ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್‌ನೌ ಸಮೀಕ್ಷೆ : ಛತ್ತೀಸ್‌ಗಢದಲ್ಲಿ ಮತ್ತೆ ಬಿಜೆಪಿ ಸರ್ಕಾರ!

|
Google Oneindia Kannada News

ನವದೆಹಲಿ, ಅಕ್ಟೋಬರ್ 08 : ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಕುರಿತು ಟೈಮ್ಸ್ ನೌ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ. ಬಿಜೆಪಿ 47 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಸೋಮವಾರ ಸಂಜೆ ಟೈಮ್ಸ್‌ ನೌ ನಡೆಸಿದ ಸಮೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಛತ್ತೀಸ್‌ಗಢದ 90 ಸ್ಥಾನಗಳಿಗೆ ನವೆಂಬರ್ 12 ಮತ್ತು 20ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ.

ಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜ

2018ರ ಚುನಾವಣೆಯಲ್ಲಿ ಬಿಜೆಪಿ 47, ಕಾಂಗ್ರೆಸ್ 33, ಇತರರು 10 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಟೈಮ್ಸ್‌ ನೌ ಸಮೀಕ್ಷೆ ಹೇಳಿದೆ. ಬಿಜೆಪಿ 2013ರಲ್ಲಿ ಗಳಿಸಿದ ಸ್ಥಾನಕ್ಕಿಂತ 2 ಸ್ಥಾನ ಕಡಿಮೆ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

ಟೈಮ್ಸ್‌ ನೌ ಸಮೀಕ್ಷೆ: ರಾಜಸ್ಥಾನದಲ್ಲಿ ಪುಟಿದೇಳಲಿದೆ ಕಾಂಗ್ರೆಸ್‌, ಕುಸಿಯಲಿದೆ ಬಿಜೆಪಿಟೈಮ್ಸ್‌ ನೌ ಸಮೀಕ್ಷೆ: ರಾಜಸ್ಥಾನದಲ್ಲಿ ಪುಟಿದೇಳಲಿದೆ ಕಾಂಗ್ರೆಸ್‌, ಕುಸಿಯಲಿದೆ ಬಿಜೆಪಿ

2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 49, ಕಾಂಗ್ರೆಸ್ 39, ಇತರರು 2 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ 2, ಕಾಂಗ್ರೆಸ್ 6 ಸ್ಥಾನ ಕಡಿಮೆಗಳಿಸಲಿದೆ.

ಚುನಾವಣೆಯಲ್ಲಿ ಯಾರಿಗೆ ಎಷ್ಟು ಸೀಟು?

ಚುನಾವಣೆಯಲ್ಲಿ ಯಾರಿಗೆ ಎಷ್ಟು ಸೀಟು?

ಛತ್ತೀಸ್‌ಗಢ ವಿಧಾನಸಭೆಯಲ್ಲಿ 90 ಸ್ಥಾನಗಳಿವೆ. ಟೈಮ್ಸ್‌ ನೌ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ.

ಸಮೀಕ್ಷೆಯ ಫಲಿತಾಂಶ

* ಬಿಜೆಪಿ 47
* ಕಾಂಗ್ರೆಸ್ 33
* ಇತರರು 10 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.

2013ರ ಫಲಿತಾಂಶ

2013ರ ಫಲಿತಾಂಶ

2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 49, ಕಾಂಗ್ರೆಸ್ 39, ಇತರರು 2 ಸ್ಥಾನಗಳಲ್ಲಿ ಜಯಗಳಿಸಿದ್ದರು.

ಆದರೆ, 2018ರ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ 2, ಕಾಂಗ್ರೆಸ್ 6 ಸ್ಥಾನ ಕಡಿಮೆಗಳಿಸಲಿದ್ದಾರೆ. ಇತರರು 8 ಸ್ಥಾನ ಹೆಚ್ಚುಗಳಿಸಲಿದ್ದಾರೆ.

ಸಮೀಕ್ಷೆಗಳ ಸಮೀಕ್ಷೆ ಏನು ಹೇಳುತ್ತದೆ?

ಸಮೀಕ್ಷೆಗಳ ಸಮೀಕ್ಷೆ ಏನು ಹೇಳುತ್ತದೆ?

* ವಾರ್ ರೂಂ ಸಮೀಕ್ಷೆ ಪ್ರಕಾರ ಬಿಜೆಪಿ 47, ಕಾಂಗ್ರೆಸ್ 33, ಬಿಎಸ್‌ಪಿ + ಜೆಸಿಸಿ 10 ಸ್ಥಾನಗಳಿಸಲಿದೆ.
* ಎಬಿಪಿ ಸಮೀಕ್ಷೆ ಪ್ರಕಾರ ಬಿಜೆಪಿ 40, ಕಾಂಗ್ರೆಸ್ 47, ಬಿಎಸ್‌ಪಿ+ಜೆಸಿಸಿ 3 ಸ್ಥಾನಗಳಲ್ಲಿ ಜಯಗಳಿಸಲಿದೆ.
* ಸಮೀಕ್ಷೆಗಳ ಸಮೀಕ್ಷೆ ಪ್ರಕಾರ ಬಿಜೆಪಿ 43, ಕಾಂಗ್ರೆಸ್ 40 ಬಿಎಸ್‌ಪಿ+ಜೆಸಿಸಿ 7 ಸ್ಥಾನಗಳಲ್ಲಿ ಜಯಗಳಿಸಲಿದೆ.

ವೇಳಾಪಟ್ಟಿ ಘೋಷಣೆ

ವೇಳಾಪಟ್ಟಿ ಘೋಷಣೆ

2 ಹಂತದಲ್ಲಿ ಛತ್ತೀಸ್‌ಗಢ ವಿಧಾನಸಭೆಯ 90 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ನವೆಂಬರ್ 12ರಂದು ನಕ್ಸಲ್ ಪೀಡಿತ ಪ್ರದೇಶಗಳ 18 ಕ್ಷೇತ್ರಗಳಿಗೆ ಮತದಾನ, ನವೆಂಬರ್ 20ರಂದು 72 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

English summary
Chhattisgarh assembly election 2018 schedule announced. Election will be held on November 12 and 20th. Here is a Times Now pre-poll survey result. BJP will get majority in elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X