ಅವನೊಬ್ಬ ಬಫೂನ್, ಅವನು ವಿಧೂಶಕ ಎಂದು ಕಟೀಲ್ ವಿರುದ್ಧ ಸಿದ್ದರಾಮಯ್ಯ ಕಿಡಿ
40% ಅರೋಪ ಯಾರ ಮೇಲಿದೆ.? ನೇರವಾಗಿ, ದಾಖಲೆಗಳೊಂದಿಗೆ ಬಿಜೆಪಿ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೂ ಕೂಡ ಇವರ ಸರ್ಕಾರ ಏನು ಕ್ರಮವನ್ನ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ದೆಹಲಿ,ಜನವರಿ30: ಅವನೊಬ್ಬ ಬಫೂನ್, ಅವನು ವಿಧೂಶಕ ಎಂದು ನಳಿನ್ ಕುಮಾರ ಕಟೀಲ್ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಸಿದ್ದರಾಮಯ್ಯ ಪುತ್ರ ಬಿಜೆಪಿ ಸೇರ್ತಾರೆ ಎಂದು ನಳಿನ್ ಕುಮಾರ ಕಟೀಲ್ ಹೇಳಿಕೆಗೆ ಕುರಿತು ದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅವನಿಗೆ ಪೊಲಿಟಿಕಲ್ ನಾಲೆಡ್ಜ್ ಇಲ್ಲ, ಅವನು ಏನೇನೋ ಮಾತಾಡ್ತಾನೆ ಅಷ್ಟೇ ಎಂದರು.
ಬಿಜೆಪಿ ರಥಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ನಾವೇನು ಬೇಡ ಅಂತ ಹೇಳಿಲ್ಲ. ಅವರು ರಥಯಾತ್ರೆ ಮಾಡ್ಲಿ, ಏನು ಸಮಸ್ಯೆ ಇಲ್ಲ. ಜನತೀರ್ಮಾನ ಮಾಡುತ್ತಾರೆ. ಜನ ಆಶೀರ್ವಾದ ಮಾಡದೆ ಇದ್ರೆ ಯಾವ ಪೊಲಿಟಿಕಲ್ ಪಾರ್ಟಿ ಸಹ ಅಧಿಕಾರಕ್ಕೆ ಬರೋಲ್ಲ. ಜೆಡಿಎಸ್ ವಿಚಾರ ಅವರಿಗೆ ಬಿಟ್ಟಿದ್ದು, ಅವರ ಫ್ಯಾಮಿಲಿ ವಿಷ್ಯ, ನಾನು ಮಾತಾಡೋಲ್ಲ ಎಂದು ಹೇಳಿದರು.

ಕೋಲಾರದಿಂದ ಸಿದ್ದರಾಮಯ್ಯ ವಾಪಸ್ ಹೋಗ್ತಾರೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕೋಲಾರದಿಂದ ನಾನು ಹೋಗ್ತೀನಿ ಅಂತ ಅವರ್ಯಾಕೆ ಹೇಳ್ತಾರೆ. ನಾನು ಹೇಳ್ಬೇಕು ಏನ್ ಮಾಡ್ತಿನೀ ಅಂತ ಅವರು ಹೆಂಗೆ ಹೇಳ್ತಾರೆ, ನಾನು ಎಲ್ಲಿ ನಿಲ್ತಿನಿ ಅಂತ ನಾನು ಹೇಳ್ಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಏಟಿಎಂ ಎಂದು ಅಮಿತ್ ಶಾ ಹೇಳಿಕೆಗೆ ಮಾತನಾಡಿದ ಅವರು, 40% ಅರೋಪ ಯಾರ ಮೇಲಿದೆ.? ನೇರವಾಗಿ, ದಾಖಲೆಗಳೊಂದಿಗೆ ಬಿಜೆಪಿ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೂ ಕೂಡ ಇವರ ಸರ್ಕಾರ ಏನು ಕ್ರಮವನ್ನ ಕೈಗೊಂಡಿಲ್ಲ. ಕರ್ನಾಟಕ ಇತಿಹಾಸದಲ್ಲಿ 40% ಕಮಿಷನ್ ಆರೋಪ ಯಾವ ಸರ್ಕಾರಕ್ಕಾದ್ರೂ ಬಂದಿತ್ತಾ? ಕಮಿಷನ್ ಆರೋಪ ಮಾಡಿ ಇವೆರೆಗೂ ಸಹ ಪ್ರಧಾನಿಗೆ ಯಾರಾದ್ರೂ ಪತ್ರ ಬರೆದಿದ್ರಾ? ಕಳೆದ ಚುನಾವಣೆಯಲ್ಲಿ ರಾಜಕೀಯ ಭಾಷಣಕ್ಕಾಗಿ ನಮ್ಮ ಸರ್ಕಾರದ ವಿರುದ್ಧ 10% ಆರೋಪ ಮಾಡಿದ್ರು. ಆದ್ರೆ ಈ ಆರೋಪಕ್ಕೆ ಯಾವುದೇ ದಾಖಲೆ ಇಲ್ಲಾ. ಆದರೆ ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪಕ್ಕೆ ಸಾಕಷ್ಟು ದಾಖಲೆ ಗಳು ಇದೆ.

ಗುತ್ತಿಗೆದಾರರ ಸಂಘದವರು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಈ ಹಿಂದಿನಿಂದಲೂ ಸಹ ತನಿಖೆಗೆ ಆಗ್ರಹ ಮಾಡ್ತಾ ಇದ್ದೇನೆ. ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ನಮ್ಮ ಅವರ ಸರ್ಕಾರದ ಎಲ್ಲಾ ಆರೋಪಗಳನ್ನ ತನಿಖೆಗೆ ನೀಡಿ. ಧಮ್ ಮತ್ತೆ ತಾಕತ್ತಿನ ಬಗ್ಗೆ ಮಾತನಾಡುವ ಸಿಎಂ ಬೊಮ್ಮಾಯಿ ಅವರಿಗೆ ಇದರಲ್ಲಿ ಯಾಕೆ ಅವ್ರ ತಾಕತ್ತು ತೋರಿಸ್ತಿಲ್ಲ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆ ಬಹಳ ಇಚ್ಛಾಶಕ್ತಿಯಿಂದ ರಾಹುಲ್ ಗಾಂಧಿ ಮಾಡಿದ್ದಾರೆ. 3750 ಕಿಲೋ ಮೀಟರ್ ನಡಿಯೋದು ಅಂದ್ರೆ ಅಷ್ಟು ಸುಲಭ ಅಲ್ಲಾ. ಅದಕ್ಕೆ ಅಷ್ಟು ಇಚ್ಚಾ ಶಕ್ತಿ ಬೇಕು.
ಇವೆಲ್ಲವೂ ಸಹ ರಾಹುಲ್ ಗಾಂಧಿಗೆ ಇದೆ. ಬಿಜೆಪಿ ಸರ್ಕಾರದಿಂದ ಜನ ಆತಂಕದಲ್ಲಿ ಇದ್ದಾರೆ. ಸಂವಿಧಾನ ಬದಲು ಮಾಡ್ತೀವಿ ಅಂತ ಹೇಳ್ತಾರೆ. ಹಿಂದೂ ರಾಜಕಾರಣ ತುಂಬಾ ಮಾಡ್ತೀವಿ ಅಂತಾರೆ ಅದು ಅಪಾಯಕಾರಿ. ಹಿಂದೂ ರಾಷ್ಟ್ರ ಮಾಡ್ತೀವಿ, ಹಿಂದುತ್ವ ದೇಶ ಮಾಡ್ತೀವಿ ಅಂತ ಹೇಳ್ತಾರೆ. ಇವೆಲ್ಲಾ ದೇಶಕ್ಕೆ ಅಪಾಯಕಾರಿಯಾಗಿದೆ. ದೇಶದ ಜನ, ಅಲ್ಪಸಂಖ್ಯಾತರೂ ಎಲ್ಲರೂ ಸಹ ಬಹಳ ಆತಂಕದಲ್ಲಿಯೇ ಇದ್ದಾರೆ ಎಂದು ಹೇಳಿದರು.












Click it and Unblock the Notifications