ಬಿಜೆಪಿ-ಕಾಂಗ್ರೆಸ್ ಒಂದೇ; ಎಂದೂ ಟಿಕೆಟ್ ಕೇಳಿಲ್ಲ : ಹಾರ್ದಿಕ್ ಆಕ್ರೋಶ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಅಹಮದಾಬಾದ್, ನವೆಂಬರ್ 22: ಕಾಂಗ್ರೆಸ್ ಜತೆ ಅರ್ಧಂಬರ್ಧ ಡೀಲ್ ಕುದುರಿಸಿಕೊಂಡ ಪಾಟೀದಾರ್ ಅನಾಮತ್ ಆಂದೋಲನ ಸಮಿತಿ (ಪಾಸ್) ನಾಯಕರು ಇದೀಗ ಕೈ ಪಕ್ಷದ ವಿರುದ್ಧವೂ ತಮ್ಮ ಅಸಮಧಾನ ಹೊರ ಹಾಕುತ್ತಿದ್ದಾರೆ.

ಪಟೇಲ್ ಸಮುದಾಯದಿಂದ ಕಾಂಗ್ರೆಸ್ ಗೆ ನೀಡಿದ್ದ ಬೆಂಬಲ ಹಿಂದಕ್ಕೆ

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಯಾವತ್ತೂ ಯಾವುದೇ ಟಿಕೆಟ್ ಗಳಿಗೆ ಬೇಡಿಕೆ ಇಟ್ಟಿಲ್ಲ ಎಂದು ಹಾರ್ದಿಕ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.

Cong - BJP are the same, never demanded tickets says Hardik Patel

ಕಾಂಗ್ರೆಸ್ ವಿರುದ್ಧ ಗರಂ ಆಗಿರುವ ಹಾರ್ದಿಕ್, 2015ರ ಪಾಟೀದಾರ್ ಹೋರಾಟವನ್ನು ನೆನಪಿಸಿಕೊಂಡಿದ್ದಾರೆ. ಕೇವಲ ಎರಡು ಮೂರು ಟಿಕೆಟ್ ಗಳಿಗಾಗಿ ಪಾಟೀದಾರರು ಹುತಾತ್ಮರಾಗಿದ್ದನ್ನು ಮರೆಯುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕಾಂಗ್ರೆಸ್ ವಿರುದ್ಧ ಭಿನ್ನಮತ ಸ್ಫೋಟ, ಬೀದಿ ಕಾಳಗಕ್ಕಿಳಿದ ಪಾಟೀದಾರರು

ಧೊಲ್ಕಾ ತಾಲೂಕಿನಲ್ಲಿ ಮಂಗಳವಾರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಹಾರ್ದಿಕ್, "ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ. ನಮ್ಮ ಮೇಲೆ ದೌರ್ಜನ್ಯವನ್ನು ಮಾಡಿದವರು ಯಾರು ಎಂಬುದನ್ನು ನಾವು ನಿರ್ಧರಿಸಬೇಕು. ಯಾರಿಗೆ ಮತ ಚಲಾಯಿಸಬೇಕು ಎಂದು ನಾನು ನಿಮಗೆ ಹೇಳಲಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಆಗಿವೆ, ಜನರಿಗೆ ಅವರು ಬೆಲೆ ಕೊಡುವುದಿಲ್ಲ," ಎಂದು ಹೇಳಿದ್ದಾರೆ.

""ನಿಮ್ಮ ಮತವನ್ನು ನೀಡುವಾಗ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಮತ್ತು ನಿಮಗೆ ನ್ಯಾಯವನ್ನು ನೀಡುವ ಒಬ್ಬನನ್ನು ನೀವು ಆಯ್ಕೆ ಮಾಡಿ" ಎಂದು ಹಾರ್ದಿಕ್ ಪಟೇಲ್ ತನ್ನ ಜನರಿಗೆ ಕರೆ ನೀಡಿದ್ದಾರೆ.

ಕಾಂಗ್ರೆಸ್-ಹಾರ್ದಿಕ್ ಮಧ್ಯೆ ಕುದುರಿದ ಒಪ್ಪಂದ, ಇಂದು ಬಹಿರಂಗ ಘೋಷಣೆ

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಇಬ್ಬರು ಪಾಸ್ ನಾಯಕರಿಗೆ ಟಿಕೆಟ್ ನೀಡಿತ್ತು. ಇದಾದ ಬೆನ್ನಿಗೆ ರಾಜ್ಯದಾದ್ಯಂತ ಕಾಂಗ್ರೆಸ್ ಕಚೇರಿಗಳ ಮೇಲೆ ಪಾಟೀದಾರರು ದಾಳಿ ನಡೆಸಿದ್ದರು. ನಂತರ ಎರಡನೇ ಪಟ್ಟಿಯಲ್ಲಿ ಮೊದಲ ಪಟ್ಟಿಯ ಒಂದು ಟಿಕೆಟನ್ನೂ ಕಾಂಗ್ರೆಸ್ ರದ್ದುಗೊಳಿಸಲಾಗಿತ್ತು.

ಇದು ಪಾಟೀದಾರರಲ್ಲಿ ತೀವ್ರ ಆಕ್ರೋಶ ಹುಟ್ಟು ಹಾಕಿದ ಬೆನ್ನಲ್ಲೇ ಮಾತನಾಡಿರುವ ಹಾರ್ದಿಕ್ ತಾವು ಟಿಕೆಟ್ ಕೇಳಿಯೇ ಇರಲಿಲ್ಲ. ಮುಂದೇಯೂ ಕೇಳುವುದಿಲ್ಲ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Congress and BJP are one and the same and I never demanded any tickets to contest the elections, Hardik Patel of the Patidar Anamat Andolan Samiti (PAAS) said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ