ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಯಾತ್ರಿ ನಿವಾಸ ಸ್ಥಾಪನೆಗೆ ಅಡಿಗಲ್ಲು ಹಾಕಿದ ಸಿಎಂ ಬೊಮ್ಮಾಯಿ

|
Google Oneindia Kannada News

ಆಂಧ್ರಪ್ರದೇಶ, ಜನವರಿ 13: ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶ್ರೀಶೈಲಂಗೆ ಅನೇಕ ಕನ್ನಡಿಗರು ಯಾತ್ರೆ ಕೈಗೊಳ್ಳುತ್ತಾರೆ. ಅದರಂತೆ ಕಾಶಿಗೂ ತೆರಳುತ್ತಾರೆ. ಅಲ್ಲಿ ಭಕ್ತರು ಉಳಿದುಕೊಳ್ಳಲು ಯಾತ್ರಿ ನಿವಾಸ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಕರ ಸಂಕ್ರಾಂತಿ ವಿಶೇಷ ಪುಟ

ಆಂಧ್ರಪ್ರದೇಶ ಶ್ರೀಶೈಲದಲ್ಲಿ ಯಾತ್ರಿ ನಿವಾಸದ ಕಂಬಿಮಂಟಪ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸುವ ಕನ್ನಡಿಗರು ಸೇರಿದಂತೆ ಸಾಕಷ್ಟು ಭಕ್ತರಿಗಾಗಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕದಿಂದಲೂ ಇಲ್ಲಿಗೆ ಭಕ್ತರಿಗೆ ಯಾತ್ರೆ ಕೈಗೊಂಡು ಶ್ರೀಶೈಲ ಜಗದ್ಗುರುಗಳ ಆಶೀರ್ವಾದ ಪಡೆಯುತ್ತಾರೆ ಎಂದರು.

ಶ್ರೀ ಶೈಲದಂತೆ ಕರ್ನಾಟಕದಿಂದ ನಿತ್ಯ ನೂರಾರು ಮಂದಿ ಕಾಶಿ ವಿಶ್ವನಾಥ್ ದರ್ಶನ ಪಡೆಯಲು ಕಾಶಿಯಾತ್ರೆ ಕೈಗೊಳ್ಳುತ್ತಾರೆ.

CM Bommai laid foundation stone for establishment of Yatri Niwas in Srisailam

ಹೋಗುತ್ತಾರೆ. ಆದರೆ ಕರ್ನಾಟಕ ಯಾತ್ರಿಗಳಿಗೆ ಕಾಶಿಯಲ್ಲಿ ತಂಗಲು ಯಾವುದೇ ಸೂಕ್ತ ವ್ಯವಸ್ಥೆಗಳು ಇಲ್ಲ. ಆದ್ದರಿಂದ ಅಲ್ಲಿ ಕನ್ನಡಿಗರು ಉಳಿದುಕೊಳ್ಳಲು ಯಾತ್ರಿ ನಿವಾಸ ಸೌಲಭ್ಯ ಒದಗಿಸಬೇಕು ಎಂದು ಅವರು ತಿಳಿಸಿದರು.

ಜಗತ್ತಿನಲ್ಲೇ ನಮ್ಮ ಭಾರತ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಈ ದೇಶದ ಸಂಸ್ಕೃತಿ, ಪರಂಪರೆ, ವೈವಿಧ್ಯತೆ ಉಳಿಸಿ ಬೆಳೆಸುವುದು ಅತ್ಯಗತ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಧರ್ಮದ ಹೆಸರಿನಲ್ಲಿ ಸಾಕಷ್ಟು ಘರ್ಷಣೆ ನಡೆಯುತ್ತಿವೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಸಹ ನಡೆಯುತ್ತಿದೆ. ಇದು ದೇಶ ವಿರೋಧಿ ನಡೆದ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.

ಮಹನೀಯರ ಪುತ್ಥಳಿಗೆ ಸ್ಥಾಪನೆಗೆ ಚಾಲನೆ

ಆಂಧ್ರಪ್ರದೇಶದ ಶ್ರೀ ಶೈಲಕ್ಕೆ ತೆರಳುವ ಮುನ್ನ ಕರ್ನಾಟಕ ರಾಜಧಾನಿ ಬೆಂಗಳೂರಿನ ವಿಧಾನಸೌಧ ಮುಂದಿನ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರು ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ನಿರ್ಮಾಣದ ಕಾಮಗಾರಿ ಆರಂಭಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಆಂಧ್ರಕ್ಕೆ ತೆರಳಿದ್ದರು. ಈ ವೇಳೆ ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, ಜನರ ಶಕ್ತಿ ಕೇಂದ್ರವಾಗಿರುವ ವಿಧಾನಸೌದ ಮುಂದೆ ಬಹುದಿನಗಳ ಕನಸಾಗಿದ್ದ ಹಾಗೂ ಕನ್ನಡ ನೆಲದಲ್ಲೇ ಜನ್ಮತಾಳಿ ಕ್ರಾಂತಿ ಮಾಡಿದ ಮಹಾನ್ ನಾಯಕರ ಪುತ್ಥಳಿಗೆ ಶಂಕುಸ್ಥಾಪನೆ ನೆರವೇರಿದ್ದು ಸಂತಸ ತಂದಿದೆ. ಇದೊಂದು ಐತಿಹಾಸಿಕ ಸ್ಮರಣೀಯ ದಿನ ಎಂದು ಬಣ್ಣಿಸಿದರು.

CM Bommai laid foundation stone for establishment of Yatri Niwas in Srisailam

ಈ ಮಹನೀಯರು ನಾಡಿನ ಸಾಮಾಜಿಕ, ಆರ್ಥಕ, ಶೈಕ್ಷಣಿಕ ಹಾಗೂ ವೈಚಾರಿಕ ಪ್ರಗತಿಗಾಗಿ ಜೀವ ಮುಡಿಪಾಗಿಟ್ಟವರು. ಈ ಕ್ಷೇತ್ರಗಳಲ್ಲಿ ಕ್ರಾಂತಿ ತಂದವರು. ಇನ್ನೂ ಕೆಂಪೇಗೌಡ ಊರು ಕೇರಿಗಳನ್ನ ಕಟ್ಟಿ ಮಾದರಿಯಾಗಿದ್ದು, ಅವರು ಕಟ್ಟಿದ ಬೆಂಗಳೂರು ಸಾಕಷ್ಟು ಹೆಸರು ಮಾಡಿದೆ. ಈ ಪುತ್ಥಳಿ ಸ್ಥಾಪನೆಗಾಗಿ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿತ್ತು ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಇನ್ನಿತರ ರಾಜ್ಯದ ಮುಖಂಡರು ಪಾಲ್ಗೊಂಡಿದ್ದರು.

English summary
CM Basavaraj Bommai laid the foundation stone for the establishment of Yatri Niwas in Srisailam at Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X