ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬಾಗಿಲು ತೆರೆದಿದೆ, ಬರಬೇಕೋ ಬಿಡಬೇಕೋ ರಜನಿ ನಿರ್ಧರಿಸಲಿ: ಅಮಿತ್ ಶಾ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 22: ಬಿಜೆಪಿಗೆ ಸೇರಬೇಕೋ ಬಿಡಬೇಕೋ ಎಂಬುದು ನಟ ರಜನೀಕಾಂತ್ ಗೆ ಬಿಟ್ಟ ವಿಚಾರ. ಅವರಿಗಾಗಿ ಪಕ್ಷದ ಬಾಗಿಲಂತೂ ತೆರೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಟಿವಿ ಚಾನಲ್ ವೊಂದರ ಜತೆ ಮಾತನಾಡಿದ ಅವರು, ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ರಜನಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ಈ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ರಜನೀಕಾಂತ್ ಅದ್ಭುತ ನಟ. ಇನ್ನು ಮೋದಿ ಮಹಾನ್ ನಾಯಕ. ಅವರು ಪ್ರಧಾನಿಯನ್ನು ಭೇಟಿ ಮಾಡಬೇಕು ಅಂದರೆ ಯಾವ ಸಮಸ್ಯೆಯೂ ಇಲ್ಲ. ನಟ ರಜನೀಕಾಂತ್ ಹಾಗೂ ಪ್ರಧಾನಿ ಮೋದಿ ಮಧ್ಯೆ ಭೇಟಿ ನಡೆಯಲಿದೆ ಎಂಬ ಸುದ್ದಿ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ನಾಯ್ಡು ಹೇಳಿದ್ದಾರೆ.[ಮುಂದಿನ ವಾರ ರಜನಿಕಾಂತ್, ಮೋದಿ ಮಹತ್ವದ ಭೇಟಿ]

Rajinikanth

ಇನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ತಮಿಳಿಸೈ ಸೌಂದರ್ ರಾಜನ್ ಈಚೆಗೆ ರಜನೀಕಾಂತ್ ಬಗ್ಗೆ ಟೀಕೆ ಮಾಡಿದ್ದರು. ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ರನ್ನು ರಜನಿ ಹೊಗಳಿದ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ನಂತರ ಮಾತನಾಡಿರುವ ಅವರು, ಸೈದ್ಧಾಂತಿಕವಾಗಿ ರಜನಿ ಬಿಜೆಪಿಗೆ ಹತ್ತಿರ ಇದ್ದಾರೆ. ಅವರು ಪಕ್ಷಕ್ಕೆ ಸೇರಿದರೆ ಬಲ ಬಂದಂತಾಗುತ್ತದೆ ಎಂದಿದ್ದಾರೆ.[ರಾಜಕೀಯಕ್ಕೆ ಎಂಟ್ರಿ: ಮತ್ತೊಮ್ಮೆ ಸುಳಿವು ಕೊಟ್ಟ ರಜನೀಕಾಂತ್]

Amit Shah

ಇನ್ನು ಟಿಎನ್ ಸಿಸಿ ಅಧ್ಯಕ್ಷ ಸು ತಿರುನಾವಕ್ಕರಸರ್ ಮಾತನಾಡಿ, ರಜನಿ ಸ್ವಂತ ಪಕ್ಷ ಆರಂಭಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

{promotion-urls}

English summary
It is upto Rajinikanth to join the BJP or not. The doors are however open to him, BJP's national president Amit Shah said. Speaking to a television channel, Shah said that it was up to the actor to take a decision on the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X