ವೀರ ಸಾವರ್ಕರ್ ಕಾಂಗ್ರೆಸ್ ಕಣ್ಣಿಗೆ 'ದೇಶದ್ರೋಹಿ', ಅಕಟಕಟಾ!

Posted By:
Subscribe to Oneindia Kannada

ಸ್ಯಾತಂತ್ರ್ಯ ಹೋರಾಟದಲ್ಲಿ ತನ್ನ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟ ಕೆಲವೊಂದು ಮಹಾನ್ ಪುರುಷರಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಹೆಸರು ಕೂಡಾ ಒಂದು.

ಮಹಾನ್ ವಾಗ್ಮಿ, ಲೇಖಕ, ತತ್ವಶಾಸ್ತ್ರಜ್ಞ, ಸಮಾಜಸೇವಕ, ಸ್ವಾತಂತ್ರ್ಯ ಅಂದೋಲನದ ಇತಿಹಾಸದ ಅತ್ಯಂತ ವಿವಾದಾತ್ಮಕ ವ್ಯಕ್ತಿ ಸಾವರ್ಕರ್ ಅವರಿಗೆ, ಕಾಂಗ್ರೆಸ್ 'ದೇಶದ್ರೋಹಿ'ಎನ್ನುವ ಪಟ್ಟಿಕಟ್ಟಿದೆ. (ಭಗತ್ ಕನಸಿನ ಭಾರತ ಬಿಚ್ಚಿಟ್ಟ ಮೊಮ್ಮಗ)

ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಹುತಾತ್ಮರಾದ ದಿನವಾದ ಮಾರ್ಚ್ 23ರಂದು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಭಗತ್ ಸಿಂಗ್ ಹುತಾತ್ಮ ಮತ್ತು ವೀರ ಸಾವರ್ಕರ್ ದೇಶದ್ರೋಹಿ' ಎಂದು ವಿವಾದಕಾರಿ ಟ್ವೀಟ್ ಮಾಡಿದೆ.

ಭಗತ್ ಸಿಂಗ್ ಬ್ರಿಟಿಷರನ್ನು ದೇಶ ಬಿಟ್ಟು ಹೋಗುವಂತೆ ಹೋರಾಟ ನಡೆಸಿದ್ದರೆ, ಆರ್ ಎಸ್ ಎಸ್ ಮತ್ತು ಬಿಜೆಪಿ ಸಿದ್ದಾಂತದ ಸಾವರ್ಕರ್ ಜೈಲಿನಲ್ಲಿ ತನ್ನ ಬಿಡುಗಡೆಯಾಗಿ ಬ್ರಿಟಿಷರನ್ನು ಅಂಗಲಾಚಿದ್ದರು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಭಗತ್ ಸಿಂಗ್ ಮತ್ತು ಸಾವರ್ಕರ್ ಅವರ ಭಾವಚಿತ್ರಗಳನ್ನು ಪ್ರಕಟಿಸಿ "ಮಾರ್ಟಿಯರ್ ಎಂಡ್ ಟ್ರೇಟರ್" (ಹುತಾತ್ಮರು ಮತ್ತು ದೇಶದ್ರೋಹಿಗಳು) ಎಂದು ಶೀರ್ಷಿಕೆ ನೀಡಿ ತನ್ನ 716 ಸಾವಿರ ಹಿಂಬಾಲಕರಿಗೆ ಟ್ವೀಟ್ ಮಾಡಿದೆ. (ಸಾವರ್ಕರ್ ಅಮರರಾದ ದಿನ)

ಕಾಂಗ್ರೆಸ್ ಟ್ವೀಟ್ ಮಾಡಿರುವ ಕೆಲವೊಂದು ಸ್ಯಾಂಪಲ್, ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಬ್ರಿಟಿಷರ ಅಂಗಲಾಚಿದ ಸಾವರ್ಕರ್

ಬ್ರಿಟಿಷರ ವಿರುದ್ದ ಭಗತ್ ಸಿಂಗ್ ಹೋರಾಟ ನಡಿಸಿದ್ದರೆ, ಸಾವರ್ಕರ್ ತನ್ನ ಬಿಡುಗಡೆಗಾಗಿ ಅಂಗಲಾಚಿದ್ದರು.

ಬಿಜೆಪಿ ಸಿದ್ದಾಂತದ ಸಾವರ್ಕರ್

ಬ್ರಿಟಿಷರನ್ನು ದೇಶ ಬಿಟ್ಟು ಓಡಿಸಲು ಭಗತ್ ಸಿಂಗ್ ಹೋರಾಡುತ್ತಿದ್ದರೆ, ಆರ್ ಎಸ್ ಎಸ್ ಮತ್ತು ಬಿಜೆಪಿ ಸಿದ್ದಾಂತದ ಸಾವರ್ಕರ್ ತನ್ನ ಸ್ವಾತಂತ್ರ್ಯಕ್ಕಾಗಿ ಬೇಡುತ್ತಿದ್ದರು.

ಕಾಂಗ್ರೆಸ್ ಕ್ಷಮೆಯಾಚಿಸಲಿ

ಕಾಂಗ್ರೆಸ್ ಹೇಳಿಕೆ ದೇಶಕ್ಕೆ ಮತ್ತು ಮಹಾರಾಷ್ಟ್ರಕ್ಕೆ ಮಾಡಿದ ಅವಮಾನ, ಕೂಡಲೇ ಕಾಂಗ್ರೆಸ್ ಕ್ಷಮೆಯಾಚಿಸಬೇಕು.

ಸಾವರ್ಕರ್ ಪುಸ್ತಕ

'My Transportation for Life' ಪುಸ್ತಕ ಓದಿದರೆ, ಕಾಂಗ್ರೆಸ್ ವಿವಾದಕಾರಿ ಹೇಳಿಕೆಗೆ ಉತ್ತರ ಸಿಗುತ್ತದೆ.

ಅಂಚೆಚೀಟಿ ಬಿಡುಗಡೆ ಯಾಕೆ?

ಸಾವರ್ಕರ್ ದೇಶದ್ರೋಹಿಯಾಗಿದ್ದರೆ ಅವರ ಅಂಚೆಚೀಟಿ ಯಾಕೆ ಬಿಡುಗಡೆ ಮಾಡಿದ್ದೀರಿ?

ಜವಾಹರಲಾಲ್ ನೆಹರೂ

ನಿಮ್ಮ ಪಿತಾಮಹ ಪ್ರತ್ಯೇಕ ಸಾಮ್ರಾಜ್ಯಕ್ಕಾಗಿ ಬ್ರಿಟಿಷರನ್ನು ಬೇಡಲಿಲ್ಲವೇ?

ಸಾವರ್ಕರ್ ಮತ್ತು ಕಾಂಗ್ರೆಸ್

ಸಾವರ್ಕರ್ ಮತ್ತು ಕಾಂಗ್ರೆಸ್

ಸಾವರ್ಕರ್‌ ಚಿತ್ರದ ಕೆಳಗೆ ಅಂಡಮಾನ್ ಜೈಲಿನಲ್ಲಿದ್ದಾಗ ಬ್ರಿಟಿಷ್ ಸರ್ಕಾರಕ್ಕೆ ಬರೆದಿದ್ದಾರೆ ಎನ್ನಲಾದ ಅರ್ಜಿಯನ್ನು ಪ್ರಕಟಿಸಿರುವ ಕಾಂಗ್ರೆಸ್, ಭಗತ್ ಸಿಂಗ್ ಬ್ರಿಟಿಷರ ವಿರುದ್ಧ ಸಮರ ಸಾರಿ ಹುತಾತ್ಮನಾದರೆ, ಸಾರ್ವಕರ್ ದಯಾಭಿಕ್ಷೆ ಬೇಡಿ ದೇಶದ್ರೋಹಿ ಎನಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A tweet on the Indian National Congress` official Twitter handle @INCIndia has called right wing ideologue Vinayak Damodar Savarkar a `traitor` while celebrating the martyrdom of Bhagat Singh.
Please Wait while comments are loading...