ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದೆಡೆಗೆ ಮುಖ ಮಾಡಿ ನಿಂತ ಚೀನಾದ ಅತ್ಯಾಧುನಿಕ ಡ್ರೋನ್‌, ಜೆಟ್‌ಗಳು: ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರಗಳು

|
Google Oneindia Kannada News

ನವದೆಹಲಿ, ಡಿಸೆಂಬರ್ 19: ಅರುಣಾಚಲದ ತವಾಂಗ್‌ನಲ್ಲಿ ಘರ್ಷಣೆ ನಡೆದ ಕೆಲವೇ ದಿನಗಳಲ್ಲಿ ಚೀನಾ ದೇಶವು ಅತ್ಯಾಧುನಿಕ ಡ್ರೋನ್‌ ಹಾಗೂ ಜೆಟ್‌ಗಳನ್ನು ಗಡಿ ರೇಖೆಯ ಬಳಿ ತಂದು ನಿಲ್ಲಿಸಿದೆ. ಇದಕ್ಕೆ ಸಂಬಂಧಿಸಿದ ಹೈ-ರೆಸಲ್ಯೂಶನ್‌ ಫೋಟೊಗಳನ್ನು ಪಡೆಯುವಲ್ಲಿ ಸುದ್ದಿಸಂಸ್ಥೆ 'ಎನ್‌ಡಿಟಿವಿ' ಸಫಲವಾಗಿದೆ.

ಭಾರತದ ಗಡಿ ರೇಖೆಗೆ ಸಮೀಪವಿರುವ ಟಿಬೆಟಿಯನ್ ವಾಯುನೆಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಡ್ರೋನ್‌ಗಳು ಮತ್ತು ಯುದ್ಧ ವಿಮಾನಗಳನ್ನು ತಂದು ನಿಲ್ಲಿಸಿದೆ. ಇವುಗಳು ಭಾರತದ ಈಶಾನ್ಯ ದಿಕ್ಕಿನ ವಿರುದ್ಧ ಮುಖ ಮಾಡಿ ನಿಂತಿವೆ.

ಗಡಿ ವಿವಾದ: 'ಸುಪ್ರೀಂ' ತೀರ್ಪು ಅಂತಿಮ ಎಂದ ಅಮಿತ್ ಶಾ ಗಡಿ ವಿವಾದ: 'ಸುಪ್ರೀಂ' ತೀರ್ಪು ಅಂತಿಮ ಎಂದ ಅಮಿತ್ ಶಾ

 ಹೆಚ್ಚಿದ ಚೀನಾ ದೇಶದ ವಾಯು ಚಟುವ ಟಿಕೆ

ಹೆಚ್ಚಿದ ಚೀನಾ ದೇಶದ ವಾಯು ಚಟುವ ಟಿಕೆ

ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ದೇಶದ ವಾಯುಚಟುವಟಿಕೆ ಹೆಚ್ಚಿದೆ ಎಂದು ತಿಳಿದುಬಂದಿದೆ. ಆ ಹಿನ್ನೆಲೆಯಲ್ಲಿ ಭಾರತದ ವಾಯುಪಡೆಯು ಯುದ್ಧ ವಾಯು ವಿಮಾನಗಳು ಗಸ್ತು ತಿರುಗುತ್ತಿರುವುದೂ ಸಹ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಳೆದ ಕೆಲವು ವಾರಗಳಲ್ಲಿ, ಅರುಣಾಚಲದ ಗಡಿಯಲ್ಲಿನ ವಾಯು ನಿಯಮಗಳನ್ನು ಚೀನಾ ಉಲ್ಲಂಘಿಸಿದೆ ಎಂದು ಗೊತ್ತಾಗಿದೆ. ಚೀನಾದ ವಿಮಾನಗಳನ್ನು ಪತ್ತೆಹಚ್ಚಿದ ನಂತರ ಭಾರತದ ವಾಯುಪಡೆಯು ತನ್ನ ಯುದ್ಧವಿಮಾನಗಳನ್ನು ಎರಡು ಸಾರಿ ಗಸ್ತು ಹೊಡೆಸಿರುವ ಮಾಹಿತಿಯೂ ಲಭ್ಯವಾಗಿದೆ.

 ಚೀನಾ ಬಳಿ ಅತ್ಯಾಧುನಿಕ ಸೋರಿಂಗ್‌ ಡ್ರ್ಯಾಗನ್‌

ಚೀನಾ ಬಳಿ ಅತ್ಯಾಧುನಿಕ ಸೋರಿಂಗ್‌ ಡ್ರ್ಯಾಗನ್‌

ಅರುಣಾಚಲ ಪ್ರದೇಶದ ಗಡಿಯ ಈಶಾನ್ಯಕ್ಕೆ, ಕೇವಲ 150 ಕಿಮೀ ದೂರದಲ್ಲಿರುವ ಚೀನಾದ ಬಾಂಗ್ಡಾ ಏರ್‌ಬೇಸ್‌ನ ಚಿತ್ರದದಲ್ಲಿ ಅತ್ಯಾಧುನಿಕ WZ-7 'ಸೋರಿಂಗ್ ಡ್ರ್ಯಾಗನ್' ಡ್ರೋನ್‌ಗಳು ನಿಂತಿರುವುದು ಕಂಡುಬಂದಿದೆ.

2021 ರಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಸೋರಿಂಗ್ ಡ್ರ್ಯಾಗನ್ ಅನಾವರಣಗೊಂಡಿದೆ. ಇದು 10 ಗಂಟೆಗಳವರೆಗೆ ತಡೆರಹಿತವಾಗಿ ಹಾರಬಲ್ಲದು. ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಕ್ರೂಸ್ ಕ್ಷಿಪಣಿಗಳಿಗೆ ನೆಲದ ಮೇಲಿನ ಡೇಟಾವನ್ನು ರವಾನಿಸಲು ಇದರಿಂದ ಸಾಧ್ಯವಾಗುತ್ತದೆ.

 ಭಾರತದ ಬಳಿ ಇಲ್ಲ ಇಂತಹ ಡ್ರೋನ್‌

ಭಾರತದ ಬಳಿ ಇಲ್ಲ ಇಂತಹ ಡ್ರೋನ್‌

ಚೀನಾ ಬಳಿ ಇರುವ ಸೋರಿಂಗ್ ಡ್ರ್ಯಾಗನ್‌ ಡ್ರೋನ್‌ಗಳು ಭಾರತದ ಬಳಿ ಇಲ್ಲ ಎಂಬುದು ಗೊತ್ತಾಗಿದೆ. ಈ ವಿಚಾರವಾಗಿ 'ಎನ್‌ಡಿಟಿವಿ' ಜೊತೆ ಮಾತನಾಡಿರುವ ಮಾಜಿ ಐಎಎಫ್‌ ಫೈಟರ್ ಸಮೀರ್ ಜೋಶಿ, 'ಈ ರೀತಿಯ ಡ್ರೋಣ್‌ಗಳ ಸ್ಥಾಪನೆ ಹಾಗೂ ಕಾರ್ಯಾಚರಣೆಗೆ ಉತ್ತಮ ಪರಿಸರ ಹೊಂದಿರುವ ಜಾಗಗಳು ಬೇಕಾಗುತ್ತವೆ. ಈಶಾನ್ಯ ಭಾರತದ ಮೆಕ್ ಮಹೊನ್ ರೇಖೆಯ ಸುತ್ತಲೂ ಸಕ್ರಿಯ ನೆಟ್‌ವರ್ಕ್ ಹೊಂದಿರುವ ಪರಿಸರವನ್ನು ನಿರ್ಮಿಸಲಾಗುತ್ತಿದೆ' ಎಂದು ಹೇಳಿದ್ದಾರೆ.

ಹೊಸ ಪೀಳಿಗೆಯ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲು ಭಾರತದ ಸಶಸ್ತ್ರ ಪಡೆ ನ್ಯೂಸ್ಪೇಸ್ ಹಿಂದೂಸ್ತಾನ್ ಏರೋನಾಟಿಕ್ಸ್‌ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಚೀನೀ ಡ್ರೋನ್‌ಗಳು ಸಮಗ್ರ ವ್ಯವಸ್ಥೆಯನ್ನು ಒಳಗೊಂಡವೆ. ಭಾರತೀಯ ವಾಯುನೆಲೆಗಳ ನಿಖರ ಮೇಲ್ವಿಚಾರಣೆಗಾಗಿ ಈ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

 ಫ್ಲಾಂಕರ್-ಟೈಪ್ ಫೈಟರ್ ಜೆಟ್‌ ಹೊಂದಿರುವ ಚೀನಾ

ಫ್ಲಾಂಕರ್-ಟೈಪ್ ಫೈಟರ್ ಜೆಟ್‌ ಹೊಂದಿರುವ ಚೀನಾ

ಬಾಂಗ್ಡಾ ಏರ್‌ಬೇಸ್‌ನ ಡಿಸೆಂಬರ್ 14 ರ ಚಿತ್ರಗಳ ಪ್ರಕಾರ, ಫ್ಲೈಟ್-ಲೈನ್‌ನಲ್ಲಿ ಎರಡು ಫ್ಲಾಂಕರ್-ಟೈಪ್ ಫೈಟರ್ ಜೆಟ್‌ಗಳನ್ನು ಚೀನಾ ನಿಲ್ಲಿಸಿದೆ. ಇವುಗಳನ್ನು ಭಾರತೀಯ ವಾಯುಪಡೆ ಹೊಂದಿದೆ. ಇವುಗಳು ರಷ್ಯಾ ವಿನ್ಯಾಸಗೊಳಿಸಿದ Su-30MKI ಯುದ್ಧವಿಮಾನದ ಮೇಡ್-ಇನ್-ಚೀನಾ ರೂಪಾಂತರಗಳಾಗಿವೆ.

'ಇತ್ತೀಚಿಗೆ ಬಂದ ವರದಿಗಳ ಜೊತೆಗೆ ಫೋಟೋಗಳನ್ನು ಗಮನಿಸಿದ್ದೇನೆ. ಚೀನಾ ನಿರ್ಮಿಸಿರುವ ಪ್ಲಾಟ್‌ಫಾರ್ಮ್‌ಗಳು, ಸಂಘರ್ಷ ವಲಯಗಳಲ್ಲಿ ಭಾರತದ ಚಲನವಲನಗಳ ಮೇಲೆ ನಿಗಾ ಇರಿಸಲು ಹಾಗೂ ಮೇಲ್ವಿಚಾರಣೆ ಮಾಡಲು ಬಳಕೆಯಾಗುತ್ತಿವೆ' ಎಂದು ಫೋರ್ಸ್‌ನ ಪ್ರಮುಖ ಮಿಲಿಟರಿ ವಿಶ್ಲೇಷಕ ಸಿಮ್ ಟಾಕ್ ಹೇಳಿದ್ದಾರೆ.

ವಿಶೇಷವಾಗಿ, 2017 ರ ಡೋಕ್ಲಾಮ್ ಘಟನೆಯ ನಂತರ ಟಿಬೆಟ್ ಪ್ರದೇಶದಲ್ಲಿ ಚೀನಾ ದೇಶವು ಹೆಚ್ಚು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇದು ಭಾರತದ ವಾಯುಪಡೆಗೆ ಬೆದರಿಕೆ ಎಂದೇ ಹೇಳಬಹುದಾಗಿದೆ.

ಕಳೆದ ವಾರ ಅರುಣಾಚಲ ಪ್ರದೇಶದಲ್ಲಿ ಭಾರತೀಯ ವಾಯುಪಡೆಯು ಪ್ರಮುಖ ಯುದ್ಧ ತಾಲೀಮುಗಳನ್ನು ಕೈಗೊಂಡಿತು. ಇದರ ಮೇಲೆ ನಿಗಾ ಇರಿಸಲು ಹಾಗೂ ಮೇಲ್ವಿಚಾರಣೆ ಮಾಡಲು ಚೀನಾ ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸುತ್ತಿರುವುದು ಬಾಂಗ್ಡಾದ ಚಿತ್ರಗಳಲ್ಲಿ ಕಂಡುಬಂದಿದೆ. ಐಎಎಫ್‌ ತಂತ್ರಗಳ ಬಗ್ಗೆ ತಿಳಿಯಲು, ಭಾರತೀಯ ರಾಡಾರ್ ಮತ್ತು ಎಲೆಕ್ಟ್ರಾನಿಕ್ ಹೊರಸೂಸುವಿಕೆಯನ್ನು ಪತ್ತೆಹಚ್ಚಲು ಚೀನಿಯರು ಪ್ರಯತ್ನಗಳನ್ನು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 ಹೆಚ್ಚಿದ ಚೀನಾದ ವಾಯುಶಕ್ತಿ

ಹೆಚ್ಚಿದ ಚೀನಾದ ವಾಯುಶಕ್ತಿ

'ಕಳೆದ ಕೆಲವು ವರ್ಷಗಳಿಂದ ಚೀನಾದ ವಾಯುಶಕ್ತಿ ಹೆಚ್ಚುತ್ತಿದೆ. ಭಾರತದೊಂದಿಗಿನ ತನ್ನ ಗಡಿಯಲ್ಲಿ ಚೀನಾದ ವಾಯುಶಕ್ತಿ ವಿಸ್ತರಣೆಯನ್ನು ನಾವು ಟ್ರ್ಯಾಕ್ ಮಾಡುತ್ತಿದ್ದೇವೆ. ಹೊಸ ವಿಮಾನ ನಿಲ್ದಾಣಗಳು ಮತ್ತು ಹೆಲಿಪೋರ್ಟ್‌ಗಳ ನಿರ್ಮಾಣದೊಂದಿಗೆ ವಾಯು ನೆಲೆಗಳನ್ನು ವಿಸ್ತರಿಸುವುದು ಮತ್ತು ನವೀಕರಿಸುವುದನ್ನು ನಾವು ವೀಕ್ಷಿಸುತ್ತಿದ್ದೇವೆ' ಎಂದು ವಾಯು ವಿಶ್ಲೇಷಕ ಡಾಮಿಯನ್ ಸೈಮನ್ ತಿಳಿಸಿದ್ದಾರೆ.

2020 ರಲ್ಲಿ ಭಾರತದೊಂದಿಗಿನ ಗಡಿ ಉದ್ವಿಗ್ನತೆಯು ಪ್ರಾರಂಭವಾದಾಗಿನಿಂದ ಯುದ್ಧವಿಮಾನಗಳು, ಡ್ರೋನ್‌ಗಳು, ಎಲೆಕ್ಟ್ರಾನಿಕ್ ಯುದ್ಧ ಮತ್ತು ವಿಚಕ್ಷಣ ಸ್ವತ್ತುಗಳನ್ನು ಚೀನಾ ಹೆಚ್ಚಿಸಿಕೊಂಡಿದೆ. ಚೀನಾ ತನ್ನ ವಾಯು ನೆಲೆಗಳು ಮತ್ತು ವಾಯುಯಾನ ಸ್ವತ್ತುಗಳನ್ನು ನವೀಕರಿಸುತ್ತಿರುವ ರೀತಿ ನೋಡಿದರೆ ಆತಂಕಕಾರಿಯಾಗಿದೆ.

English summary
High-resolution satellite imagery accessed by NDTV within days of the clashes in Tawang, Arunachal Pradesh, indicates that Beijing has positioned large numbers of drones and fighter aircraft at major Tibetan airbases, which are ranged against India's northeast,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X