ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳಕ್ಕೆ 'ಮುಂಗಾರು', ಬಾಂಗ್ಲಾದೇಶಕ್ಕೆ 'ಮೋರಾ'

ಕೇರಳದಲ್ಲಿ ಮುಂಗಾರುಮಳೆ ಪ್ರವೇಶಕ್ಕೆ ಅಡ್ಡಿಯಾಗಿದ್ದ ಮೋರಾ ಮಾರುತಗಳು ಬಾಂಗ್ಲಾದೇಶದ ಕಡೆಗೆ ಹಾದುಹೋಗಿವೆ,ನೈಋತ್ಯ ಮಾರುತಗಳು ಮೇ 30ರಂದೇ ಕೇರಳಕ್ಕೆ ಮೊದಲ ಮುಂಗಾರು ಮಳೆ ಸಿಂಚನ ತರುವ ಲಕ್ಷಣಗಳಿವೆ

By Mahesh
|
Google Oneindia Kannada News

ತಿರುವನಂತಪುರಂ, ಮೇ 30: ಕೇರಳದಲ್ಲಿ ಮುಂಗಾರುಮಳೆ ಪ್ರವೇಶಕ್ಕೆ ಅಡ್ಡಿಯಾಗಿದ್ದ ಮೋರಾ ಮಾರುತಗಳು ಬಾಂಗ್ಲಾದೇಶದ ಕಡೆಗೆ ಹಾದುಹೋಗಿವೆ,ನೈಋತ್ಯ ಮಾರುತಗಳು ಮೇ 30ರಂದೇ ಕೇರಳಕ್ಕೆ ಮೊದಲ ಮುಂಗಾರು ಮಳೆ ಸಿಂಚನ ತರುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ನೈರುತ್ಯ ಮುಂಗಾರು ಮಂಗಳವಾರ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದಾದ ವಾರದೊಳಗೆ ಕರ್ನಾಟಕವು ಮೊದಲ ಮುಂಗಾರು ಮಳೆ ಕಾಣಬಹುದಾಗಿದೆ.

Conditions favourable for onset of SW monsoon onset in Kerala

ಕೇರಳದಲ್ಲಿ ಸೋಮವಾರದಂದು ಅಲಪ್ಪುಳ, ಕೊಟ್ಟಾಯಂನಲ್ಲಿ ತಲಾ ಆರು ಸೆಂ. ಮೀ. ಮಳೆಯಾಗಿದೆ. ಅಲ್ಲಲ್ಲಿ ಭಾರಿ ಗಾತ್ರದ ಮರಗಳು ಉರುಳಿ ಮೂವರು ಗಾಯಗೊಂಡಿದ್ದಾರೆ.


ಕೊಚ್ಚಿಯಲ್ಲಿ 5 , ತ್ರಿಶೂರ್, ಕೋಯಿಕ್ಕೊಡ್‌ ಭಾಗದಲ್ಲಿ 3 ಸೆಂ. ಮೀ. ಮಳೆಯಾಗಿದೆ. ಮುಂದಿನ ಐದು ದಿನಗಳಲ್ಲಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ಕೂಡ ಮುಂದಿನ 5 ದಿನಗಳ ಕಾಲ ಮುಂಗಾರುಪೂರ್ವ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದಲ್ಲಿ ಮಳೆ ಬಿದ್ದರೂ ತಾಪಮಾನ ಕಡಿಮೆಯಾಗಿಲ್ಲ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ತಾಪಮಾನ ಕಡಿಮೆಯಾಗಿದೆ.

English summary
Conditions are favourable for the onset of South-West monsoon in Kerala by May 30, the Indian Meteorological Department said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X