20 ವರ್ಷ ಕಿರಿಯರಾದ ಯೋಗಿ ಕಾಲಿಗೆ ನಮಸ್ಕರಿಸಿದ 66 ವರ್ಷದ ರಮಣ್ ಸಿಂಗ್

Recommended Video

      66 ವರ್ಷದ ಹಿರಿಯ ಮುಖ್ಯಮಂತ್ರಿ ಕಿರಿಯ ಯೋಗಿ ಆದಿತ್ಯನಾಥ್ ಕಾಲಿಗೆ ನಮಸ್ಕಾರ | oneindia Kannada

      ರಾಜ್ ನಂದ್ ಗಾಂವ್ (ಛತ್ತೀಸ್ ಗಢ), ಅಕ್ಟೋಬರ್ 23: ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಸೋಮವಾರದಂದು ವಿಧಾನಸಭಾ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಹಾಜರಿದ್ದರು. ಅಚ್ಚರಿ ಎಂಬಂತೆ 66 ವರ್ಷದ ರಮಣ್ ಸಿಂಗ್ ತಮಗಿಂತ ವಯಸ್ಸಿನಲ್ಲಿ 20 ವರ್ಷಕ್ಕೆ ಕಿರಿಯರಾದ ಯೋಗಿ ಕಾಲಿಗೆ ನಮಸ್ಕರಿಸಿದರು.

      ರಾಜಕೀಯ ಅನುಭವದಿಂದ ನೋಡುವುದಾದರೂ ಮೂರು ಅವಧಿಗೆ ಛತ್ತೀಸ್ ಗಢದ ಮುಖ್ಯಮಂತ್ರಿ ಆಗಿರುವ ರಮಣ್ ಸಿಂಗ್ ಅವರು ಹಿರಿಯರು. 1970ರ ಆರಂಭದಲ್ಲಿ ರಮಣ್ ಸಿಂಗ್ ಜನಸಂಘಕ್ಕೆ ಸೇರಿದವರು, 1976-77ರಲ್ಲಿ ಜನಸಂಘದ ಯುವ ಘಟಕಕ್ಕೆ ಅಧ್ಯಕ್ಷರಾಗಿದ್ದರು. ಇನ್ನು ಯೋಗಿ ಆದಿತ್ಯನಾಥ್ 1972ರಲ್ಲಿ ಜನಿಸಿದವರು.

      ಭಾರತದಲ್ಲಿ ಸದ್ಯಕ್ಕೆ ಅತಿ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ನಾಲ್ಕನೆಯವರು ರಮಣ್ ಸಿಂಗ್. ಸಿಕ್ಕಿಂನ ಪವನ್ ಕುಮಾರ್ ಚಾಮ್ಲಿಂಗ್, ಮಿಜೋರಾಂನ ಪು ಲಲ್ತನ್ ಹವ್ಲಾ ಹಾಗೂ ಒಡಿಶಾದ ನವೀನ್ ಪಟ್ನಾಯಕ್ ಇತರ ಮೂವರು. ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಈಗಷ್ಟೇ ಒಂದೂವರೆ ವರ್ಷ ಕಳೆದಿದೆ.

      Yogi-Raman Singh

      ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ಹಲವು ನಾಯಕರು ಗೋರಖನಾಥ್ ದೇವಾಲಯದ ಮುಖ್ಯ ಅರ್ಚಕರಾದ ಯೋಗಿ ಆದಿತ್ಯನಾಥ್ ಕಾಲಿಗೆ ನಮಸ್ಕರಿಸಿದ್ದರು. ಸ್ವತಃ ರಾಷ್ಟ್ರಪತಿಗಳ ಸಹ ತಲೆ ಬಾಗಿದ್ದು ಕಂಡುಬಂದಿತ್ತು.

      ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ರಮಣ್ ಸಿಂಗ್ ರಾಜ್ ನಂದ್ ಗಾಂವ್ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಅವರ ವಿರುದ್ಧ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸಂಬಂಧಿ ಕರುಣಾ ಶುಕ್ಲಾ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+