• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಡಾಖ್‌ನಲ್ಲಿ ಭಾರತ-ಚೀನಾ ಉನ್ನತ ಮಟ್ಟದ ಮಾತುಕತೆ

|

ನವದೆಹಲಿ, ಜೂನ್ 2: ಭಾರತ-ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಇಂದು ಲಡಾಖ್‌ನಲ್ಲಿ ಉನ್ನತ ಮಟ್ಟದ ಮಾತುಕತೆ ನಡೆಯಲಿದೆ.

ಲಡಾಖ್ ಗಡಿ ಭಾಗದಲ್ಲಿ ನಿರ್ಮಾಣಗೊಂಡಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸುವ ಕ್ರಮವಾಗಿ ಜೂನ್ 2 ರಂದು ಭಾರತ ಮತ್ತು ಚೀನಾ ಸೇನೆ ಉನ್ನತ ಹೈಕಮಾಂಡರ್ ಮಟ್ಟದ ಮಾತುಕತೆ ನಡೆಸಲಿದೆ ಎಂದು ತಿಳಿದುಬಂದಿದೆ.

ಅಮೆರಿಕ-ಚೀನಾ ಬಿಕ್ಕಟ್ಟು: ಅಮೆರಿಕ ಪರ ನಿಲ್ಲದಂತೆ ಭಾರತಕ್ಕೆ ಎಚ್ಚರಿಕೆ ಕೊಟ್ಟ ಚೀನಾ

ಎರಡೂ ಮಿಲಿಟರಿಗಳ ಮಧ್ಯೆ ಇಂದು ಉನ್ನತ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ ಎಂದು ನಿರ್ದಿಷ್ಟ ಮೂಲದಿಂದ ತಿಳಿದುಬಂದಿದೆ. ಎರಡೂ ದೇಶಗಳ ಮೇಜರ್ ಜನರಲ್ ರಾಂಕ್ ಮಟ್ಟದ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಮೂರನೇ ಹೈಕಮಾಂಡರ್ ಮಟ್ಟದ ಮಾತುಕತೆ ಇದಾಗಿದೆ.

ಎರಡೂ ದೇಶಗಳ ಕಮಾಂಡರ್ ಮಧ್ಯೆ ಮಾತುಕತೆ

ಎರಡೂ ದೇಶಗಳ ಕಮಾಂಡರ್ ಮಧ್ಯೆ ಮಾತುಕತೆ

ಎರಡೂ ದೇಶಗಳ ಕಮಾಂಡರ್ ಅಧಿಕಾರಿಗಳ ಮಧ್ಯೆ ಮೂರು ಹಂತಗಳಲ್ಲಿ ಸಭೆ ನಡೆಯುತ್ತವೆ, ಇದರಲ್ಲಿ ಸ್ಥಳೀಯ ಕಮಾಂಡರ್ ಅಥವಾ ಕರ್ನಲ್ ಮಟ್ಟ, ಸ್ಟೇಷನ್ ಕಮಾಂಡರ್ ಅಥವಾ ಬ್ರಿಗೇಡಿಯರ್ ಮಟ್ಟ ಮತ್ತು ಅತ್ಯುನ್ನತವಾದದ್ದು ಎಚ್‌ಎಲ್‌ಸಿಎಂ ಎಂದು ಕರೆಯಲ್ಪಡುವ ಪ್ರಮುಖ ಸಾಮಾನ್ಯ ಮಟ್ಟವಾಗಿದೆ. ಇವುಗಳು ತುರ್ತು ಸಭೆಗಳಾಗಿದ್ದು, ತೀರಾ ಅಗತ್ಯವಿರುವ ಸಂದರ್ಭಗಳಲ್ಲಿ ಚರ್ಚೆ ನಡೆಸುವ ಸಭೆಗಳಾಗಿರುತ್ತದೆ. ಉಳಿದ ದಿನಗಳಲ್ಲಾದರೆ ಪ್ರಮುಖ ದಿನಗಳಲ್ಲಿ ಮಾತ್ರ ನಿಗದಿತ ಸಭೆಗಳು ನಡೆಯುತ್ತವೆ.

ಲಡಾಖ್‌ನಲ್ಲಿ ಚೀನಾ ಸೇನೆ ನಿಯೋಜನೆ

ಲಡಾಖ್‌ನಲ್ಲಿ ಚೀನಾ ಸೇನೆ ನಿಯೋಜನೆ

ಲಡಾಖ್ ನಲ್ಲಿ ಮೇ 5-6ರ ಮಧ್ಯರಾತ್ರಿ ಸೈನ್ಯವನ್ನು ಚೀನಾ ನಿಯೋಜಿಸಿತು. ಎರಡು ದೇಶಗಳ ಸೈನಿಕರು ಪಿಂಗೊಂಗ್ ತ್ಸೋ ಸರೋವರದ ಉತ್ತರ ಪಾರ್ಶ್ವದ ಮೇಲೆ ಫಿಂಗರ್ ಫೈವ್ ಎಂಬ ಸ್ಥಳದಲ್ಲಿ ಪರಸ್ಪರ ಘರ್ಷಣೆ ನಡೆಸಿದರು. ಘರ್ಷಣೆಯಲ್ಲಿ ಎರಡೂ ದೇಶಗಳ ಹೆಚ್ಚಿನ ಸಂಖ್ಯೆಯ ಸೈನಿಕರು ಗಾಯಗೊಂಡಿದ್ದಾರೆ. ಅಲ್ಲಿಂದ ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಭಾರತ-ಚೀನಾ ಗಡಿಯಲ್ಲಿ ಸೇನಾ ಪಡೆಗಳಿಂದ ಶಸ್ತ್ರಾಸ್ತ್ರ ರವಾನೆ: ಕಾರಣವೇನು?

ಭಾರತದ ಅಭಿಪ್ರಾಯ ತಿಳಿಸಲು ಉತ್ತಮ ಅವಕಾಶ

ಭಾರತದ ಅಭಿಪ್ರಾಯ ತಿಳಿಸಲು ಉತ್ತಮ ಅವಕಾಶ

ನಮ್ಮ ಕಡೆಯ ಅಭಿಪ್ರಾಯಗಳನ್ನು ಹೇಳಲು ಉತ್ತಮ ಅವಕಾಶ ಒದಗಿಬಂದಿದೆ. ಮೊದಲ ಸಭೆಗಳಲ್ಲಿ ಎರಡೂ ಕಡೆಯವರು ತಮ್ಮ ಅಭಿಪ್ರಾಯಗಳನ್ನು ಮಾತ್ರ ಮಂಡಿಸಿದರು. ಎರಡನೇ ಸಭೆಯಲ್ಲಿ ಕೆಲವು ಅಂಶಗಳ ಮೇಲೆ ಒಪ್ಪಂದವಾಗಿತ್ತು. ಆದರೆ ಈ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಎರಡನೇ ಎಚ್‌ಸಿಎಲ್‌ಎಂ ಸಭೆಯ ನಂತರವೇ ಲಡಾಖ್ ಗಡಿ ಭಾಗದಿಂದ ಭಾರೀ ವಾಹನಗಳನ್ನು ಹಿಂದಕ್ಕೆ ಸರಿಸಲಾಯಿತು ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಅಮೆರಿಕದ ಪರ ವಹಿಸದಂತೆ ಭಾರತಕ್ಕೆ ಚೀನಾ ಎಚ್ಚರಿಕೆ

ಅಮೆರಿಕದ ಪರ ವಹಿಸದಂತೆ ಭಾರತಕ್ಕೆ ಚೀನಾ ಎಚ್ಚರಿಕೆ

ಒಂದೆಡೆ ಚೀನಾ ಭಾರತದ ಮಧ್ಯೆ ಗಡಿ ವಿಚಾರಕ್ಕೆ ಸಂಘರ್ಷಗಳು ನಡೆಯುತ್ತಿದ್ದರೆ, ಕೊರೊನಾ ವೈರಸ್ ವಿಚಾರವಾಗಿ ಅಮೆರಿಕ ಹಾಗೂ ಚೀನಾದ ನಡುವೆ ಕಿತ್ತಾಟ ನಡೆಯುತ್ತಿದೆ. ಅಮೆರಿಕವು ಚೀನಾ ವಿದ್ಯಾರ್ಥಿಗಳನ್ನು ಅಮೆರಿಕಕ್ಕೆ ಬಾರದಂತೆ ತಡೆ ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ಚೀನಾದ ಜೊತೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಭಾರತವು ಅಮೆರಿಕಕ್ಕೆ ಸಹಾಯ ಮಾಡಲು ಒಲವು ತೋರಿತ್ತು, ಹೀಗಾಗಿ ಚೀನಾವು ಅಮೆರಿಕಕ್ಕೆ ಸಹಾಯ ಮಾಡದಂತೆ ಎಚ್ಚರಿಕೆ ನೀಡಿದೆ.

ಚೀನಾ ಮತ್ತು ಭಾರತ ಸೈನಿಕರ ಘರ್ಷಣೆ ವಿಡಿಯೋ ತಿರಸ್ಕರಿಸಿದ ಸೈನ್ಯ

English summary
Ladakh LAC is ready for yet another exercise towards improving the tensed atmosphere with the Chinese Army and Indian Army scheduled to hold a high-level meeting on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X