಮುಖ್ಯಮಂತ್ರಿ ಮಾಡಿತು. ಫುಟ್ಬಾಲ್ ಆಟಗಾರನಾಗಿ ವೃತ್ತಿ ಜೀವನ ಆರಂಭಿಸಿದ ಎನ್. ಬಿರೇನ್ ಸಿಂಗ್ ನಂತರ ಬಿಎಸ್‌ಎಫ್ ಸೇರಿದ್ದರು. ಕೆಲ ದಿನಕಾಲ ಪತ್ರಿಕೋದ್ಯಮವನ್ನೂ ನಿಭಾಯಿಸಿ ಈಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ಬಿಜೆಪಿ ದೊಡ್ಡ ಗೆಲುವು ಸಾಧಿಸಿತು.

English summary
BJP and Congress politics have always been against each other. But four BJP chief ministers have been in Congress in the past. Look at the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X