ಕಾಂಗ್ರೆಸ್ ಪ್ರಚಾರ ಸಾರಥಿ ರಾಹುಲ್ ಗಾಂಧಿ ಅಲ್ಲ

ಒಂದೇ ಏಟಿಗೆ ಎಂಬಂತೆ ಟೈಮ್ಸ್ ನೌ ಗೆ ನೀಡಿದ್ದ ಸಂದರ್ಶನದ ಮೂಲಕ ರಾಹುಲ್ ಗಾಂಧಿ ಇನ್ನೂ ಅಪಕ್ವ ಎಂಬುದು ಸಾಬೀತಾಗಿತ್ತು. ಅದನ್ನು ಮನಗಂಡ ಕಾಂಗ್ರೆಸ್ ಪಕ್ಷವು ಮೂರೇ ವಾರಗಳಲ್ಲಿ ರಾಹುಲ್ ಗಾಂಧಿಯನ್ನು ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಅವರ ತಾಯಿ ಸೋನಿಯಾ ಗಾಂಧಿ ಕೈಗೆ ಪಕ್ಷದ ಹೊಣೆಗಾರಿಕೆಯನ್ನು ನೀಡಿದೆ.
ಸಮಿತಿಯಲ್ಲಿ ರಾಹುಲ್ ಯುವ ಪಡೆಗೂ ಸಂಚಕಾರ ಬಂದಿದೆಯಾದರೂ ಕರ್ನಾಟಕದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಅವರು ಸಮಿತಿಯಲ್ಲಿದ್ದಾರೆ.
ಪಕ್ಷವು ಮಂಗಳವಾರ ಈ ಅನರೀಕ್ಷಿತ ಬದಲಾವಣೆ ಮಾಡಿದೆ. ಆದರೆ ರಾಹುಲ್ ಅವರನ್ನು ಸಂಪೂರ್ಣವಾಗಿ ಕೈಬಿಡದೆ ಸಮಿತಿಯ ಸಹ ಅಧ್ಯಕ್ಷನನ್ನಾಗಿ ಮುಂದುವರಿಸಿದೆ. ತನ್ಮೂಲಕ ಪಕ್ಷವು ಈಗ ಅಮ್ಮ-ಮಗನ ಸಾರಥ್ಯದಲ್ಲಿ ಮುಂದುವರಿಯಲಿದೆ.
ಗಮನಾರ್ಹವೆಂದರೆ ಈ ಮೂರ್ನಾಲ್ಕು ವಾರಗಳಲ್ಲಿ ಪಕ್ಷವು ರಾಹುಲ್ ಗಾಂಧಿ ಅವರನ್ನೇ ಪ್ರಧಾನವಾಗಿಟ್ಟುಕೊಂಡು ಜಾಹೀರಾತುಗಳನ್ನು ಹೊರತಂದಿದ್ದವು. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಸಡ್ಡು ಹೊಡೆಯಲು ರಾಹುಲ್ ಅವರನ್ನು ಬಿಂಬಿಸಲಾಗಿತ್ತು.
ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಪಕ್ಷದ ಕೆಲ ಹಿರಿಯರನ್ನೊಳಗೊಂಡ 50 ಸದಸ್ಯರ ಬೃಹತ್ ಪಡೆ ಸಮಿತಿ ಚುನಾವಣಾ ಪ್ರಚಾರದ ಹೊಣೆ ಹೊತ್ತಿದೆ. ಸಮಿತಿಯಲ್ಲಿ ಹಾಲಿ ಮುಖ್ಯಮಂತ್ರಿಗಳು ಯಾರೂ ಇಲ್ಲವಾದರೂ ಮಾಜಿ ಸಿಎಂ ಗಳಾದ ಅಶೋಕ್ ಗೆಹ್ಲೋಟ್ ಮತ್ತು ಶೀಲಾ ದೀಕ್ಷಿತ್ ಅವರು ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.


Click it and Unblock the Notifications
