Viral Video: ಚಲಿಸುತ್ತಿದ್ದ ರೈಲಿನಲ್ಲಿ ಅಪಾಯಕಾರಿ ಸ್ಟಂಟ್: ಮೂವರ ಬಂಧನ
ಚೆನ್ನೈ, ಅಕ್ಟೋಬರ್ 12: ಚಲಿಸುತ್ತಿದ್ದ ರೈಲಿನಲ್ಲಿ ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುತ್ತಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಚೆನ್ನೈ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಗುಮ್ಮಿಡಿಪೋಂಡಿ ಪ್ರದೇಶದ ಅನ್ಬರಸು ಹಾಗೂ ರವಿಚಂದ್ರನ್, ಪೊನ್ನೇರಿ ಆರುಲ್ ಬಂಧಿತ ವಿದ್ಯಾರ್ಥಿಗಳು.
ಅನ್ಬರಸು, ರವಿಚಂದ್ರನ್ ಹಾಗೂ ಆರುಲ್ ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಚಲಿಸುತ್ತಿದ್ದ ರೈಲಿನಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದರು. ವಿದ್ಯಾರ್ಥಿಗಳ ಈ ಪುಂಡಾಟವನ್ನು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ರೈಲ್ವೆ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದಾರೆ. ವಿಡಿಯೋ ಆಧಾರದ ಮೇಲೆ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ರೈಲ್ವೆ ವ್ಯವಸ್ಥಾಪಕರು ಟ್ವಿಟ್ಪರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ವಿದ್ಯಾರ್ಥಿಗಳು ಕೈನಲ್ಲಿ ಮಚ್ಚು ಹಿಡಿದು ಚಲಿಸುತ್ತಿದ್ದ ರೈಲಿನ ಬಾಗಿಲಿನ ಬಳಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶನ ಮಾಡಿದ್ದಾರೆ. ಅಲ್ಲದೇ ಈ ವೇಳೆ ಜೋರಾಗಿ ಕಿರುಚಾಡಿದ್ದು, ರೈಲಿನಲ್ಲಿದ್ದ ಇತರ ಪ್ರಯಾಣಿಕರು ಆತಂಕಗೊಂಡಿದ್ದಾರೆ.

ರೈಲ್ವೆ ವ್ಯವಸ್ಥಾಪಕರು ಈ ಘಟನೆಯ ಬಳಿಕ ಪ್ರಯಾಣಿಕರಿಗಾಗಿ ಟ್ವೀಟ್ ಮಾಡಿದ್ದು, ರೈಲುಗಳಲ್ಲಿ ಹಾಗೂ ರೈಲ್ವೆ ಆವರಣದಲ್ಲಿ ಯಾರೇ ಇಂತಹ ದುರ್ವತನೆ ಮತ್ತು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವವರ ವಿರುದ್ಧ ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಇಂತಹ ಘಟನೆ ಸಂಭವಿಸಿದ್ದಲ್ಲಿ ಪ್ರಯಾಣಿಕರು ದಯವಿಟ್ಟು ಇಂತಹ ಜನರ ವಿರುದ್ಧ ದೂರು ನೀಡಲು ಮುಂದೆ ಬನ್ನಿ. ನಮ್ಮ ಪ್ರಯಾಣಿಕರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಈ ತಿಂಗಳ ಆರಂಭದಲ್ಲಿ ಮುಂಬೈನಲ್ಲೂ ಕೂಡ ರೈಲಿನಲ್ಲಿ ಪ್ರಯಾಣಿಕರು ದುರ್ವತನೆ ತೋರಿರುವ ಘಟನೆ ನಡೆದಿದೆ. ಥಾಣೆಯಿಂದ ಪನ್ವೇಲ್‌ಗೆ ಚಲಿಸುವ ರೈಲಿನಲ್ಲಿ ಮಹಿಳೆಯರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು, ಪರಸ್ಪರ ಬಡಿದಾಡಿಕೊಂಡಿದ್ದರು. ಈ ವೇಳೆ ಮಹಿಳೆಯರ ಜಗಳವನ್ನು ಬಿಡಿಸು ಹೋದ ಮಹಿಳಾ ಪೊಲೀಸರ ಮೇಲೂ ಮಹಿಳೆಯರು ಹಲ್ಲೆ ನಡೆಸಿದ್ದರು.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಮೂವರು ಮಹಿಳೆಯರು ಗಾಯಗೊಂಡಿದ್ದರು. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈ ರೀತಿಯ ಅನೇಕ ಘಟನೆಗಳು ನಡೆಯುತ್ತಿದ್ದು, ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಾಗಿದೆ.
We would like to inform you that the 3 youths seen in this viral video performing stunts with sharp weapons in their hand, have been arrested by @grpchennai! They are Anbarasu and Ravichandran from Gummidipoondi and Arul from Ponneri. They are all students of Presidency College. pic.twitter.com/3FQVpTWeoW
— DRM Chennai (@DrmChennai) October 11, 2022











Click it and Unblock the Notifications