Cyclone Fengal Chennai Rain: ಮಳೆ ಅನಾಹುತ ತಪ್ಪಿಸಲು ಮಾಸ್ಟರ್ ಪ್ಲಾನ್ ಮಾಡಿದ ಚೆನ್ನೈ ಜನ!
Chennai rain: ಫೆಂಗಲ್ ಚಂಡಮಾರುತ ಶ್ರೀಲಂಕಾ ಹಾಗೂ ಭಾರತದಲ್ಲಿ ಭಾರೀ ಅನಾಹುತವನ್ನೇ ಸೃಷ್ಟಿ ಮಾಡಿದೆ. ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ತಮಿಳುನಾಡಿನ ಚೆನ್ನೈನಲ್ಲಿ ಭಾರೀ ಮಳೆಯಿಂದ ಅನಾಹುತವೇ ಸೃಷ್ಟಿಯಾಗಿದೆ. ಭಾರೀ ಮಳೆಯಾಗುತ್ತಿರುವುದರಿಂದ ಚೆನ್ನೈನಲ್ಲಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆಯಿಂದ ತಪ್ಪಿಸಿಕೊಳ್ಳಲು ಹಾಗೂ ಅವರ ಕಾರುಗಳನ್ನು ರಕ್ಷಿಸಿಕೊಳ್ಳಲು ಇಲ್ಲಿನ ಜನ ಮಾಡಿರುವ ಪ್ಲಾನ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇನ್ನು ಚೆನ್ನೈನಲ್ಲಿ ಈ ಹಿಂದೆಯೂ ಈ ರೀತಿ ಪ್ಲಾನ್ ಮಾಡಲಾಗಿತ್ತು. ಆಗಲೂ ಈ ವಿಷಯ ಭಾರೀ ಟ್ರೆಂಡ್ ಆಗಿತ್ತು.
ಫೆಂಗಲ್ ಚಂಡಮಾರುತವು ನೆರೆಯ ಶ್ರೀಲಂಕಾದಲ್ಲಿ ಭಾರೀ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿದೆ. ಚಂಡಮಾರುತ ಹಾಗೂ ಭಾರೀ ಮಳೆಯಿಂದಾಗಿ ದ್ವೀಪ ರಾಷ್ಟ್ರ ಶ್ರೀಲಂಕಾ ತತ್ತರಿಸಿದೆ. ಇದೀಗ ಭಾರತದಲ್ಲೂ ಮಳೆಯ ಆರ್ಭಟ ಜೋರಾಗಿದೆ. ತಮಿಳುನಾಡಿನ ಕರಾವಳಿಯಲ್ಲಿ ಇದರ ಆರ್ಭಟ ಜೋರಾಗಿದ್ದು, ಬೆಂಗಳೂರಲ್ಲೂ ಧಾರಾಕಾರ ಮಳೆ ಮುಂದುವರಿಯುತ್ತಿದೆ.

ಈ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ರಸ್ತೆಗಳಲ್ಲಿ ನೀರು ನಿಂತು ಜನ ಪರದಾಡುತ್ತಿದ್ದಾರೆ. ಅಲ್ಲದೇ ದಕ್ಷಿಣ ಭಾರತದ ತಮಿಳುನಾಡು, ಪುದುಚೆರಿ ಹಾಗೂ ಆಂಧ್ರಪ್ರದೇಶ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗ್ತಿದೆ. ಇನ್ನು ಕರ್ನಾಟಕದಲ್ಲೂ ಮುಂದಿನ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಈ ರೀತಿ ಎಲ್ಲಾ ಭಾಗದಲ್ಲೂ ಮಳೆಯಿಂದ ಭಾರೀ ಅವಾಂತರ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಯಾವುದೇ ರಾಜ್ಯದಲ್ಲಿ ಮಳೆಯಾದರೂ ಆಯಾ ರಾಜ್ಯದ ನಗರ ಪ್ರದೇಶದಲ್ಲಿ ಭಾರೀ ಅವಾಂತರ ಸೃಷ್ಟಿಯಾಗುತ್ತದೆ. ಕರ್ನಾಟಕದಲ್ಲಿ ಮಳೆಯಾದಾಗ ಹಾಗೂ ಬೆಂಗಳೂರಲ್ಲಿ ಸಣ್ಣ ಮಳೆಗೂ ಭಾರೀ ಅವಾಂತರವೇ ಸೃಷ್ಟಿಯಾಗುತ್ತದೆ.

ಈಚೆಗೆ ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಬೆಂಗಳೂರಿನ ಜನ ಪರಾದಾಡಿದ್ದರು. ಕಾರುಗಳು ಹಾಗೂ ಬೈಕ್‌ಗಳು ಮಳೆಯಿಂದ ಹಾನಿಯಾಗಿದ್ದವು. ಮಳೆ ಬಂದರೆ ಮಳೆ ನೀರು ಸೇರಿ ಬೈಕ್‌ನ ಎಂಜಿನ್‌ಗಳು ಹಾಗೂ ಕಾರುಗಳು ಹಾಳಾಗುತ್ತವೆ. ಇದನ್ನು ತಪ್ಪಿಸಲು ಚೆನ್ನೈನ ಜನ ಮಾಸ್ಟರ್ ಪ್ಲಾನ್ ಮಾಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತಿದೆ.
ಮಳೆಯಿಂದ ಕಾರು ಕಾಪಾಡಿಕೊಳ್ಳಲು ಚೆನ್ನೈ ಜನರ ಪ್ಲಾನ್
ಫೆಂಗಲ್ ಚಂಡಮಾರುತ ದೊಡ್ಡ ಅವಾಂತರವನ್ನೇ ತಮಿಳುನಾಡಿನಲ್ಲಿ ಸೃಷ್ಟಿಸಿದೆ. ತಮಿಳುನಾಡಿನಲ್ಲಿ ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಅಲ್ಲದೇ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಪರದಾಡ್ತಿದ್ದಾರೆ. ಈ ರೀತಿ ಇರುವಾಗಲೇ ಇಲ್ಲಿನ ಜನ ಕಾರುಗಳನ್ನು ಉಳಿಸಿಕೊಳ್ಳಲು ಹಾಗೂ ಮಳೆ ಅಪಾಯದಿಂದ ಪಾರಾಗಲು ಇಲ್ಲಿನ ಫ್ಲೈ ಓವರ್ ಮೊರೆ ಹೋಗಿದ್ದಾರೆ.
ಹೌದು ತಮಿಳುನಾಡಿನ ರಾಜಧಾನಿ ಚೆನ್ನೈನ ಟಿ ನಗರದ ಜನ ಅವರ ಕಾರುಗಳನ್ನು ಫ್ಲೈ ಓವರ್‌ಗಳ ಮೇಲೆ ತಂದು ನಿಲ್ಲಿಸಿದ್ದಾರೆ. ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ ನೀರು ನುಗ್ಗಿ ಕಾರುಗಳಿಗೆ ಹಾನಿಯಾಗಬಾರದು ಎಂದು ಇಲ್ಲಿನ ಜಿಎನ್ ಚೆಟ್ಟಿ ರೋಡ್ ಫ್ಲೈ ಓವರ್ ಮೇಲೆ ಜನ ತಮ್ಮ ಕಾರುಗಳನ್ನು ತಂದು ಪಾರ್ಕಿಂಗ್ ಮಾಡಿದ್ದಾರೆ. ಇದರ ವಿಡಿಯೋ ಹಾಗೂ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.












Click it and Unblock the Notifications