ರಾಷ್ಟ್ರಗೀತೆ ಹಾಡಿ ವಿವಾದಕ್ಕೆ ಸಿಲುಕಿದ ಸನ್ನಿ ಲಿಯೋನ್

Written By:
Subscribe to Oneindia Kannada

ನವದೆಹಲಿ, ಜುಲೈ, 22: ಪ್ರೋ ಕಬಡ್ಡಿ ಲೀಗ್ ವೇಳೆ ರಾಷ್ಟ್ರಗೀತೆಯನ್ನು ಹಾಡಿದ ಬಾಲಿವುಡ್ ತಾರೆ ಸನ್ನಿ ಲಿಯೋನ್ ಮೇಲೆ ದೂರು ದಾಖಲಾಗಿದೆ. ನವದೆಹಲಿಯ ನ್ಯೂ ಅಶೋಕ್ ನಗರ್ ಪೊಲೀಸ್ ಠಾಣೆಯಲ್ಲಿ ಸನ್ನಿ ಲಿಯೋನ್ ಮೇಲೆ ಪ್ರಕರಣ ದಾಖಲಾಗಿದೆ.

ಸನ್ನಿ ಲಿಯೋನ್ ರಾಷ್ಟ್ರಗೀತೆಯನ್ನು ತಪ್ಪು ತಪ್ಪಾಗಿ ಹಾಡಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.[ರಾಷ್ಟ್ರಗೀತೆ ಹಾಡಲು ಬಿಗ್ ಬಿ ಅವರು ಬಿಡಿಗಾಸು ಪಡೆದಿಲ್ಲ!]

bollywood

ಮುಂಬೈನಲ್ಲಿ ಗುರುವಾರ ರಾತ್ರಿ ನಡೆದ ಪ್ರೋ ಕಬಡ್ಡಿ ಪಂದ್ಯಗಳಿಗೆ ಸನ್ನಿ ಲಿಯೋನ್ ರಾಷ್ಟ್ರಗೀತೆ ಹಾಡುವ ಮುಖೇನ ಚಾಲನೆ ಕೊಟ್ಟಿದ್ದರು. ಆದರೆ ಗೀತೆ ಹಾಡುವಾಗ ಅಲ್ಲಲ್ಲಿ ತಪ್ಪಿದ್ದರು.[ಮುಸ್ಲಿಂ ಕುಟುಂಬದಿಂದ ರಾಷ್ಟ್ರಗೀತೆಗೆ ಅವಮಾನ]

ಅಮಿತಾಭ್ ಬಚ್ಚನ್ ಹಿಂದೆ ರಾಷ್ಟ್ರಗೀತೆ ಹಾಡಿ ಕಬಡ್ಡಿ ಲೀಗ್ ಗೆ ಚಾಲನೆ ನೀಡಿದ್ದರು. ಸನ್ನಿ ಲಿಯೋನ್ ಹಾಡಿದ ರಾಷ್ಟ್ರಗೀತೆ ಹೇಗಿತ್ತು ನೀವು ಕೇಳಿಕೊಂಡು ಬನ್ನಿ.. ಸರಿಯಾಗಿಲ್ಲ ಎಂದರೆ ನಿರ್ದಾಕ್ಷಣ್ಯವಾಗಿ ಕಮೆಂಟಿಸಿ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A complaint has been lodged against actress Sunny Leone for singing the national anthem incorrectly. The complaint has been lodged at New Ashok Nagar Police Station. Sunny sang the national anthem and kick started a match at the ongoing Pro Kabaddi League in Mumbai.
Please Wait while comments are loading...