ಕಾಂಗ್ರೆಸ್ ಕೈಯಲ್ಲಿ ಮುಸ್ಲಿಮರ ರಕ್ತದ ಕಲೆ: ಸಲ್ಮಾನ್ ಖುರ್ಷಿದ್
ಅಲಿಗಡ, ಏಪ್ರಿಲ್ 24: ಕಾಂಗ್ರೆಸ್ ಕೈಗಳಿಗೆ ಮುಸ್ಲಿಮರ ರಕ್ತದ ಕಲೆಗಳು ಅಂಟಿಕೊಂಡಿವೆ ಎಂದು ಹೇಳಿಕೆ ನೀಡುವ ಮೂಲಕ ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದಾರೆ.
ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮರ ರಕ್ತದ ಕಲೆಗಳನ್ನು ಕಾಂಗ್ರೆಸ್ ತನ್ನ ಕೈಗಳಿಂದ ಹೇಗೆ ಸ್ವಚ್ಛಗೊಳಿಸಿಕೊಳ್ಳಲಿದೆ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡುವಾಗ ಈ ಹೇಳಿಕೆ ನೀಡಿದರು.
ಇದು ರಾಜಕೀಯ ಪ್ರಶ್ನೆ. ನಮ್ಮ ಕೈಗಳಲ್ಲಿ ರಕ್ತದ ಕಲೆಗಳಿವೆ. ನಾನೂ ಕಾಂಗ್ರೆಸ್‌ನ ಭಾಗ. ಹಾಗಾಗಿ ಹೇಳುತ್ತೇನೆ, ನಮ್ಮ ಕೈಗಳಲ್ಲಿ ರಕ್ತದ ಕಲೆಗಳಿವೆ. ಈ ಕಾರಣಕ್ಕೆ ನಿಮ್ಮ ಮೇಲೆ ಯಾರಾದರೂ ದಾಳಿ ಮಾಡಿದಾಗ ನಾವು ನಿಮ್ಮನ್ನು ರಕ್ಷಿಸಲು ಬರಬಾರದು ಎಂದು ಹೇಳುತ್ತೀರಾ? ಎಂದು ಕೇಳಿದರು.

ನಮ್ಮ ಕೈಗಳಲ್ಲಿನ ರಕ್ತದ ಕಲೆಗಳನ್ನು ನಿಮಗೆ ತೋರಿಸಲು ಸಿದ್ಧರಿದ್ದೇವೆ. ಏಕೆಂದರೆ ನಿಮ್ಮ ಕೈಗಳಲ್ಲಿಯೂ ರಕ್ತ ಅಂಟಿಕೊಳ್ಳಲು ಅವಕಾಶ ನೀಡಬಾರದು ಎಂಬುದು ನಿಮಗೆ ಅರ್ಥವಾಗಬೇಕು. ನೀವೂ ಅವರ ಮೇಲೆ ದಾಳಿ ಮಾಡಿದರೆ, ನಿಮ್ಮ ಕೈಗಳಿಗೇ ರಕ್ತ ಅಂಟಿಕೊಳ್ಳುತ್ತದೆ ಎಂದು ಖುರ್ಷಿದ್ ಹೇಳಿದರು.












Click it and Unblock the Notifications