ವರ್ಷವಿಡೀ ಕಾಂಡೋಮ್ ಖರೀದಿಗೆ 1,00,000 ರೂಪಾಯಿ ಖರ್ಚು ಮಾಡಿದ ವ್ಯಕ್ತಿ: ಇಲ್ಲಿದೆ ಶಾಕಿಂಗ್ ವರದಿ
Condom News: ಇದೀಗ ಡಿಜಿಟಲ್ ಯುಗ ಆಗಿದ್ದು, ಕುಂತಲ್ಲಿಯೇ ಬೇಕಾದದ್ದನ್ನು ಆನ್ಲೈನ್ನಲ್ಲೇ ಆರ್ಡರ್ ಮಾಡಬಹುದಾಗಿದೆ. ಯುವಪೀಳಿಗೆಯಿಂದ ಹಿಡಿದು ಹಿರಿಯರವರೆಗೂ ಬಹುತೇಕ ಮಂದಿ ಇದೀಗ ಇದೇ ಮಾದರಿ ಅನುಸರಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಈ ವರ್ಷದಲ್ಲಿ ಇಲ್ಲಿಯವರೆಗೂ 1,00,000ಕ್ಕೂ ಅಧಿಕ ಹಣ ಖರ್ಚು ಮಾಡಿ ಕಾಂಡೋಮ್ ಖರೀದಿ ಮಾಡಿದ ಬಗ್ಗೆ ವರದಿಯಾಗಿದೆ. ಹಾಗಾದ್ರೆ, ಅವರು ಎಷ್ಟು ಬಾರಿ ಖರೀದಿಸಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ, ಮನೆ ದಿನಿಸಿ ಸೇರಿದಂತೆ ಸಣ್ಣಪುಟ್ಟ ವಸ್ತುಗಳನ್ನು ಆನ್ಲೈನ್ನಲ್ಲೇ ಆರ್ಡರ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಾಂಡೋಮ್ ಅನ್ನು ಅಂಗಡಿಯಲ್ಲಿ ಕೊಂಡುಕೊಂಡರೆ ಎಲ್ಲಿ ಮುಜುಗರವಾಗಿಡುತ್ತದೆಯೋ ಎನ್ನುವ ಕಾರಣದಿಂದ ಆನ್ಲೈನ್ ಮೊರೆ ಹೋಗಿದ್ದಾರೆ. ಹಾಗೆಯೇ ಚೆನ್ನೈನಲ್ಲಿ ವ್ಯಕ್ತಿಯೋರ್ವ ಈ ವರ್ಷದಲ್ಲಿ 1,00,000ಕ್ಕೂ ಅಧಿಕ ಖರ್ಚು ಮಾಡಿ ಕಾಂಡೋಮ್ ಕೊಂಡುಕೊಂಡಿದ್ದು, ಇದು ಇದೀಗ ಎಲ್ಲೆಡೆ ವೈರಲ್ ಆಗಿದೆ.

ಕಾಂಡೋಮ್ ಹೆಸರು ಎತ್ತಿದರೆ ಸಾಕು ನಾಚಿ ನೀರಾಗಿಬಿಡುತ್ತಾರೆ. ಆದರೆ, ವೈದ್ಯಕೀಯ ಮೂಲಗಳ ಪ್ರಕಾರ, ಇದರ ಬಳಕೆಯಿಂದ ಲೈಂಗಿಕ ರೋಗಗಳನ್ನು ತಡೆಗಟ್ಟಬಹುದು. ಯಾಕಂದ್ರೆ, ಯಾರದ್ರೂ ಲೈಂಗಿಕ ಸಂಪರ್ಕದಲ್ಲಿ ತೊಡಗುವಾಗ ಅದರಲ್ಲಿ ಯಾರಿಗಾದರೂ ಒಬ್ಬರಿಗೆ ರೋಗ ಲಕ್ಷಣಗಳಿದ್ದರೆ, ಅದು ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗುರತು ಪರಿಚಯ ಇಲ್ಲದವರ ಜೊತೆ ಲೈಂಗಿಕ ಕ್ರಿಯೆಗೆ ತೊಡಗುವಾಗ ಕಾಂಡೋಮ್ ಬಳಕೆ ಅತ್ಯಗತ್ಯ. ಆಗ ನಿಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮಗಳು ಬೀರುವುದಿಲ್ಲ.
ಮತ್ತೊಂದೆಡೆ, ನೋಡೋದಾದ್ರೆ, ಫ್ಯಾಮಿಲಿ ಪ್ಲ್ಯಾನಿಂಗ್ನಲ್ಲಿ ಇರುವ ದಂಪತಿಗಳು ಹೆಚ್ಚಾಗಿ ಕಾಂಡೋಮ್ ಬಳಕೆ ಮಾಡುತ್ತಾರೆ. ಇನ್ನೂ ಮೊದಲೆಲ್ಲಾ ಕಾಂಡೋಮ್ಗಳನ್ನು ಮೆಡಿಕಲ್ ಶಾಪ್, ಶಾಪಿಂಗ್ ಮಾಲ್ಗಳಿಗೆ ಹೋಗಿಯೇ ತರಬೇಕಿತ್ತು. ಆದರೆ, ಈಗ ಡಿಜಿಟಲ್ ಯುಗ ಆಗಿದ್ದು, ಇದು ಆನ್ಲೈನ್ನಲ್ಲಿಯೇ ಬುಕ್ ಮಾಡಿ ತರಿಸಿಕೊಳ್ಳುತ್ತಿದ್ದಾರೆ. ಈ ನಡುವೆಯೂ ಕೆಲವರು ದಾಖಲೆ ಸಂಖ್ಯೆಯಲ್ಲಿ ಕಾಂಡೋಮ್ಗಳನ್ನು ಖರೀದಿ ಮಾಡಿರುವ ಉದಾಹರಣೆಗಳಿಗೆ. ಈ ಪಟ್ಟಿಗೆ ಚೆನ್ನೈ ವ್ತಕ್ತಿಯೊಬ್ಬರು ಸೇರಿದ್ದಾರೆ.
ದಾಖಲೆ ಸಂಖ್ಯೆಯ ಕಾಂಡೋಮ್ಗಳ ಖರೀದಿ: ಇದೀಗ ಕೆಲವೇ ನಿಮಿಷಗಳಲ್ಲಿ ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕ ಬೇಕಾದ ವಸ್ತುಗಳನ್ನು ಖರೀದಿ ಮಾಡಬಹುದು. ಅದರಲ್ಲೂ, ಗೌಪ್ಯ ವಸ್ತುಗಳನ್ನು ಸಹ ಈ ಆನ್ಲೈನ್ ಆಪ್ಗಳಲ್ಲಿ ಅತೀ ಹೆಚ್ಚಾಗಿ ಖರೀದಿ ಮಾಡಿರುವ ಬಗ್ಗೆ ವರದಿಯಾಗಿದೆ. ಇದೀಗ 2025ರ ಸ್ವಿಗ್ಗಿ ಇನ್ಸ್ಟಾಮಾರ್ಟ್ ವಾರ್ಷಿಕ ವರದಿ ದೇಶದ ಜನರನ್ನು ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದೆ. ಇದರಲ್ಲಿ ಚೆನ್ನೈನ ಒಬ್ಬ ವ್ಯಕ್ತಿಯ ಕಾಂಡೋಮ್ ಶಾಪಿಂಗ್ ಖರ್ಚು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.
ಸ್ವಿಗ್ಗಿ ಇನ್ಸ್ಟಾಮಾರ್ಟ್ ವರದಿ ಪ್ರಕಾರ, ಚೆನ್ನೈನ ಒಬ್ಬ ಗ್ರಾಹಕರು 2024-25ರ ಅವಧಿಯಲ್ಲಿ ಕಾಂಡೋಮ್ಗಳಿಗಾಗಿ ಒಟ್ಟು 1,06,398 ರೂಪಾಯಿ ಖರ್ಚು ಮಾಡಿದ್ದಾರೆ. ಅವರು ಈ ವರ್ಷದಲ್ಲಿ ಒಟ್ಟು 228 ಬಾರಿ ಕಾಂಡೋಮ್ ಅನ್ನು ಆರ್ಡರ್ ಮಾಡಿದ್ದಾರೆ ಎಂಬ ಅಚ್ಚರಿ ಮಾಹಿತಿ ಬಹಿರಂವಾಗಿದೆ. ಅಂದರೆ ತಿಂಗಳಿಗೆ ಸರಾಸರಿ 19 ಬಾರಿ ಅಥವಾ ಎರಡು ದಿನಕ್ಕೊಮ್ಮೆ ಒಂದು ಆರ್ಡರ್ ಎಂಬ ಲೆಕ್ಕದಲ್ಲಿ ಕಾಂಡೋಮ್ಗಳನ್ನು ಖರೀದಿ ಮಾಡಿದ್ದರೆ. ಈ ಅಂಕಿಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಡೀ ದೇಶದ ಗಮನ ಸೆಳೆದಿದೆ.
ಸೆಪ್ಟೆಂಬರ್ನಲ್ಲಿ ಹೆಚ್ಚು ಮಾರಾಟ: ಸ್ವಿಗ್ಗಿ ಇನ್ಸ್ಟಾಮಾರ್ಟ್ ವರದಿ ಬರೀ ಕಾಂಡೋಮ್ಗಳ ಬಗ್ಗೆ ಮಾತ್ರವಲ್ಲದೆ, ಭಾರತೀಯರ ಒಟ್ಟಾರೆ ಖರ್ಚಿನ ಪ್ರವೃತ್ತಿಯ ಬಗ್ಗೆಯೂ ಹಲವು ಆಸಕ್ತಿದಾಯಕ ಮಾಹಿತಿಗಳನ್ನು ಬಹಿರಂಗಗೊಳಿಸಿದೆ. ವರದಿ ಪ್ರಕಾರ, ಇನ್ಸ್ಟಾಮಾರ್ಟ್ನಲ್ಲಿ ಪ್ರತಿ 127 ಆರ್ಡರ್ಗಳಲ್ಲಿ ಒಂದರಲ್ಲಿ ಕಾಂಡೋಮ್ ಸೇರಿದೆ. ಅದರಲ್ಲೂ ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರವೇ ಕಾಂಡೋಮ್ ಮಾರಾಟದಲ್ಲಿ 24 ಶೇಕಡಾ ಏರಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆದೆ
ದಾಖಲೆಯ ಖರ್ಚುಗಳ ವಿವರ: ಅಲ್ಲದೆ, 2025ರಲ್ಲಿ ಇನ್ಸ್ಟಾಮಾರ್ಟ್ ಮೂಲಕ ಪ್ರತಿ ಸೆಕೆಂಡಿಗೂ ನಾಲ್ಕಕ್ಕಿಂತ ಹೆಚ್ಚು ಹಾಲಿನ ಪ್ಯಾಕೆಟ್ಗಳು ಆರ್ಡರ್ ಆಗಿವೆ. ಕಂಪನಿಯ ಲೆಕ್ಕಾಚಾರದಲ್ಲಿ ಇದು 26,000ಕ್ಕಿಂತ ಹೆಚ್ಚು ಒಲಿಂಪಿಕ್ ಗಾತ್ರದ ಈಜುಕೊಳಗಳನ್ನು ತುಂಬುವಷ್ಟು ಪ್ರಮಾಣ. ಪೆಟ್ ಕೇರ್ ವಿಭಾಗದಲ್ಲೂ ಭಾರಿ ಖರ್ಚು ಕಂಡುಬಂದಿದ್ದು, ಚೆನ್ನೈನ ಒಬ್ಬ ಪೆಟ್ ಪೇರೆಂಟ್ ಮಾತ್ರವೇ 2.41 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ದೆಹಲಿಯ ಒಬ್ಬ ಫಿಟ್ನೆಸ್ ಪ್ರಿಯರು ವರ್ಷವಿಡೀ 2.8 ಲಕ್ಷ ರೂಪಾಯಿ ಮೌಲ್ಯದ ಪ್ರೋಟೀನ್ ಮತ್ತು ಸಪ್ಲಿಮೆಂಟ್ಗಳನ್ನು ಆರ್ಡರ್ ಮಾಡಿರುವ ಬಗ್ಗೆ ವರದಿಯಾಗಿದೆ.
ಮುಂಬೈನ ಒಬ್ಬ ಗ್ರಾಹಕರು ಇನ್ಸ್ಟಾಮಾರ್ಟ್ ಮೂಲಕ 15.16 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಖರೀದಿಸಿರುವುದು ಗಮನ ಸೆಳೆದಿದೆ. ಮತ್ತೊಂದೆಡೆ, ಬೆಂಗಳೂರು ಮೂಲದ ಒಬ್ಬರು ಕೇವಲ 10 ರೂಪಾಯಿಗೆ ಒಂದು ಪ್ರಿಂಟ್ಔಟ್ ಆರ್ಡರ್ ಮಾಡಿದ ಬಗ್ಗೆಯೂ ವರದಿಯಾಗಿದೆ. ಹೀಗೆ ಗ್ರಾಹಕರು ಸಣ್ಣಪುಟ್ಟ ವಸ್ತುಗಳಿಂದ ಹಿಡಿದೂ ದೊಡ್ಡ ವಸ್ತುಗಳನ್ನೂ ಸಹ ಆನ್ಲೈನ್ನಲ್ಲಿಯೇ ಆರ್ಡ್ ಮಾಡುವ ಪದ್ಧತಿಯನ್ನು ಬೆಳೆಸಿಕೊಂಡುಬಿಟ್ಟಿದ್ದಾರೆ. ಅಂದರೆ, ಇದರಿಂದ ಒಂದೆಡೆ ಸಮಯದ ಉಳಿತಾಯ ಆದ್ರೆ, ಮತ್ತೊಂದೆಡೆ ನೋಡೋದಾದ್ರೆ ಆಲಸ್ಯತನವನ್ನು ಕೂಡ ಕಾಣಬಹುದು.
-
ಜೆಎಎಲ್ ದಿವಾಳಿ ಪ್ರಕ್ರಿಯೆ ಬಗ್ಗೆ ವೇದಾಂತ ಆಕ್ಷೇಪ; ಅದಾನಿ ಬಿಡ್ಗೆ ಸಾಲದಾತರ ಸಮಿತಿ, ನ್ಯಾಯಮಂಡಳಿಗಳ ಬೆಂಬಲ ದಾಖಲೆಗಳಿಂದ ದೃಢ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications