ಪ್ರಮುಖ 55 ಮೆಡಿಸನ್ ಕೊರತೆಯಾಗದಂತೆ ಎಚ್ಚರ ವಹಿಸಿ: ಸರ್ಕಾರ
ನವದೆಹಲಿ, ಏಪ್ರಿಲ್ 19: ಕೊರೊನಾವೈರಸ್ ಸೋಂಕಿಗೆ ಯಾವ ಔಷಧಿ, ಚುಚ್ಚುಮದ್ದು ಸೂಕ್ತ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಮಲೇರಿಯಾಕ್ಕೆ ಬಳಸುವ ಹೈಡ್ರೋಕ್ಸಿಕ್ಲೋರೋಕ್ವಿನ್(ಎಚ್ ಸಿಕ್ಯೂ) ಬಳಕೆ ಮಾಡಲು ಆರಂಭಿಸಿದ ಬಳಿಕ, ಎಚ್ ಸಿಕ್ಯೂ ಅಭಾವ ಕೆಲವೆಡೆ ಉಂಟಾಗಿರುವ ಸುದ್ದಿ ಬಂದಿತ್ತು. ಆದರೆ, 55 ರಾಷ್ಟ್ರಗಳಿಗೆ ಎಚ್ ಸಿಕ್ಯೂ ರಫ್ತು ಮಾಡಿದರೂ ದೇಶದಲ್ಲಿ ಸಾಕಷ್ಟು ದಾಸ್ತಾನು ಇದೆ ಎಂದು ಸರ್ಕಾರ ಹೇಳಿದೆ. ಈ ನಡುವೆ ಪ್ರಮುಖ 55 ಮೆಡಿಸನ್ ಕೊರತೆಯಾಗದಂತೆ ಎಚ್ಚರ ವಹಿಸುವಂತೆ ಅಖಿಲ ಭಾರತ ಕೆಮಿಸ್ಟ್ ಹಾಗೂ ಡ್ರಗಿಸ್ಟ್ ಸಂಸ್ಥೆ ಸೂಚಿಸಿದೆ.
ಕೃತಕ ಅಭಾವ ಸೃಷ್ಟಿಸಿ ಕಾಳದಂಧೆಯಲ್ಲಿ ಮಾತ್ರೆ, ಔಷಧ ಮಾರಾಟ ಮಾಡುವುದು ಕಂಡು ಬಂದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. 55 ಮೆಡಿಸನ್ ಗಳ ಪೈಕಿ ಕಡಿಮೆ ರಕ್ತದೊತ್ತಡ ಚಿಕಿತ್ಸೆಗೆ ಬಳಸುವ ಆಡ್ರೆನಲೈನ್, ಅಟ್ರೋಪೈನ್, arrrhythmia, amiodarone, ಸ್ನಾಯು ಸೆಳೆತಕ್ಕೆ ಚಿಕಿತ್ಸೆಯಲ್ಲಿ ಬಳಸುವ ಫೆಂಟಾನಿಲ್, ನೆಬ್ಯುಲೇಷನ್ ಗಾಗಿ ಉಪಯೋಗಿಸುವ ಸಲ್ಬುಟಮೊಲ್, antibiotics ಅಮೊಕ್ಸಿಸಿಲ್ಲಿನ್, ಸಿಪ್ರೋಫ್ಲೋಕ್ಸಾಲಿನ್, ಮೆಟ್ರೋನಿಡಜೋಲ್ ಅಭಾವ ಉಂಟಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

ಇದಲ್ಲದೆ, ಪ್ಯಾರಸಿಟಮೋಲ್, ಅಸಿಕ್ಲೊವಿರ್, ಇನ್ಸುಲಿನ್, glimepiride, ಆಮ್ಲೊಡಿಪೈನ್, ಹ್ಯಾಂಡ್ ಸ್ಯಾನಿಟೈಸರ್ಸ್, ಸರ್ಜಿಕಲ್ ಮಾಸ್ಕ್, ಸೇರಿದಂತೆ ಹಲವು ಜನಪ್ರಿಯ ಡ್ರಗ್ ಹಾಗೂ ಅಗತ್ಯ ಔಷಧ ಪೂರೈಕೆ ವ್ಯತ್ಯಯವಾಗಬಾರದು, ಈ ಔಷಧಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳುವಂತೆ ದೇಶದ ಎಲ್ಲಾ ಕೆಮಿಸ್ಟ್ , ಔಷಧಾಲಯಗಳಿಗೆ ಸೂಚಿಸಲಾಗಿದೆ.












Click it and Unblock the Notifications