Get Updates
Get notified of breaking news, exclusive insights, and must-see stories!

ಸನ್ನಿ ಡಿಯೋಲ್ ಬಂಗಲೆ ಇ-ಹರಾಜು ನೋಟಿಸ್ ವಾಪಸ್: ಕಾರಣ ಏನೆಂದ ಕಾಂಗ್ರೆಸ್

ಮುಂಬೈನಲ್ಲಿರುವ ನಟ-ರಾಜಕಾರಣಿ ಸನ್ನಿ ಡಿಯೋಲ್ ಅವರ ಬಂಗಲೆಗೆ ಬ್ಯಾಂಕ್ ಆಫ್ ಬರೋಡಾ ಇ-ಹರಾಜು ನೋಟಿಸ್ ಹಿಂಪಡೆದಿರುವುದನ್ನು ಕಾಂಗ್ರೆಸ್ ಸೋಮವಾರ ಪ್ರಶ್ನಿಸಿದೆ. "24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ" ನೋಟಿಸ್ ಹಿಂಪಡೆಯಲು ಅಂತಹ "ತಾಂತ್ರಿಕ ಕಾರಣಗಳು ಏನು" ಯಾರು ಪ್ರಚೋದಿಸಿದರು ಎಂದು ಅದು ಪ್ರಶ್ನೆ ಮಾಡಿದೆ.

ಪಶ್ಚಿಮ ಮುಂಬೈನ ಜುಹುದಲ್ಲಿರುವ ಸನ್ನಿ ಡಿಯೋಲ್ ಅವರ ಬಂಗಲೆಯನ್ನು 56 ಕೋಟಿ ರೂಪಾಯಿಗಳ ಸಾಲವನ್ನು ವಸೂಲಿ ಮಾಡಲು ಬ್ಯಾಂಕ್ ಆಫ್ ಬರೋಡಾ ಈ ಹಿಂದೆ ಹರಾಜು ಮಾಡಬೇಕಿತ್ತು. ಆದಾಗ್ಯೂ, ಬ್ಯಾಂಕ್ ಈಗ "ತಾಂತ್ರಿಕ ಕಾರಣಗಳು" ಎಂದು ಕಾರಣ ನೀಡಿ ನೋಟಿಸ್ ಅನ್ನು ಹಿಂಪಡೆದಿದೆ.

Congress Drops Query as Notice for E-Auction of Sunny Deols Bungalow Withdraws

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಪ್ರಶ್ನೆ ಮಾಡಿದ್ದಾರೆ. "ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ 56 ಕೋಟಿ ರೂ. ಸಾಲ ಬಾಕಿ ಇದ್ದು, ಪಾವತಿಸದ ಕಾರಣ ಬ್ಯಾಂಕ್ ಆಫ್ ಬರೋಡಾ ಅವರ ಜುಹು ನಿವಾಸವನ್ನು ಇ-ಹರಾಜಿಗೆ ಇಟ್ಟಿರುವುದು ನಿನ್ನೆ ಮಧ್ಯಾಹ್ನ ದೇಶಕ್ಕೆ ಗೊತ್ತಾಯಿತು. ಇಂದು ಬೆಳಗ್ಗೆ 24 ಗಂಟೆಯೊಳಗೆ ಬ್ಯಾಂಕ್ ಆಫ್ ಬರೋಡಾ 'ತಾಂತ್ರಿಕ ಕಾರಣಗಳಿಂದ' ಹರಾಜು ಸೂಚನೆಯನ್ನು ಹಿಂಪಡೆದಿದೆ ಎಂದು ಗೊತ್ತಾಗಿದೆ. ಈ 'ತಾಂತ್ರಿಕ ಕಾರಣ'ಗಳನ್ನು ಪ್ರಚೋದಿಸಿದವರು ಯಾರು?" ಎಂದು ಪ್ರಶ್ನೆ ಮಾಡಿದ್ದಾರೆ.

ಆಗಸ್ಟ್ 25ರಂದು ನಡೆಯಬೇಕಿದ್ದ ಹರಾಜು

ಆಗಸ್ಟ್ 25 ರಂದು ಈ ಬಂಗಲೆ ಹರಾಜು ನಡೆಯಬೇಕಿತ್ತು, ಹರಾಜಿನ ಮೂಲಕ 56 ಕೋಟಿ ರೂಪಾಯಿ ವಸೂಲಿ ಮಾಡಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಸನ್ನಿ ಡಿಯೋಲ್ ಅವರು ಡಿಸೆಂಬರ್ 2022 ರಿಂದ ಬ್ಯಾಂಕ್‌ನ ರೂ 55.99 ಕೋಟಿ ಸಾಲವನ್ನು ಮತ್ತು ಬಡ್ಡಿ ಮತ್ತು ದಂಡವನ್ನು ಪಾವತಿಸಲು ವಿಫಲರಾಗಿದ್ದಾರೆ ಎಂದು ಬ್ಯಾಂಕ್ ಆಫ್ ಬರೋಡಾ ಭಾನುವಾರ ಸಾರ್ವಜನಿಕ ಟೆಂಡರ್‌ನಲ್ಲಿ ತಿಳಿಸಿದೆ. ಆದರೆ, ಬಂಗಲೆಯ ಹರಾಜು ನೋಟಿಸ್ ಹಿಂಪಡೆಯಲಾಗಿದೆ.

ಅಜಯ್ ಸಿಂಗ್ ಧರ್ಮೇಂದ್ರ ಡಿಯೋಲ್ ಎಂದು ಕರೆಯಲ್ಪಡುವ 65 ವರ್ಷದ ನಟ, 2019 ರಿಂದ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಆಗಿನ ಕಾಂಗ್ರೆಸ್ ನಾಯಕ ಸುನಿಲ್ ಜಾಖರ್ ಅವರನ್ನು ಸೋಲಿಸಿದ್ದರು.

ಸನ್ನಿ ಡಿಯೋಲ್ ಅವರ ಇತ್ತೀಚಿನ ಚಿತ್ರ ಗದರ್ 2 ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಆಗಸ್ಟ್ 11 ರಂದು ಬಿಡುಗಡೆಯಾದ ಸಿನಿಮಾ 300 ಕೋಟಿಗೂ ಹೆಚ್ಚು ಗಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+