ಬಿಜೆಪಿ VS ಕಾಂಗ್ರೆಸ್: ‘ನಕ್ಸಲ್’ ನಾಡಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮ್ಯಾಜಿಕ್ ನಂಬರ್!
ಸಮೀಕ್ಷೆಗಳು ಹೇಳಿದಂತೆ ಇದೀಗ 'ನಕ್ಸಲ್' ನಾಡಲ್ಲಿ ಫಲಿತಾಂಶ ಹೊರಬೀಳುತ್ತಿದೆ. ಇಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆಲುವಿನ ನಗೆ ಬೀರುವುದು ಬಹುತೇಕ ಗ್ಯಾರಂಟಿ ಆಗಿದೆ. ಇತ್ತೀಚಿನ ಮಾಹಿತಿಯಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ಅಂತರ ಇದ್ದು, ಕಾಂಗ್ರೆಸ್ ಪಕ್ಷ ಈಗಾಗಲೇ ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಬಹುಮತದ ಗಡಿಯನ್ನು ಮುಟ್ಟಿದೆ.
ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬಿಜೆಪಿ ಈಗ 37 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಭರ್ಜರಿ 46 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 90 ಸ್ಥಾನ ಇರುವ ಛತ್ತೀಸ್‌ಗಢ ರಾಜ್ಯದಲ್ಲಿ ಬಹುಮತ ಪಡೆಯಲು 46 ಸ್ಥಾನ ಬೇಕಿದೆ. ಈಗ ಕಾಂಗ್ರೆಸ್ ಛತ್ತೀಸ್‌ಗಢ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಬಗ್ಗೆ ಮುನ್ಸೂಚನೆ ಸಿಗುತ್ತಿದೆ. ಬಿಜೆಪಿಗೆ ಈ ಮೊದಲು ಛತ್ತೀಸ್‌ಗಢದಲ್ಲಿ ಗಟ್ಟಿ ನೆಲೆ ಇತ್ತು.

ಸುಳ್ಳಾಗುತ್ತಿದೆಯಾ ಬಿಜೆಪಿ ನಿರೀಕ್ಷೆ?
2003, 2008, 2013ರ ಎಲೆಕ್ಷನ್ ಅಖಾಡದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ 2018ರಲ್ಲಿ ಹೀನಾಯ ಸೋಲು ಕಂಡ ಬಿಜೆಪಿ 2023ರಲ್ಲಿ ಮತ್ತೆ ಛತ್ತೀಸ್‌ಗಢ ರಾಜ್ಯವನ್ನು ಗೆದ್ದು ಬೀಗುವ ವಿಶ್ವಾಸದಲ್ಲಿ ಇತ್ತು ಈಗ ಆ ನಿರೀಕ್ಷೆ ಸುಳ್ಳಾಗುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂ ರಾಜ್ಯಗಳಿಗೆ ಚುನಾವಣೆ ನಡೆದ ಚುನಾವಣೆಯಲ್ಲಿ, 4 ರಾಜ್ಯ ಒಂದು ಲೆಕ್ಕವಾದರೆ, ಛತ್ತೀಸ್‌ಗಢ ಚುನಾವಣೆ ಇನ್ನೊಂದು ಲೆಕ್ಕ. ಛತ್ತೀಸ್‌ಗಢ ಇಡೀ ದೇಶದ ಗಮನ ಸೆಳೆದಿತ್ತು. ನಕ್ಸಲ್ ಹಾವಳಿ ಹಿನ್ನೆಲೆ ಛತ್ತೀಸ್‌ಗಢದಲ್ಲಿ ಒಟ್ಟಾರೆ 2 ಹಂತದಲ್ಲಿ ಚುನಾವಣೆ ನಡೆದಿತ್ತು. ನ. 7 ಕ್ಕೆ ಮೊದಲ ಹಂತದಲ್ಲಿ ಮತದಾನ ನಡೆದರೆ, ನವೆಂಬರ್ 17 ಕ್ಕೆ 2ನೇ ಹಂತದಲ್ಲಿ ಚುನಾವಣೆ ನಡೆದಿತ್ತು.
ಚುನಾವಣೋತ್ತರ ಸಮೀಕ್ಷೆ ಹೇಳಿದ್ದು ಏನು?
ಸತತ 3 ಬಾರಿ ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಗೆದ್ದು ಬೀಗಿದ್ದರೂ ಈ ಬಾರಿ ಚುನಾವಣೆಯಲ್ಲಿ ಮತ್ತೆ ಸೋಲಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಲೆಕ್ಕಾಚಾರ ಹೇಳಿವೆ. ಆದ್ರೆ ಇಬ್ಬರ ಮಧ್ಯೆ ಗೆಲುವಿನ ಅಂತರ ಅಷ್ಟು ದೊಡ್ಡದಾಗಿ ಇಲ್ಲ. ಹೀಗಾಗಿ ಛತ್ತೀಸ್‌ಗಢ ಚುನಾವಣೆಯ ಬಗ್ಗೆ ಒಂದಷ್ಟು ಗೊಂದಲ ಇತ್ತು. ಇದೀಗ ಗೊಂದಲ ಬಹುತೇಕ ಬಗೆಹರಿದಿದ್ದು, ಕಾಂಗ್ರೆಸ್ ಈ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದು ಬಹುತೇಕ ಪಕ್ಕಾ ಆಗಿದೆ. ಈಗಿನ ಮಾಹಿತಿಗಳ ಪ್ರಕಾರ ಕಾಂಗ್ರೆಸ್ ಪಕ್ಷ ಛತ್ತೀಸ್‌ಗಢದಲ್ಲಿ ಬಹುತೇಕ ಮ್ಯಾಜಿಕ್ ನಂಬರ್ ತಲುಪಿದೆ. ಇನ್ನು ಕೆಲವೇ ಕ್ಷಣದಲ್ಲಿ ಎಲ್ಲವೂ ಕನ್ಫರ್ಮ್












Click it and Unblock the Notifications