ಅಜ್ಞಾತ ಮೂಲಗಳಿಂದ ರಾಜಕೀಯ ಪಕ್ಷಗಳಿಗೆ 11 ಸಾವಿರ ಕೋಟಿ ಹಣ!

Posted By:
Subscribe to Oneindia Kannada

ನವದೆಹಲಿ, ಜನವರಿ 25: ರಾಜಕೀಯ ಪಕ್ಷಗಳಿಗೆ ಅನಾಮಧೇಯ ಅಥವಾ ಅಜ್ಞಾತ ಮೂಲಗಳಿಂದ ಹಣ ಹರಿದು ಬರುತ್ತದೆ ಎಂಬ ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಇದಕ್ಕೆ ಕಡಿವಾಣ ಹಾಕುವ ಬಗ್ಗೆಯೂ ಆಗಾಗ ಚರ್ಚೆಗಳು ನಡೆಯುತ್ತವೆ.

ಈ ನಿಟ್ಟಿನಲ್ಲಿ ದೆಹಲಿ ಮೂಲದ ಚಿಂತಕರ ಚಾವಡಿ ಅಸೋಸಿಯೇಷನ್ಸ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಸಂಸ್ಥೆಯು 2004ರಿಂದ 2015ರವರೆಗೆ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಹರಿದು ಬಂದಿರುವ ಹಣದ ಬಗ್ಗೆ ದೀರ್ಘವಾದ ಸಂಶೋಧನೆ ನಡೆಸಿದ್ದು, ಅದರ ವಿವರಗಳನ್ನು ಬಿಡುಗಡೆ ಮಾಡಿದೆ.

Congress and BJP recieve 7,000 crores Rupees from unknown sources

ಈ ಅವಧಿಯಲ್ಲಿ ರಾಷ್ಟ್ರೀಯ ಹಾಗೂ ವಿವಿಧ ರಾಜಕೀಯ ಪಕ್ಷಗಳು ಸಾವಿರಾರು ಕೋಟಿ ರು.ಗಳನ್ನು ದೇಣಿಗೆ ರೂಪದಲ್ಲಿ ಪಡೆದಿದ್ದರೂ, ಇದರಲ್ಲಿ ಬಹುಪಾಲು ಮೊತ್ತ ಪತ್ತೆಯಾಗದ ಮೂಲಗಳಿಂದ ಬಂದಿರುವುದು ಸ್ಪಷ್ಟವಾಗಿದೆ. ಅದರಂತೆ, ಈ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 3,329 ಕೋಟಿ ರು. ದುಡ್ಡು ಹರಿದು ಬಂದಿದ್ದು, ಇದರ ಶೇ. 85 ಭಾಗ, ಅನಾಮಧೇಯ ಮೂಲಗಳದ್ದು.

ಇನ್ನು, ದೇಶದ ಮತ್ತೊಂದು ಪ್ರಮುಖ ರಾಷ್ಟ್ರೀಯ ಪಕ್ಷ ಬಿಜೆಪಿ ಇದೇ ಅವಧಿಯಲ್ಲಿ 2,125 ಕೋಟಿ ರು.ಗಳನ್ನು ಸ್ವೀಕರಿಸಿದ್ದು, ಇದರಲ್ಲಿ ಶೇ. 65ರಷ್ಟು ಹಣ ಅಜ್ಞಾತ ಮೂಲಗಳಿಂದ ಹರಿದು ಬಂದದ್ದು ಎಂದು ಎಡಿಆರ್ ವಿವರಿಸಿದೆ.

ಇನ್ನು, ಮೇಲೆ ತಿಳಿಸಿದ 10 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ದೇಣಿಗೆ ಪಡೆದ ಪ್ರಾದೇಶಿಕ ಪಕ್ಷವಾಗಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಹೊರಹೊಮ್ಮಿದೆ. ಆ ಅವಧಿಯಲ್ಲಿ ಆ ಪಕ್ಷ 819.1 ಕೋಟಿ ರು. ಗಳಿಸಿದೆ. ಸಮಾಜವಾದಿ ಪಕ್ಷದ ಆನಂತರದ ಸ್ಥಾನ ತಮಿಳುನಾಡಿನ ಡಿಎಂಕೆ ಪಕ್ಷ (819.1 ಕೋಟಿ ರು.) ಹಾಗೂ ತೃತೀಯ ಸ್ಥಾನ ಎಐಡಿಎಂಕೆ (165.01 ಕೋಟಿ ರು.) ಪಕ್ಷದ್ದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi-based think-tank Association for Democratic Reforms (ADR) think tank reveals that Congress, BJP together recieved donations more than 7,000 crores of rupees from unknown sources.
Please Wait while comments are loading...