ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ: ಸಮಿತಿ ಪಟ್ಟಿಯಲ್ಲಿ ಯಾರು ಯಾರಿದ್ದಾರೆ?
ನವದೆಹಲಿ, ಆಗಸ್ಟ್ 25: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿರುಸಿನ ಸಿದ್ಧತೆಗೆ ಮುಂದಾಗಿದ್ದು, ಈ ಬಾರಿಯೂ ಹಿರಿಯ ತಲೆಗಳಿಗೆ ಹೊಣೆಗಾರಿಕೆ ವಹಿಸಿದೆ.
2019ರ ಚುನಾವಣೆಗೆ ಸಂಬಂಧಿಸಿದಂತೆ ಸಮನ್ವಯ, ಪ್ರಣಾಳಿಕೆ ಮತ್ತು ಪ್ರಚಾರ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿ ಸದಸ್ಯರ ಪಟ್ಟಿಯನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅಂತಿಮಗೊಳಿಸಿದ್ದಾರೆ.
ಸಮಿತಿಗಳಲ್ಲಿ ಸೋನಿಯಾ ಗಾಂಧಿ ಅವರ ನೆಚ್ಚಿನ ನಾಯಕರ ತಂಡದ ಜತೆಗೆ ರಾಹುಲ್ ಗಾಂಧಿ ಅವರ ಆಪ್ತರೂ ಸ್ಥಾನ ಪಡೆದುಕೊಂಡಿದ್ದಾರೆ.
ಕೋಟಿ ಕಮಿಟಿಯಲ್ಲಿ 9, ಪ್ರಣಾಳಿಕೆ ಸಮಿತಿಯಲ್ಲಿ 15 ಮತ್ತು ಪ್ರಚಾರ ಸಮಿತಿಯಲ್ಲಿ 13 ಸದಸ್ಯರಿದ್ದಾರೆ.

ಪ್ರಿಯಾಂಕಾ ಹೆಸರೇ ಇಲ್ಲ
ಪಕ್ಷದ ಹಿರಿಯರಾದ ಎ.ಕೆ. ಆಂಟೋನಿ, ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್, ಪಿ. ಚಿದಂಬರಂ ಮತ್ತು ಜೈರಾಮ್ ರಮೇಶ್ ಅವರಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೀವಾಲ ಮತ್ತು ಕೆ.ಸಿ. ವೇಣುಗೋಪಾಲ್ ಅವರೂ ಸಮಿತಿಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಆದರೆ, ಕಳೆದ ಚುನಾವಣೆಯಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಹೆಸರು ಯಾವ ಸಮಿತಿಯಲ್ಲಿಯೂ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ರಾಜ್ಯದಲ್ಲಿ ಜಾಲತಾಣದ ಪ್ರಚಾರ ಹೊಣೆಗಾರಿಕೆ ವಹಿಸಿಕೊಂಡಿರುವ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಕೂಡ ಪ್ರಚಾರ ಸಮಿತಿಯಲ್ಲಿದ್ದಾರೆ.
ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿರುವ ಸಮಿತಿಗಳ ಸದಸ್ಯರ ವಿವರ ಹೀಗಿದೆ.

ಕೋರ್ ಗ್ರೂಪ್ ಸಮಿತಿ
* ಎ.ಕೆ. ಆಂಟೋನಿ
* ಗುಲಾಂ ನಬಿ ಆಜಾದ್
* ಪಿ. ಚಿದಂಬರಂ
* ಅಶೋಕ್ ಗೆಹ್ಲೋಟ್
* ಮಲ್ಲಿಕಾರ್ಜುನ ಖರ್ಗೆ
* ಅಹ್ಮದ್ ಪಟೇಲ್
* ಜೈರಾಂ ರಮೇಶ್
* ರಣದೀಪ್ ಸುರ್ಜೀವಾಲ
* ಕೆ.ಸಿ. ವೇಣುಗೋಪಾಲ್

ಪ್ರಣಾಳಿಕೆ ಸಮಿತಿ
* ಮನ್‌ಪ್ರೀತ್ ಬಾದಲ್
* ಪಿ. ಚಿದಂಬರಂ
* ಸುಷ್ಮಿತಾ ದೇವ್
* ಪ್ರೊ. ರಾಜೀವ್ ಗೌಡ
* ಭೂಪಿಂದರ್ ಸಿಂಗ್ ಹೂಡಾ
* ಜೈರಾಂ ರಮೇಶ್
* ಸಲ್ಮಾನ್ ಖುರ್ಷಿದ್
* ಬಿಂದು ಕೃಷ್ಣನ್
* ಕುಮಾರಿ ಶೆಲ್ಜಾ
* ರಘುವೀರ್ ಮೀನಾ
* ಪ್ರೊ. ಬಾಲಚಂದ್ರ ಮುಂಗೇಕರ್
* ಮೀನಾಕ್ಷಿ ನಟರಾಜನ್
* ರಜನಿ ಪಾಟೀಲ್
* ಸ್ಯಾಮ್ ಪಿತ್ರೊಡಾ
* ಸಚಿನ್ ರಾವ್

ಪ್ರಚಾರ ಸಮಿತಿ
* ಭಕ್ತ ಚರಣ್ ದಾಸ್
* ಪ್ರವೀಣ್ ಚಕ್ರವರ್ತಿ
* ಮಿಲಿಂದ್ ದೆವೊರಾ
* ಕೇಟ್ಕರ್ ಕುಮಾರ್
* ವಿ.ಡಿ. ಸತೀಶನ್
* ಆನಂದ್ ಶರ್ಮಾ
* ಜಲ್ವೀರ್ ಶೆರ್ಗಿಲ್
* ರಾಜೀವ್ ಶುಕ್ಲಾ
* ದಿವ್ಯ ಸ್ಪಂದನ
* ರಣದೀಪ್ ಸುರ್ಜೀವಾಲ
* ಮನೀಶ್ ತಿವಾರಿ
* ಪ್ರಮೋದ್ ತಿವಾರಿ












Click it and Unblock the Notifications