ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಶಾಲೆಯ ಮೇಲೆ ದಾಳಿಗೆ ಸಂಚು; ಟೆಕ್ಕಿಗೆ ಜೀವಾವಧಿ ಶಿಕ್ಷೆ

|
Google Oneindia Kannada News

ಮುಂಬೈ, ಅ. 21: ಮುಂಬೈನ ಅಮೆರಿಕದ ಶಾಲೆಯಲ್ಲಿ ಮಕ್ಕಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಮುಂಬೈ ನ್ಯಾಯಾಲಯ ಶುಕ್ರವಾರ ಕಂಪ್ಯೂಟರ್ ಎಂಜಿನಿಯರ್ ಅನೀಸ್ ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

2014ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಆರೋಪಿ ಎಂದು ಕಂಪ್ಯೂಟರ್ ಎಂಜಿನಿಯರ್ ಅನೀಸ್ ಅನ್ಸಾರಿಯನ್ನು ಬಂಧಿಸಿತ್ತು. ಶುಕ್ತವಾರ ತೀರ್ಪು ನೀಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ. ಎ. ಜೋಗ್ಲೇಕರ್ ಅವರು ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದರು.

ನೋಯ್ಡಾ ಸೊಸೈಟಿಯಲ್ಲಿ ಭದ್ರತಾ ಸಿಬ್ಬಂದಿ, ನಿವಾಸಿಗಳ ನಡುವೆ ಮಾರಾಮಾರಿ, ಬಂಧನನೋಯ್ಡಾ ಸೊಸೈಟಿಯಲ್ಲಿ ಭದ್ರತಾ ಸಿಬ್ಬಂದಿ, ನಿವಾಸಿಗಳ ನಡುವೆ ಮಾರಾಮಾರಿ, ಬಂಧನ

ಪ್ರಾಸಿಕ್ಯೂಷನ್ ಪ್ರಕಾರ, ಅನೀಸ್ ಅನ್ಸಾರಿ ಖಾಸಗಿ ಕಂಪನಿಯೊಂದರಲ್ಲಿ ಸಹಾಯಕ ಭೌಗೋಳಿಕ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಸಂಸ್ಥೆಯ ಕಂಪ್ಯೂಟರ್ ಬಳಸಿ ಸುಳ್ಳು ಹೆಸರಿನಲ್ಲಿ ಫೇಸ್‌ಬುಕ್ ಖಾತೆಯನ್ನು ರಚಿಸಿದ್ದಾರೆ. ನಂತರ ಅದರಿಂದ ಆಕ್ಷೇಪಾರ್ಹ ಮಾಹಿತಿಯನ್ನು ಪ್ರಕಟಿಸಿದ್ದಾರೆ.

Computer Engineer Gets Life Sentence For Conspiring to Attack School

ತನಿಖಾ ಸಂಸ್ಥೆಯು ಕಂಪ್ಯೂಟರ್ ಎಂಜಿನಿಯರ್ ಅನೀಸ್ ಅನ್ಸಾರಿ ಐಸಿಸ್‌ನ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದೆ. ಒಮರ್ ಎಲ್ಹಾಜಿಯೊಂದಿಗಿನ ಅವರ ಫೇಸ್‌ಬುಕ್ ಚಾಟ್‌ಗಳನ್ನು ಗಮನಿಸಿದರೆ ಅವರು ಅಮೆರಿಕನ್ ಶಾಲೆಯ ಮೇಲೆ ದಾಳಿಯನ್ನು ನಡೆಸಲು ಬಯಸಿದ್ದರು ಎಂಬುದು ಸಾಬೀತಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

English summary
A Computer engineer gets life sentence from Mumbai court for conspiring to attack children at the American school. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X