ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಣಯ ತೆಗೆದುಕೊಂಡ ಕಾಂಗ್ರೆಸ್

By Sachhidananda Acharya
|
Google Oneindia Kannada News

ನವದೆಹಲಿ, ಮಾರ್ಚ್ 17: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನ ಮೂರು ದಿನಗಳ 84ನೇ ಮಹಾಧಿವೇಶನದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ (ಇವಿಎಂ)ಗಳ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ ಮಾಡುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕಾಂಗ್ರೆಸ್ ತೆಗೆದುಕೊಂಡ ರಾಜಕೀಯ ನಿರ್ಣಯದಲ್ಲಿ, "ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಯನ್ನು ನಡೆಸಲು ಸಾಂವಿಧಾನಿಕ ಹಕ್ಕನ್ನು ಹೊಂದಿದೆ. ಮತ್ತು ಚುನಾವಣಾ ವ್ಯವಸ್ಥೆಯ ಬಗ್ಗೆ ಜನರ ಸಮಗ್ರ ನಂಬಿಕೆಯನ್ನು ಉಳಿಸಿಕೊಳ್ಳಲು ಮತದಾನ ಮತ್ತು ಎಣಿಕೆಯ ಪ್ರಕ್ರಿಯೆ ಎರಡೂ ಪಾರದರ್ಶಕವಾಗಿರಬೇಕು," ಎಂದು ಹೇಳಲಾಗಿದೆ.

ದೇಶಕ್ಕೆ ಕಾಂಗ್ರೆಸ್ ಮಾತ್ರ ದಾರಿ ತೋರಬಲ್ಲದು: ರಾಹುಲ್ದೇಶಕ್ಕೆ ಕಾಂಗ್ರೆಸ್ ಮಾತ್ರ ದಾರಿ ತೋರಬಲ್ಲದು: ರಾಹುಲ್

Congress hints at possible alliance for 2019

ಜನಪ್ರಿಯ ತೀರ್ಪಿಗೆ ವಿರುದ್ಧವಾದ ಫಲಿತಾಂಶಗಳನ್ನು ಪಡೆಯಲು ಇವಿಎಂಗಳನ್ನು ದುರುಪಯೋಗಪಡಿಸಿಕೊಳ್ಳುವ ಆತಂಕ ರಾಜಕೀಯ ಪಕ್ಷಗಳಿಗೆ ಮತ್ತು ಜನರಿಗೆ ಇದೆ. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಈ ಹಿಂದಿನ ಬ್ಯಾಲೆಟ್ ಪೇಪರ್ ಬಳಕೆಗೆ ಮರಳಬೇಕು ಎಂದು ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗನ್ನು ಒತ್ತಾಯಿಸುತ್ತದೆ ಎಂಬ ನಿರ್ಣಯವನ್ನು ಮಹಾಧಿವೇಶನದಲ್ಲಿ ತೆಗೆದುಕೊಳ್ಳಲಾಯಿತು.

Congress hints at possible alliance for 2019

ಇದೇ ವೇಳೆ 2019 ರ ಚುನಾವಣೆಯಲ್ಲಿ ಬಿಜೆಪಿ-ಆರ್ ಎಸ್ಎಸ್ ಅನ್ನು ಸೋಲಿಸಲು ಒಂದೇ ಮನಸ್ಥಿತಿಯ ಪಕ್ಷಗಳ ಸಹಕಾರ ಪಡೆದುಕೊಳ್ಳಲು ಕಾಂಗ್ರೆಸ್ ನಿರ್ಣಯ ಕೈಗೊಂಡಿದೆ.

English summary
In its resolution, the Congress called upon the election commission to revert to the old practice of paper ballots to ensure the credibility of the electoral process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X