ಛತ್ತೀಸ್‌ಗಢ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶಾಕ್ ನೀಡುತ್ತಿದೆ ಬಿಜೆಪಿ!

ಛತ್ತೀಸ್‌ಗಢ ರಾಜ್ಯದಲ್ಲಿ ಕಾಂಗ್ರೆಸ್ ಸುಲಭವಾಗಿ ಗೆದ್ದು ಬೀಗುತ್ತೆ ಎನ್ನುವ ಲೆಕ್ಕಾಚಾರ ಈಗ ಬದಲಾಗಿದೆ. ಆರಂಭದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಇದೀಗ ಮೆಲ್ಲಗೆ ಹಿಂದೆ ಬೀಳುತ್ತಿದೆ. ಹಾಗೆ ಬಿಜೆಪಿ ಮೆಲ್ಲಗೆ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಇದೇ ಕಾರಣಕ್ಕೆ ಛತ್ತೀಸ್‌ಗಢ ಚುನಾವಣಾ ಅಖಾಡ ರಂಗೇರಿದೆ. ಹಾಗಾದರೆ ಈಗಿನ ಮಾಹಿತಿ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿದೆ?

ಅಷ್ಟಕ್ಕೂ ಛತ್ತೀಸ್‌ಗಢ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂಬ ಕಾಂಗ್ರೆಸ್‌ನ ಲೆಕ್ಕಾಚಾರ ನಿಧಾನವಾಗಿ ಮಂಕಾಗ್ತಿದೆ. ಒಟ್ಟು 90 ಸ್ಥಾನ ಇರುವ, ಛತ್ತೀಸ್‌ಗಢ ರಾಜ್ಯದಲ್ಲಿ ಬಹುಮತ ಪಡೆಯಲು 46 ಸ್ಥಾನ ಬೇಕಿದೆ. ಈ ಮೊದಲು ಕಾಂಗ್ರೆಸ್ ಇಲ್ಲಿ ಭಾರಿ ಬಹುಮತ ಪಡೆಯುವ ಮುನ್ಸೂಚನೆ ಸಿಕ್ಕಿತ್ತು.

 Chhattisgarh Assembly Election 2023: BJP And Congress Equal Fight In Chhattisgarh Election 2023

ಆದ್ರೆ ಈಗ ಟ್ರೆಂಡ್ ಸಂಪೂರ್ಣ ಬದಲಾಗಿದೆ. ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಈಗ ಬಹುಮತಕ್ಕಿಂತ ಕೆಳಗೆ ಬಿದ್ದಿದೆ. ಹೀಗಾಗಿಯೆ ಛತ್ತೀಸ್‌ಗಢ ರಾಜ್ಯದಲ್ಲಿ ಕೂಡ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಎಷ್ಟು ಸ್ಥಾನದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ?

ಇತ್ತೀಚಿನ ಮಾಹಿತಿ ಪ್ರಕಾರ, ಕಾಂಗ್ರೆಸ್ ಛತ್ತೀಸ್‌ಗಢ ರಾಜ್ಯದಲ್ಲಿ 44 ಸ್ಥಾನದಲ್ಲಿ ಮುನ್ನಡೆ ಪಡೆದಿದ್ರೆ ಬಿಜೆಪಿ 44 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪಕ್ಷೇತರರು 2 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಪೈಕಿ ಬಿಜೆಪಿ ಈಗಾಗಲೇ 24 ಸ್ಥಾನದಲ್ಲಿ ಗೆದ್ದಿದೆ. ಈ ನಡುವೆ ಕಾಂಗ್ರೆಸ್ ಕೇವಲ 22 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಛತ್ತೀಸ್‌ಗಢದ ಚುನಾವಣಾ ಅಖಾಡ ರಂಗೇರಿದೆ.

 Chhattisgarh Assembly Election 2023: BJP And Congress Equal Fight In Chhattisgarh Election 2023

ಬೆಳಗ್ಗೆ ಇದ್ದ ಟ್ರೆಂಡ್ ಏನು?

ಇನ್ನು ಬೆಳಗ್ಗೆ ಇಲ್ಲಿನ ಟ್ರೆಂಡ್ ಬೇರೆಯೆ ಆಗಿತ್ತು. ಛತ್ತೀಸ್‌ಗಢ ವಿಧಾನಸಭೆ ಫಲಿತಾಂಶದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಬಿಜೆಪಿ 37 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 46 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ದಿಢೀರ್ ಎಲ್ಲಾ ಬದಲಾಗಿ ಹೋಗುತ್ತಿದ್ದು, ಕಾಂಗ್ರೆಸ್ ಛತ್ತೀಸ್‌ಗಢ ವಿಧಾನಸಭೆ ಫಲಿತಾಂಶದಲ್ಲಿ ಹಿಂದೆ ಬೀಳುತ್ತಿದೆ. ಈ ಮೂಲಕವಾಗಿ ಬಿಜೆಪಿ ಛತ್ತೀಸ್‌ಗಢ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವ ಮುನ್ಸೂಚನೆ ಸಿಕ್ಕಿದೆ. ಈ ಮಧ್ಯೆ ಸಮಾನವಾಗಿ ಹೋರಾಟ ಇರುವ ಕಾರಣ, ಪೂರ್ಣ ಫಲಿತಾಂಶ ಬರುವವರೆಗೂ ಕಾದು ನೋಡಬೇಕು.

ಹೀಗೆ ಛತ್ತೀಸ್‌ಗಢ ಫಲಿತಾಂಶ ಕುತೂಹಲ ಕೆರಳಿಸುತ್ತಿದೆ ಇಲ್ಲಿ ಅಧಿಕಾರ ಹಿಡಿಯೋದಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಭರ್ಜರಿ ಸರ್ಕಸ್ ಮಾಡಿದ್ದವು. ಹೀಗಿದ್ದಾಗ ಛತ್ತೀಸ್‌ಗಢ ಜನರಿಗೆ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ್ರೆ 500 ರೂ.ಗೆ ಸಿಲಿಂಡರ್ ಕೊಡುವ ಭರವಸೆ ಸೇರಿದಂತೆ ಹಲವು ವಾಗ್ದಾನ ನೀಡಲಾಗಿತ್ತು. ಕಾಂಗ್ರೆಸ್ ಕೂಡ ಕರ್ನಾಟಕದ ರೀತಿ ಹಲವು ಗ್ಯಾರಂಟಿಗಳ ಜಾರಿ ಮಾಡುವ ಭರವಸೆ ನೀಡಿತ್ತು. ಆದರೆ ಈಗಿನ ಸ್ಥಿತಿ ನೋಡಿದರೆ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಲಕ್ಷಣ ಕಂಡುಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+