ಶಾಲಾ ಮಕ್ಕಳ ಬ್ಯಾಗ್ ಭಾರ ಇಳಿಸಿದ ಛತ್ತೀಸ್‌ಗಢ ಸರ್ಕಾರ

ಛತ್ತೀಸ್‌ಗಢ, ಜುಲೈ 7: ಕೊರೊನಾ ಬಳಿಕ ಶಾಲೆಗಳು ಆರಂಭವಾಗಿದ್ದು ಶಾಲೆಯತ್ತ ಮಕ್ಕಳನ್ನು ಸೆಳೆಯಲು ಅನೇಕ ಶಿಕ್ಷಣ ಸಂಸ್ಥೆಗಳು ಹಲವಾರು ರೀತಿಯ ಯೋಜನೆಗಳನ್ನು ಮಾಡುತ್ತಿವೆ. ಈ ನಡುವೆ ಛತ್ತೀಸ್‌ಗಢ ಸರ್ಕಾರ ಮಕ್ಕಳಿಗೆ ಪ್ರತಿನಿತ್ಯ ಹೊರೆಯಾಗುವ ಬ್ಯಾಗ್‌ ಬಗ್ಗೆ ಯೋಚನೆ ಮಾಡಿದೆ. ಸರ್ಕಾರ ಈ ಹೊರೆಯನ್ನ ಕಡಿಮೆ ಮಾಡಲು ಯೋಚಿಸಿದೆ. ವಾರದಲ್ಲಿ ಒಂದು ದಿನ ಮಕ್ಕಳಿಗೆ ಬ್ಯಾಗ್ ಭಾರವನ್ನು ಕಡಿಮೆ ಮಾಡಿದೆ. ಅಂದರೆ ನಿತ್ಯ ಶಾಲೆಗೆ ಹೋಗುವ ಮಕ್ಕಳಿಗೆ ಒಂದು ದಿನ ಬ್ಯಾಗ್ ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ.

ಹೌದು.. ಜುಲೈ 7 ರಂದು ಛತ್ತೀಸ್‌ಗಢ ಸರ್ಕಾರ "ಬ್ಯಾಗ್‌ಲೆಸ್ ಡೇಸ್" ಎಂದು ಆಚರಿಸಲು ಶಾಲೆಗಳಿಗೆ ಸೂಚನೆ ನೀಡಿದೆ. ಈ ದಿನ ಶಾಲೆಯಲ್ಲಿ ಮಕ್ಕಳಿಗೆ ಯೋಗ, ದೈಹಿಕ ಚಟುವಟಿಕೆ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರತಿ ಶನಿವಾರದಂದು ಶಾಲೆಗಳಲ್ಲಿ "ಬ್ಯಾಗ್‌ ಇಲ್ಲದ ದಿನವನ್ನು" ಆಯೋಜಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೂಲಕ ಶಾಲಾ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಕಲಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮತ್ತು ಉಪಯುಕ್ತವಾಗಿಸುವ ಕ್ರಮಗಳನ್ನು ಜಾರಿಗೆ ತಂದಿದೆ.

ಸೂಚನೆ ಪ್ರಕಾರ ಪ್ರಾಂಶುಪಾಲರು ತಿಂಗಳ ಪ್ರತಿ ಶನಿವಾರ ಕಾರ್ಯಕ್ರಮಗಳನ್ನು ನಿಗದಿಪಡಿಸಬೇಕಾಗುತ್ತದೆ. ಆ ಯೋಜನೆಗಳನ್ನು ಸೂಚನಾ ಫಲಕಗಳಲ್ಲಿ ಪೋಸ್ಟ್ ಮಾಡಬೇಕಾಗುತ್ತದೆ. ಶನಿವಾರದಂದು ವಿದ್ಯಾರ್ಥಿಗಳ ಕೆಲಸವನ್ನು ಸಹ ತೋರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

Chhattisgarh government has reduced the burden of school childrens bags

ಆದಷ್ಟು ಬೇಗ ನಿತ್ಯ ಇದನ್ನು ಕಾರ್ಯರೂಪಕ್ಕೆ ತರಲು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ವ್ಯಾಯಾಮ, ಯೋಗ, ಕ್ರೀಡಾ ಸ್ಪರ್ಧೆಗಳು, ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು, ಮೌಲ್ಯ-ಶಿಕ್ಷಣ, ಕಲೆ-ಶಿಕ್ಷಣ ಇತ್ಯಾದಿಗಳನ್ನು ಆಯೋಜಿಸಲಾಗುವುದು.

Chhattisgarh government has reduced the burden of school childrens bags

ಶನಿವಾರದಂದು ಶಾಲೆಗಳಲ್ಲಿ ಯೋಗ, ವ್ಯಾಯಾಮ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಈ ಹಂತವು ಮಕ್ಕಳ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ ಮತ್ತು ಶಾಲೆಗಳೊಂದಿಗೆ ಸಂಪರ್ಕದಲ್ಲಿರಲು ಅವರಿಗೆ ಸಹಾಯ ಮಾಡುತ್ತದೆ. ಮಕ್ಕಳಿಗೆ ಶಾಲಾ ಶಿಕ್ಷಣವು ತಿಳಿವಳಿಕೆ ಮತ್ತು ಮನರಂಜನೆಯನ್ನು ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+