ರಾಹುಲ್ ಗೆ 'ಪಪ್ಪು' ಎಂದಿದ್ದಕ್ಕೆ ಕೆಲಸ ಕಳೆದುಕೊಂಡ ಕಾಂಗ್ರೆಸ್ ನಾಯಕ!

By: ವಿಕಾಸ್ ನಂಜಪ್ಪ
Subscribe to Oneindia Kannada

ಮೀರತ್ (ಉ.ಪ್ರ.), ಜೂನ್ 14: ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡನೊಬ್ಬ ರಾಹುಲ್ ಗಾಂಧಿ, ಮಧ್ಯಪ್ರದೇಶದ ಮಂಡ್ಸೌರ್ ಗೆ ಭೇಟಿ ನೀಡಿದ ಬಗ್ಗೆ ಮಾತನಾಡುತ್ತ ಅವರನ್ನು ಪಪ್ಪು ಎಂದು ಕರೆದಿರುವುದು ಕಾಂಗ್ರೆಸ್ ನ ಹೈಕಮಾಂಡ್ ಪಾಳೆಯಕ್ಕೆ ಇರಿಸುಮುರಿಸುಂಟು ಮಾಡಿದೆ. ಪಪ್ಪು ಎಂದು ಕರೆದಿದ್ದಕ್ಕೆ ಆ ಕಾಂಗ್ರೆಸ್ ಮುಖಂಡ ತೆತ್ತ ಬೆಲೆ, ಆತನ ಕೆಲಸ!

ಮೀರತ್ ನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ಪ್ರಧಾನ್ ಹೀಗೆ ಕೆಲಸ ಕಳೆದುಕೊಂಡ ನತದೃಷ್ಟ! ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ವಾಟ್ಸ್ ಆಪ್ ಗ್ರೂಪ್ ವೊಂದರಲ್ಲಿ ಅವರು ರಾಹುಲ್ ಅವರನ್ನ್ನು ಪಪ್ಪು ಎಂದು ಸಂಬೋಧಿಸಿದ್ದರು.

Congress leader was removed for praising 'Pappu' on Mandsaur

ಪಕ್ಷದ ಹಿರಿಯರ ಕುರಿತು ತುಚ್ಛವಾಗಿ ಮಾತನಾಡುವುದೂ ಪಕ್ಷ ವಿರೋಧಿ ಚಟುವಟಿಕೆ ಎಂದಿರುವ ಹೈಕಮಾಂಡ್ ಅವರನ್ನು ಕೆಲಸದಿಂದ ದತೆಗೆದಿದೆ. ಆದರೆ ನಾನು ಹಾಗೆ ಮೆಸೇಜ್ ಮಾಡಿರಲೇ ಇಲ್ಲ. ಇದು ಯಾರೋ ಬೇಕೆಂದೇ ಮಾಡಿರುವ ಕೃತ್ಯ ಎಂದು ಪ್ರಧಾನ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a bid to praise Congress vice-president Rahul Gandhi, a Congress leader from Uttar Pradesh put out messages on the social media hailing his visit to Mandsaur. However he went on to refer to Rahul as 'pappu' and in the bargain lost his job in the Congress.
Please Wait while comments are loading...