Kangana Ranaut: ಪಾಕಿಗಳು ರಕ್ತಸಿಕ್ತ ಜಿರಳೆಗಳು, ಭೂಪಟದಿಂದಲೇ ಇಲ್ಲದಂತೆ ಮಾಡಬೇಕು: ಕಂಗನಾ ರಣಾವತ್
ನವದೆಹಲಿ, ಮೇ 10: ಭಾರತದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದ 26 ಮುಗ್ಧ ಜೀವಗಳನ್ನ ನಾವು ಕಳೆದುಕೊಂಡಿದ್ದೇವೆ. ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತೀಯ ಸೇವೆ 'ಆಪರೇಷನ್ ಸಿಂದೂರ್' ನಡೆಸುವ ಮೂಲಕ ಪಾಕಿಗಳಿಗೆ ತಿರುಗೇಟು ನೀಡಿದೆ. ಈ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದ್ದು, ಮುಂದಿನ ದಿನಗಳಲ್ಲಿ ಗಡಿಯಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ನಿರ್ಮಾಣ ಆಗುವ ಸಾಧ್ಯತೆ ಇದೆ. ಇತ್ತೀಚಿನ ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಬಗ್ಗೆ ಕಂಗನಾ ರಣಾವತ್ ಅವರು ಮಾತನಾಡಿದ್ದು, ಪಾಕಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕ್ ನಡುವಿನ ಯುದ್ಧ ಭೀತಿ ಕುರಿತು ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಮಾತನಾಡಿ, ಪಾಕಿಸ್ತಾನವನ್ನು 'ಭಯೋತ್ಪಾದಕರ ನಾಡು' ಎಂದು ಕರೆದಿರುವ ಅವರು, 'ವಿಶ್ವದ ಮ್ಯಾಪ್ನಿಂದಲೇ ಅವರನ್ನು ತೆಗೆದು ಹಾಕಬೇಕು' ಎಂದು ಹೇಳಿದ್ದಾರೆ. ಭಾರತದ S-400 ಮಿಸೈಲ್ ರಕ್ಷಣಾ ವ್ಯವಸ್ಥೆಯನ್ನು ಶ್ಲಾಘಿಸಿ, ಪಾಕಿಸ್ತಾನದ ಡ್ರೋನ್ ದಾಳಿಗಳನ್ನು ಹತ್ತಿಕ್ಕಿದ್ದಕ್ಕೆ ಅಭಿನಂದಿಸಿದ್ದಾರೆ. 'ಪಾಕಿಸ್ತಾನ ರಕ್ತಸಿಕ್ತ ಜಿರಳೆಗಳಿಂದ ಕೂಡಿದೆ. ಭಯೋತ್ಪಾದಕರಿಂದ ತುಂಬಿರುವ ಭಯಾನಕ, ಅಸಹ್ಯ ರಾಷ್ಟ್ರ. ವಿಶ್ವ ಭೂಪಟದಿಂದಲೇ ಅವರನ್ನು ಅಳಿಸಿಹಾಕಬೇಕು ಎಂದು ಕಂಗನಾ ಅವರು ಗುಡುಗಿದ್ದಾರೆ.

ಭಾರತದ ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಮ್ನ ಕಾರ್ಯಕ್ಷಮತೆ ಬಗ್ಗೆ ಕಂಗನಾ ಈ ಮೊದಲು ಮಾತನಾಡಿದ್ದರು. 'ಜಮ್ಮುನ ಟಾರ್ಗೆಟ್ ಮಾಡಲಾಗುತ್ತಿದೆ. ಭಾರತದ ಏರ್ ಡಿಫೆನ್ಸ್ ವ್ಯವಸ್ಥೆಯು ಪಾಕ್ ಡ್ರೋನ್ಗಳನ್ನು ಹೊಡೆದ ಹಾಕಿವೆ ಎಂದು ಕಂಗನಾ ಅವರು ಈ ಮೊದಲು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಭಾರತೀಯ ವಾಯು ರಕ್ಷಣೆಯನ್ನು ಶ್ಲಾಘಿಸಿ ಮತ್ತು ರಾಷ್ಟ್ರವನ್ನು ರಕ್ಷಿಸುವ ಸೈನಿಕರ ಶೌರ್ಯಕ್ಕೆ ನಮಸ್ಕರಿಸಿದರು. ನಮ್ಮ ಹೆಮ್ಮೆಯ ಭಾರಯ ಪಾಕಿಸ್ತಾನದ ಯುದ್ಧ ವಿಮಾನವನ್ನ ನಾಳ ಮಾಡಿದೆ. ಇನ್ನೂ ಈ ವೇಳೆ ಭಾರತೀಯ ಸೈನಿಕರ ಧೈರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಕಂಗನಾ ಅವರು ಶ್ಲಾಘಿಸಿದ್ದಾರೆ.
ದೇಶವು ಯುದ್ದದಲ್ಲಿದೆ ಮತ್ತು ನಾವೆಲ್ಲರೂ ಆತಂಕಕ್ಕೆ ಒಳಗಾಗಿದ್ದೇವೆ. ನಮ್ಮ ಭದ್ರತಾ ಪಡೆಗಳು ನಮ್ಮನ್ನು ರಕ್ಷಿಸುತ್ತಿದೆ. ದೇವರು ಅವರನ್ನ ರಕ್ಷಿಸಲಿ. ಪ್ರಧಾನಿ ನರೇಂದ್ರ ಮೋದಿ ಅವರ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂದು ಹೆಸರಿಡಲಾಗಿದೆ. ನಮ್ಮ ಹೆಣ್ಣು ಮಕ್ಕಳ ಮುಂದೆಯೇ ಅವರ ಗಂಡಂದಿರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಆ ಸಾವಿನ ಪ್ರತೀಕಾರವನ್ನ ತೀರಿಸಿಕೊಳ್ಳಲಾಗುತ್ತಿದೆ. ಇನ್ನೂ ಕೆಲವು ದಿನಗಳ ಹಿಂದೆ ನಟಿ ಹಾಗೂ ಸಂಸದೆ ಕಂಗನಾ ಅವರು ನಮ್ಮ ದೇಶಕ್ಕಾಗಿ ಪ್ರತಿದಿನ ತಮ್ಮ ಪ್ರಾಣವನ್ನೇನ ಪಣಕ್ಕಿಡುವ ಸೈನಿಕರಿಗೆ ಸುರಕ್ಷತೆ ಮತ್ತು ಯಶಸ್ಸನ್ನು ಹಾರೈಸುವ ಹೃದಯಸ್ಪರ್ಶಿ ಸಂದೇಶವನ್ನು ಪೋಸ್ಟ್ ಮಾಡಿದ್ದರು.
ಪಾಕಿಸ್ತಾನದವರು ಭಾರತದ ಮೇಲೆ ಹಲವು ಕಡೆಗಳಲ್ಲಿ ಡ್ರೋನ್ ದಾಳಿ ಮಾಡಲು ಪ್ರಯತ್ನಿಸಿದ್ದು ಇದೆ. ಜಮ್ಮು, ಸಾಂಬಾ, ಸತ್ವಾರಿ, ಅಮೃತ್ಸರ್, ಜಲಂಧರ್ ಮೊದಲಾದ ಕಡೆಗಳಲ್ಲಿ ಪಾಕ್ ಡ್ರೋನ್ ದಾಳಿಗೆ ಪ್ರಯತ್ನಿಸಿದ್ದು ಭಾರತ ಅದನ್ನು ಪಾಕಿಸ್ತಾನವನ್ನ ಹಿಮ್ಮೆಟ್ಟಿಸಿದೆ. ಇನ್ನು, ಪಹಲ್ಗಾಮ್ ದಾಳಿ ಹಿಂದೆ ನಮ್ಮ ಕೈವಾಡ ಇಲ್ಲ ಎಂದು ಪಾಕ್ ವಾದಿಸುತ್ತಲೇ ಬರುತ್ತಿದೆ. ಈ ವಿಚಾರಗಳ ಬಗ್ಗೆ ಕಂಗನಾ ರಣಾವತ್ ಅವರು ತೀವ್ರ ವಾಗ್ದಾಳಿಯನ್ನ ನಡೆಸಿದ್ದಾರೆ.












Click it and Unblock the Notifications