ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢ ಎನ್‌ಕೌಂಟರ್‌ನಲ್ಲಿ PLGA ಮಾವೋವಾದಿ ಹತ್ಯೆ

|
Google Oneindia Kannada News

ರಾಯ್ ಪುರ್, ಮೇ 31: ಛತ್ತೀಸ್ ಗಢದ ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಸಿಪಿಐ ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೀಪಲ್ಸ್ ಲಿಬರೇಷನ್ ಗೊರಿಲ್ಲಾ ಆರ್ಮಿಯ ಸದಸ್ಯೆ ಮೃತಪಟ್ಟಿದ್ದಾಳೆ.

ಜಿಲ್ಲಾ ಮೀಸಲು ಪಡೆಯು ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದು, 24 ವರ್ಷದ ವೈಕು ಪೆಕ್ಕು ಎಂದು ಗುರುತಿಸಲಾಗಿದೆ. ಪಿಎಲ್ ಜಿಎ ತಂಡದ ಸದಸ್ಯೆ ವೈಕು ಪೆಕ್ಕು ತಲೆಗೆ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ದಾಂತೇವಾಡ ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

ನಕ್ಸಲರಿಂದ ಐಇಡಿ ಸ್ಫೋಟ, ಪೊಲೀಸ್ ಅಧಿಕಾರಿ ಸಾವುನಕ್ಸಲರಿಂದ ಐಇಡಿ ಸ್ಫೋಟ, ಪೊಲೀಸ್ ಅಧಿಕಾರಿ ಸಾವು

ಎನ್ ಕೌಂಟರ್ ನಡೆದ ಸ್ಥಳದಲ್ಲಿ ಮೃತದೇಹದ ಜೊತೆ 2 ಕೆಜಿ ಐಇಡಿ, ಕಪ್ಪು ಸಮವಸ್ತ್ರ, ಔಷಧಿ ಮತ್ತು ಹಲವು ಬ್ಯಾಗ್ ನಲ್ಲಿ ತುಂಬಿಸಿದ್ದ ದಿನಬಳಕೆ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

 Chhattisgarh: A Member Of Peoples Liberation Guerrilla Army Killed In Encounter

ಭದ್ರತಾ ಪಡೆಯನ್ನು ಗುರಿಯಾಗಿಸಿ ಗುಂಡಿನ ದಾಳಿ:

ಛತ್ತೀಸ್ ಗಢ ದಾಂತೇವಾಡ ಜಿಲ್ಲೆಯ ಗೀದಂ ಪ್ರದೇಶದಿಂದ 30 ಕಿಲೋ ಮೀಟರ್ ದೂರದ ಗುಮಲ್ನಾರ್ ಎಂಬಲ್ಲಿ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ನಕ್ಸಲರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ವೈಕು-ಪೆಕ್ಕು ಮೃತಪಟ್ಟಿದ್ದು, ಭದ್ರತಾ ಸಿಬ್ಬಂದಿ ಸಾವು-ನೋವಿನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ದಾಂತೇವಾಡ ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ. ಛತ್ತೀಸ್ ಗಢ ದಕ್ಷಿಣ ಭಾಗ, ಬಸ್ತಾರ್ ಸೇರಿದಂತೆ ಏಳು ನಕ್ಸಲ್ ಪೀಡಿತ ಜಿಲ್ಲೆಗಳ ಪೈಕಿ ದಾಂತೇವಾಡದಲ್ಲಿ ನಕ್ಸಲ್ ಹಾವಳಿ ಹೆಚ್ಚುತ್ತಿದೆ.

English summary
Chhattisgarh: A Member Of People's Liberation Guerrilla Army Killed In Encounter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X