ಖಲಿಸ್ತಾನಿ ವಿಚಾರದಲ್ಲಿ ಭಾರತದ ವಿರುದ್ಧ ಅಮೆರಿಕ ಮತ್ತೊಂದು ಗಂಭೀರ ಆರೋಪ!
ಭಾರತ ಮತ್ತು ಅಮೆರಿಕ ನಡುವೆ ಖಲಿಸ್ತಾನಿಗಳ ವಿಚಾರದಲ್ಲಿ ಕಿರಿಕ್ ಜೋರಾಗುವ ಲಕ್ಷಣ ಗೋಚರಿಸುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಗಂಭೀರ ಆರೋಪವನ್ನು ಈಗ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಮಾಡಿದ್ದಾರೆ. ಅದರಲ್ಲೂ ಭಾರತ ಮೂಲದ ನಿಖಿಲ್ ಗುಪ್ತಾ ಅವರನ್ನ ಈ ಪ್ರಕರಣದಲ್ಲಿ ಹೊಣೆ ಮಾಡುತ್ತಿರುವ ಅಮೆರಿಕದ ಪ್ರಾಸಿಕ್ಯೂಟರ್ಸ್, ಈಗ ಮತ್ತೊಂದು ಆರೋಪದ ಬಾಂಬ್ ಸಿಡಿಸಿದ್ದಾರೆ!
ಹೌದು, ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಯತ್ನವನ್ನು ಭಾರತದ ಪ್ರಜೆ ನಿಖಿಲ್ ಗುಪ್ತಾ ಎನ್ನುವವರ ತಲೆಗೆ ಕಟ್ಟಿರುವ ಅಮೆರಿಕ ಮತ್ತೊಂದು ಗಂಭೀರವಾದ ಆರೋಪ ಮಾಡಿದೆ. ಭಾರತದ ಪ್ರಜೆ ನಿಖಿಲ್ ಗುಪ್ತ ಎಂಬುವವರ ವಿರುದ್ಧ ಸಂಚು ರೂಪಿಸಿದ ದೋಷಾರೋಪ ಹೊರಿಸಿತ್ತು ಅಮೆರಿಕ. ನಿಖಿಲ್ ಗುಪ್ತಾ 2023ರ ಜೂನ್‌ನಲ್ಲಿ ಜೆಕ್ ಗಣರಾಜ್ಯದ ಅಧಿಕಾರಿಗಳಿಂದ ಅರೆಸ್ಟ್ ಆಗಿದ್ದ. ಆದರೆ ಈ ನಿಖಿಲ್ ಗುಪ್ತಾ ಹೀಗೆ ಪನ್ನೂನ್ ಹತ್ಯೆಗೆ ಸ್ಕೆಚ್ ಹಾಕಲು ಒಪ್ಪಿದ್ದು ಯಾವ ಕಾರಣಕ್ಕಂತೆ ಗೊತ್ತಾ? ಅಮೆರಿಕದ ಆರೋಪ ಏನು?

ಕೇಸ್ ರದ್ದು ಮಾಡ್ತಾರೆ ಅಂತಾ ಸ್ಕೆಚ್?
ಅಂದಹಾಗೆ ಈಗ ಅಮೆರಿಕದ ಪ್ರಾಸಿಕ್ಯೂಟರ್ಸ್ ಮಾಡಿರುವ ಆರೋಪದಂತೆ, ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ನಿಖಿಲ್ ಗುಪ್ತಾ ಕೈಹಾಕಿದ್ದು ಆತನ ವಿರುದ್ಧದ ಕ್ರಿಮಿನಲ್ ಕೇಸ್ ರದ್ದು ಮಾಡಿಕೊಳ್ಳಲು ಅಂತೆ. ಗುಜರಾತ್‌ನಲ್ಲಿ ತನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆಯ ವಜಾಗೊಳಿಸುವ ಭರವಸೆ ನೀಡಿದ ನಂತರ ಗುಪ್ತಾ ಸಂಚು ರೂಪಿಸಲು ಒಪ್ಪಿಕೊಂಡಿದ್ದಾನೆಂದು ಅಮೆರಿಕ ಪ್ರಾಸಿಕ್ಯೂಟರ್ಸ್ ಆರೋಪ ಮಾಡಿದ್ದಾರೆ. ಈ ಮೂಲಕ ಮೊದಲೇ ಧಗಧಗಿಸಿದ್ದ ಭಾರತ & ಅಮೆರಿಕ ಸಂಬಂಧದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಇದಕ್ಕೂ ಹಿಂದೆ ಹೇಳಿದ್ದು ಏನು?
ಖಾಲಿಸ್ತಾನ್ ರಾಷ್ಟ್ರ ಸ್ಥಾಪನೆ ಪ್ರತಿಪಾದಿಸಿದ್ದ ಅಮೆರಿಕ ಪ್ರಜೆ ಪನ್ನೂ ಹತ್ಯೆಗೆ ಸ್ಕೆಚ್ ಹಾಕಿದ್ದರು ಎಂಬ ಆರೋಪವನ್ನ ಅಮೆರಿಕ ಮಾಡಿತ್ತು. ಈ ಸಂಬಂಧ ಭಾರತದ ಪ್ರಜೆ ನಿಖಿಲ್ ಗುಪ್ತ ಎಂಬುವವರ ವಿರುದ್ಧ ಸಂಚು ರೂಪಿಸಿದ ದೋಷಾರೋಪ ಹೊರಿಸಿದೆ ಅಮೆರಿಕ. ನಿಖಿಲ್ ಗುಪ್ತಾ 2023 ರ ಜೂನ್‌ನಲ್ಲಿ ಜೆಕ್ ಗಣರಾಜ್ಯದ ಅಧಿಕಾರಿಗಳಿಂದ ಅರೆಸ್ಟ್ ಆಗಿದ್ದ. ಆದ್ರೆ ಈಗ ಇದೇ ನಿಖಿಲ್ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ಇದರ ಜೊತೆಗೆ ಈತ ತನ್ನ ವಿರುದ್ಧ ಭಾರತದಲ್ಲಿ ಇರುವ ಕ್ರಿಮಿನಲ್ ಕೇಸ್ ರದ್ದು ಮಾಡಲು ಇಂತಹ ಕೃತ್ಯಕ್ಕೆ ಮುಂದೆ ಬಂದಿದ್ದ ಎಂಬ ಆರೋಪ ಮಾಡಿದೆ ಅಮೆರಿಕ.












Click it and Unblock the Notifications