ಭಾರತ-ಚೀನಾ ಘರ್ಷಣೆ ಬಗ್ಗೆ ಮೋದಿಗೆ ಕಾಂಗ್ರೆಸ್ಸಿನ 7 ಪ್ರಶ್ನೆಗಳು
ನವದೆಹಲಿ, ಡಿಸೆಂಬರ್ 17: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ 7 ಪ್ರಶ್ನೆಗಳನ್ನು ಹಾಕಿದೆ.
ಕಳೆದ ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದಲ್ಲಿ ನಡೆದ ಭಾರತ-ಚೀನಾ ಘರ್ಷಣೆಗೆ ಸಂಬಂಧಿಸಿದಂತೆ ಸ್ಪಷ್ಟನೆಗಳನ್ನು ನೀಡುವ ಜವಾಬ್ದಾರಿಯನ್ನು ಪ್ರಧಾನಿ ಮೋದಿಯವರ ಮೇಲೆ ಹೊರಿಸಿರುವ ಕಾಂಗ್ರೆಸ್, ಶನಿವಾರ ಅವರಿಗೆ ಏಳು ಪ್ರಶ್ನೆಗಳನ್ನು ಕೇಳಿದೆ. ಜೈಪುರದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ 'ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ' ಎಂದು ಹೇಳಿದ ಒಂದು ದಿನದ ನಂತರ ಪ್ರಶ್ನೆಗಳನ್ನು ಹಾಕಿದ್ದು, ಕೇಂದ್ರ ಸರ್ಕಾರ ಮಾತ್ರ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದೆ.
ಇತ್ತೀಚಿನ ಬೆಳವಣಿಗೆಯಲ್ಲಿ ಸಂವಹನಗಳ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವಿಟರ್‌ನಲ್ಲಿ ತಮ್ಮ ಪಕ್ಷದ ಕಳವಳ ವ್ಯಕ್ತಪಡಿಸಿದರು. "ಜವಾಬ್ ದೋ, ಪ್ರಧಾನ ಮಂತ್ರಿ," ಎಂದು ಅವರು ಕಾಂಗ್ರೆಸ್ ಪಕ್ಷದ ಪ್ರಶ್ನೆಗಳನ್ನು ಲಗತ್ತಿಸಿ ಬರೆದಿದ್ದಾರೆ. ಈ ಮುಸುಕಿನ ಗುದ್ದಾಟದಲ್ಲಿ, ಕಾಂಗ್ರೆಸ್ ನಾಯಕರು ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಲಾಗಿದೆ. "ಈ ಏಳು ಪ್ರಶ್ನೆಗಳ ಬಗ್ಗೆ ಮನ್ ಕಿ ಬಾತ್ ನೀಡುವುದು ಪ್ರಧಾನಿಯ ರಾಜಕೀಯ ಕರ್ತವ್ಯ ಮತ್ತು ನೈತಿಕ ಜವಾಬ್ದಾರಿಯಾಗಿದೆ. ಈ ಬಗ್ಗೆ ರಾಷ್ಟ್ರವು ತಿಳಿದುಕೊಳ್ಳಲು ಬಯಸುತ್ತದೆ," ಎಂದು ಜೈರಾಮ್ ರಮೇಶ್ ಉಲ್ಲೇಖಿಸಿದ್ದಾರೆ.
Don’t deflect, distract and divert by getting your drum beaters to attack a man who has walked 20-25 kms a day, listening to the pain, hope and aspirations of the people of India for the past 100 days. Jawaab Do, Pradhan Mantri @narendramodi pic.twitter.com/K2lVvWVv60
— Jairam Ramesh (@Jairam_Ramesh) December 17, 2022
ಪ್ರಧಾನಿಗೆ ಕಾಂಗ್ರೆಸ್ ಕೇಳಿದ 7 ಪ್ರಶ್ನೆಗಳಾವವು?:
* ಜೂನ್ 20, 2020ರಂದು ಪೂರ್ವ ಲಡಾಖ್‌ನಲ್ಲಿ ಚೀನಾದಿಂದ ಭಾರತದ ಭೂಪ್ರದೇಶಕ್ಕೆ ಯಾವುದೇ ಆಕ್ರಮಣ ನಡೆದಿಲ್ಲ ಎಂದು ನೀವು ಏಕೆ ಹೇಳಿದ್ದೀರಿ?
* ಮೇ 2020ರ ಮೊದಲು ನಾವು ನಿಯಮಿತವಾಗಿ ಗಸ್ತು ತಿರುಗುತ್ತಿದ್ದ ಪೂರ್ವ ಲಡಾಖ್‌ನಲ್ಲಿ ಸಾವಿರಾರು ಚದರ ಕಿಲೋಮೀಟರ್‌ಗಳನ್ನು ಪ್ರವೇಶಿಸದಂತೆ ನಮ್ಮ ಸೈನ್ಯವನ್ನು ತಡೆಯಲು ನೀವು ಚೀನಿಯರಿಗೆ ಏಕೆ ಅನುಮತಿಸಿದ್ದೀರಿ?
* ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ಅನ್ನು ಸ್ಥಾಪಿಸಲು 17 ಜುಲೈ 2013 ರಂದು ಕ್ಯಾಬಿನೆಟ್ ಅನುಮೋದಿಸಿದ ಯೋಜನೆಯನ್ನು ನೀವು ಏಕೆ ಕೈಬಿಟ್ಟಿದ್ದೀರಿ?
* PM CARES ನಿಧಿಗೆ ಕೊಡುಗೆ ನೀಡಲು ನೀವು ಚೀನಾದ ಕಂಪನಿಗಳಿಗೆ ಏಕೆ ಅವಕಾಶ ನೀಡಿದ್ದೀರಿ?

* ಕಳೆದ ಎರಡು ವರ್ಷಗಳಲ್ಲಿ ದಾಖಲೆಯ ಮಟ್ಟಕ್ಕೆ ಜೂಮ್ ಮಾಡಲು ನೀವು ಚೀನಾದಿಂದ ಆಮದುಗಳನ್ನು ಏಕೆ ಅನುಮತಿಸಿದ್ದೀರಿ?
* ಗಡಿ ಪರಿಸ್ಥಿತಿ ಮತ್ತು ಚೀನಾದಿಂದ ನಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಬಾರದು ಎಂದು ಏಕೆ ಒತ್ತಾಯಿಸುತ್ತಿದ್ದೀರಿ?
* ನೀವು 18 ಬಾರಿ ಚೀನಾದ ಉನ್ನತ ನಾಯಕರನ್ನು ಭೇಟಿ ಮಾಡಿದ್ದೀರಿ ಮತ್ತು ಇತ್ತೀಚೆಗೆ ಬಾಲಿಯಲ್ಲಿ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಹಸ್ತಲಾಘವ ಮಾಡಿದ್ದೀರಿ. ಇದಾದ ಕೆಲವೇ ದಿನಗಳಲ್ಲಿ ಚೀನಾ ತವಾಂಗ್‌ಗೆ ಅತಿಕ್ರಮಣವನ್ನು ಪ್ರಾರಂಭಿಸಿತು ಮತ್ತು ಏಕಪಕ್ಷೀಯವಾಗಿ ಗಡಿ ಪರಿಸ್ಥಿತಿಯನ್ನು ಬದಲಾಯಿಸುವುದನ್ನು ಮುಂದುವರೆಸಿತು. ನೀವು ದೇಶವನ್ನು ಏಕೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ?












Click it and Unblock the Notifications