Delhi Train Derailment: ಹಜ್ರತ್ ನಿಜಾಮುದ್ದೀನ್ - ಘಾಜಿಯಾಬಾದ್ ರೈಲು ಅಪಘಾತ: ಬಿಡ್ಜ್‌ನಿಂದ ಕೆಳಗುರುಳಿದ ರೈಲು ಬೋಗಿ!
Delhi train derailment: ನಿಜಾಮುದ್ದೀನ್‌ನಿಂದ ಗಾಜಿಯಾಬಾದ್‌ಗೆ ಹೊರಟಿದ್ದ ಪ್ಯಾಸೆಂಜರ್ ರೈಲು (ಟ್ರೈನ್ ಸಂಖ್ಯೆ 64419) ದೆಹಲಿಯ ಶಿವಾಜಿ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ನಾಲ್ಕನೇ ಬೋಗಿ ಬ್ರಿಡ್ಜ್‌ನಿಂದ ಕೆಳಗೆ ಬಿದ್ದಿದ್ದು, ಯಾವುದೇ ಪ್ರಾಣಹಾನಿ ವರಿದಿಯಾಗಿಲ್ಲವೆಂದು ಉತ್ತರ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ, ಈ ಪ್ರಮುಖ ಮಾರ್ಗದ ಹಲವು ರೈಲುಗಳು ವಿಳಂಬವಾಗಿದ್ದು, ಕೆಲವು ರೈಲುಗಳನ್ನು ಬೇರೆ ಮಾರ್ಗಗಳಿಗೆ ಬದಲಾಯಿಸಲಾಗಿದೆ. ತಕ್ಷಣವೇ ರಕ್ಷಣಾ ತಂಡಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಬೋಗಿಯನ್ನು ಮತ್ತೆ ಹಳಿಗೆ ತರಲು ಭಾರಿ ಕ್ರೇನ್‌ಗಳನ್ನು ಬಳಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿದ್ದಾರೆ. ಟ್ರ್ಯಾಕ್ ದೋಷಗಳು, ಯಾಂತ್ರಿಕ ವೈಫಲ್ಯ ಅಥವಾ ಸಿಗ್ನಲ್ ದೋಷಗಳಿಂದ ಈ ಘಟನೆ ಸಂಭವಿಸಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದ ಬೆನ್ನಲ್ಲೇ ಈ ಘಟನೆ ಸಂಭವಿರಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆಯಿಂದಾಗಿ ದೆಹಲಿಯಿಂದ ಹೊರಟಿದ್ದ ಹಲವು ರೈಲುಗಳು ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದು ವರದಿಯಾಗಿದೆ.
ದೆಹಲಿ ರೈಲುಗಳ ವಿಳಂಬ: ಈ ಅವಘಡದಿಂದಾಗಿ ದೆಹಲಿ ಮಾರ್ಗವಾಗಿ ಸಂಚರಿಸುತ್ತಿದ್ದ ಹಲವು ರೈಲುಗಳ ಸಂಚಾರವು ಗುರುವಾರ ವಿಳಂಬವಾಯಿತು. ಕೆಲವೇ ದಿನಗಳ ಹಿಂದೆ ಮುಂಬೈನಲ್ಲಿ ರೈಲು ದುರಂತ ಸಂಭವಿಸಿತ್ತು. ಫ್ಲಾಟ್ ಫಾರಂನ ಮೇಲೆ ಬಿದ್ದು ಮೃತಪಟ್ಟಿದ್ದರು.
ಸರಣಿ ದುರಂತ: ಇನ್ನು ಜೂನ್ 12ರಂದು ಗುರುವಾರ ಭಾರೀ ದುರಂತ ಸಂಭವಿಸಿದೆ. ಗುಜರಾತ್ ಜಿಲ್ಲೆಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 200ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅದೇ ದಿನ ರೈಲು ದುರಂತವೂ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ರೈಲು ಹಳಿಯ ದುರಂತದ ಬೆನ್ನಲ್ಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ದೇಶದಾದ್ಯಂತ ಕಳೆದ ಮೂರು ತಿಂಗಳ ಅವಧಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದು. ಜನರಲ್ಲಿ ಆತಂಕ ಮೂಡಿದೆ. ಒಂದರ ಬೆನ್ನಲ್ಲೇ ಒಂದು ದುರಂತಗಳು ಸಂಭವಿಸುತ್ತಿವೆ.












Click it and Unblock the Notifications