ಯುಪಿಎಸ್ಸಿ ಟಾಪರ್ ನಂದಿನಿಗೆ ಸಿಕ್ಕ ಅಂಕಗಳು ಬಹಿರಂಗ
ಯುಪಿಎಸ್ಸಿ ಟಾಪರ್ ಆಗಿರುವ ಕೋಲಾರ ಮೂಲದ ನಂದಿನಿ ಕೆ. ಆರ್ ಅವರು ಗಳಿಸಿರುವ ಅಂಕಗಳನ್ನು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಸೋಮವಾರ ಬಹಿರಂಗಗೊಳಿಸಿದೆ.
ನವದೆಹಲಿ, ಜೂನ್ 05: ಯುಪಿಎಸ್ಸಿ ಟಾಪರ್ ಆಗಿರುವ ಕೋಲಾರ ಮೂಲದ ನಂದಿನಿ ಕೆ. ಆರ್ ಅವರು ಗಳಿಸಿರುವ ಅಂಕಗಳನ್ನು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಸೋಮವಾರ ಬಹಿರಂಗಗೊಳಿಸಿದೆ.
2016ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ಸ್ಥಾನ ಪಡೆದ ಕರ್ನಾಟಕದ ಕೋಲಾರ ಮೂಲದ ನಂದಿನಿ ಕೆ.ಆರ್ ಅವರು ಶೇ 55.3ರಷ್ಟು ಅಂಕಗಳನ್ನು ಗಳಿಸಿದ್ದಾರೆ. 2015ನೇ ಸಾಲಿನಲ್ಲಿ ಟೀನಾ ದಾಬಿ ಅವರು ಶೇ 52.49ರಷ್ಟು(1,063 ಅಂಕಗಳು) ಅಂಕಗಳನ್ನು ಗಳಿಸಿದ್ದರು. [ಕರ್ನಾಟಕದ ಹೆಮ್ಮೆ ಕೋಲಾರಕ್ಕೆ ನಂದಿನಿ ಎಂಬ ಮತ್ತೊಂದು ಕೋಡು!]

ಎರಡನೇ ಸ್ಥಾನ ಗಳಿಸಿರುವ ಅನ್ಮೋಲ್ ಶೇರ್ ಸಿಂಗ್ ಬೇಡಿ ಶೇಕಡಾ 54.56 ಗಳಿಸಿದ್ದಾರೆ.ಮೂರನೇ ಸ್ಥಾನ ಗಳಿಸಿದ ಗೋಪಾಲಕೃಷ್ಣ ರೋನಂಕಿ ಶೇಕಡಾ 54.37 ಅಂಕಗಳನ್ನು ಪಡೆದಿದ್ದಾರೆ ಎಂದು ಯುಪಿಎಸ್‌ಸಿ ತಿಳಿಸಿದೆ. [ಕನ್ನಡ ಮಾಧ್ಯಮದಲ್ಲಿ ಓದಿದ ಕೆಆರ್ ನಂದಿನಿ ಐಎಎಸ್ ಮುಕುಟ ಮಣಿ]
ನಂದಿನಿ ಕೆ. ಆರ್ ಅವರು ಒಟ್ಟು 2,025 ಅಂಕಗಳಲ್ಲಿ 1,120 ಅಂಕ ಪಡೆದುಕೊಂಡಿದ್ದು, (927 ಮುಖ್ಯ ಪರೀಕ್ಷೆ ಮತ್ತು 193 ಸಂದರ್ಶನ) ಅಂಕಗಳನ್ನು ಗಳಿಸಿದ್ದಾರೆ.
ಕೇಂದ್ರ ಲೋಕ ಸೇವಾ ಅಯೋಗ IAS, IFS, IPS ಹುದ್ದೆಗಳಿಗಾಗಿ ನಡೆಸಿದ ಪರೀಕ್ಷೆಯಲ್ಲಿ ಒಟ್ಟು 1099 ಅಭ್ಯರ್ಥಿಗಳಿಗೆ ಸ್ಥಾನ ಹಂಚಿಕೆಯಾಗಿದ್ದು, 500 ಸಾಮಾನ್ಯ, 347 ಒಬಿಸಿ, 163 ಎಸ್‌ಸಿ ಹಾಗೂ 89 ಎಸ್‌ಟಿ ಅಭ್ಯರ್ಥಿಗಳಿದ್ದಾರೆ.(ಪಿಟಿಐ)












Click it and Unblock the Notifications