ಕಾಂಗ್ರೆಸ್ ಅಹಂಕಾರ ಬಹಿರಂಗ: ರಾಷ್ಟ್ರಪತಿಗಳಿಗೆ ಸೋನಿಯಾ ಗಾಂಧಿ 'ಬಡ ಮಹಿಳೆ' ಟೀಕೆ, ಆಕ್ರೋಶ
2025ರ ಬಜೆಟ್ ಅಧಿವೇಶ ಜನವರಿ 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ ಜಂಟಿ ಅಧಿವೇಶನ ಉದ್ದೇಶಿಸಿ ಪರಿಣಾಮಕಾರಿಯಾಗಿ ಭಾಷಣ ಮಾಡುವ ಮೂಲಕ ಆರಂಭವಾಗಿದೆ. ಆದರೆ ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ ರಾಷ್ಟ್ರಪತಿಗಳನ್ನು 'ಪಾಪದ ಮಹಿಳೆ' ಎಂದು ಕರೆಯುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ಬಳಿಕ ಭಾಷಣ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ್ದ ಸೋನಿಯಾ, "ರಾಷ್ಟ್ರಪತಿಗಳು ಸಂಪೂರ್ಣವಾಗಿ ದಣಿದಿದ್ದರು. ಪಾಪದ ಮಹಿಳೆ, ಅವರು ಮಾತನಾಡಲು ಕಷ್ಟಪಡುತ್ತಿದ್ದರು" ಎಂದು ಹೇಳಿದ್ದರು.

ಸೋನಿಯಾ ಗಾಂಧಿ ಹೇಳಿಕೆಯನ್ನು ರಾಷ್ಟ್ರಪತಿ ಭವನವು ತೀವ್ರವಾಗಿ ಖಂಡಿಸಿದೆ. ರಾಷ್ಟ್ರಪತಿಗಳ ಘನತೆಯನ್ನು ಅಗೌರವಿಸಲಾಗಿದೆ ಎಂದು ಕಛೇರಿ ಹೇಳಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಲ್ಪಸಂಖ್ಯಾತ ಸಮುದಾಯ ಮತ್ತು ರೈತರ ಪ್ರತಿನಿಧಿ, ಅವರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಕಾಳಜಿ ಹೊಂದಿದ್ದಾರೆ ಅಂತಹ ಬದ್ಧತೆ ಎಂದಿಗೂ ದಣಿಯುವುದಿಲ್ಲ ಎಂದು ಹೇಳಿದೆ.
ಪ್ರಧಾನಿ ಮೋದಿ ಪ್ರತಿಕ್ರಿಯೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಸೋನಿಯಾ ಗಾಂಧಿ ಹೇಳಿಕೆಯನ್ನು ಟೀಕಿಸಿದ್ದಾರೆ. ಇದು ದೇಶದ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿ ಮತ್ತು ಸಾಮಾನ್ಯ ಮಹಿಳೆಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.
"ಕಾಂಗ್ರೆಸ್ ರಾಜ ಮನೆತನದ ಕುಟುಂಬ ಈಗ ಬಹಿರಂಗವಾಗಿ ರಾಷ್ಟ್ರಪತಿಗಳನ್ನು ಅಗೌರವಿಸುತ್ತಿದೆ", ಸೋನಿಯಾ ಗಾಂಧಿ ಅವರ ಹೇಳಿಕೆ ಆದಿವಾಸಿ ಸಮಯದಾಯದ ಬಗ್ಗೆ ಇರುವ ಪಕ್ಷದ ತಿರಸ್ಕಾರವನ್ನು ಬಹಿರಂಗ ಮಾಡಿದೆ ಎಂದು ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಆದಿವಾಸಿಗಳಿಗೆ ಅಗೌರವ ಇತಿಹಾಸ
ಸೋನಿಯಾ ಗಾಂಧಿ ಹೇಳಿಕೆ
ಆದಿವಾಸಿ ಸಮಯದಾಯಗಳು, ಸಾಮಾನ್ಯ ಹಿನ್ನಲೆಯಿಂದ ಬಂದ ವ್ಯಕ್ತಿಗಳ ಕುರಿತು ಕಾಂಗ್ರೆಸ್ ಪಕ್ಷದ ದೀರ್ಘ ಕಾಲದ ಪೂರ್ವಾಗ್ರಹಗಳನ್ನು ಸೋನಿಯಾ ಗಾಂಧಿ ಹೇಳಿಕೆ ಬಹಿರಂಗ ಮಾಡಿದೆ. ದೇಶದ ಅತ್ಯುನ್ನತ ಸ್ಥಾನದಲ್ಲಿ ಒಬ್ಬ ಆದಿವಾಸಿ ಮಹಿಳೆ ಇರುವುದು ವಂಶಪಾರಂಪರ್ಯ ರಾಜಕಾರಣದಿಂದ ಭಾರತ ದೂರವಾಗುತ್ತಿರುವುದಕ್ಕೆ ಕಾಂಗ್ರೆಸ್ ಅಸಮಾಧಾನ, ಪಕ್ಷ ಇದನ್ನು ಸಹಿಸಿಕೊಳ್ಳಲು ಕಷ್ಟಪಡುತ್ತಿದೆ ಎಂಬುದನ್ನು ತೋರಿಸುತ್ತದೆ.
ಆದಿವಾಸಿಗಳನ್ನು ನಿರ್ಲಕ್ಷ್ಯ ಮಾಡುವ, ಅವರನ್ನು ಜನ ನಾಯಕ ಎಂದು ಒಪ್ಪಿಕೊಳ್ಳದ, ಸಮಯದಾಯದ ಕಲ್ಯಾಣ ಯೋಜನೆಗಳನ್ನು ದುರ್ಬಲಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಇತಿಹಾಸವನ್ನು ಹೊಂದಿದೆ. ಆದಿವಾಸಿಗಳ ಹಕ್ಕುಗಳ ಕುರಿತು ತಾರತಮ್ಯ ಮಾಡುವ ಪಕ್ಷದ ಮನೋಭಾವ ರಾಷ್ಟ್ರಪತಿ ಮುರ್ಮು ಅವರ ಕುರಿತು ಹೇಳಿಕೆ ಮೂಲಕ ಮತ್ತೆ ಬಹಿರಂಗವಾಗಿದೆ.
ಈ ಹಿಂದಿನ ಅಪಮಾನಗಳು
ಜುಲೈ 2024ರಲ್ಲಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಕರೆಯುವ ಮೂಲಕ ಲಿಂಗ ಆಧಾರಿತವಾಗಿ ಅಪಮಾನ ಮಾಡಿದ್ದರು. ಅವರ ಟಿಪ್ಪಣಿಗಳು ಪಕ್ಷದ ಜಮೀನ್ದಾರಿ ಮತ್ತು ಜಾತ್ಯತೀತ ದೃಷ್ಟಿಕೋನವನ್ನು ಬಹಿರಂಗಪಡಿಸಿದ್ದವು. ಇದು ಆದಿವಾಸಿ ಮಹಿಳೆ ದೇಶವನ್ನು ಮುನ್ನಡೆಸುವುದನ್ನು ಒಪ್ಪಿಕೊಳ್ಳಲು ಪಕ್ಷಕ್ಕೆ ಇರುವ ಇರುವ ಸಂಕಷ್ಟವನ್ನು ತಿಳಿಸಿತ್ತು.
ಕಾಂಗ್ರೆಸ್‌ನ ಮನಸ್ಥಿತಿ ಬಹಿರಂಗ
ರಾಷ್ಟ್ರಪತಿಗಳು ಉತ್ತಮ ಸವಲತ್ತು ಪಡೆಯುವ ಸಮುದಾಯದ ಹಿನ್ನಲೆಯಿಂದ ಬಂದಿದ್ದರೆ ಅವರ ಕುರಿತು ಕಾಂಗ್ರೆಸ್ ಹೀಗೆ ಅವಮಾನ ತೋರಿಸುತ್ತಿತ್ತೇ?. ಪಕ್ಷದ ವಂಶಪಾರಂಪರ್ಯ ಮತ್ತು ಉನ್ನತ ಮಟ್ಟದ ಮನಸ್ಥಿತಿ ಭಾರತವನ್ನು ಆದಿವಾಸಿ ನಾಯಕಿ ಪ್ರತಿನಿಧಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸೋನಿಯಾ ಗಾಂಧಿಯವರ ಹೇಳಿಕೆ ಮುರ್ಮು ಆಡಳಿತದ ಉನ್ನತ ಮಟ್ಟದ ಪ್ರಗತಿ ಮತ್ತು ಪ್ರತಿನಿಧಿಯ ಸಂಕೇತವಾಗಿ ನೋಡುವ ಕೋಟ್ಯಾಂತರ ಪರಿಶಿಷ್ಟ ಪಂಗಡದ ಜನರ ಭಾವನೆಯನ್ನು ಅವಮಾನಿಸಿದೆ. ಆಳವಾದ ಸಾಮಾಜಿಕ ಬದಲಾವಣೆಯನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಪಕ್ಷ ಸಿದ್ಧವಿಲ್ಲ ಎಂಬುದನ್ನು ಇದು ತೋರಿಸುತ್ತದೆ.












Click it and Unblock the Notifications