Chardham Yatra: ಬಾಗಿಲು ಮುಚ್ಚಿದ ಯಮುನೋತ್ರಿ, ಕೇದಾರನಾಥ ದೇವಾಲಯ

ಚಳಿಗಾಲದ ಕಾರಣ ಉತ್ತರಾಖಂಡದಲ್ಲಿ ಚಾರ್‌ಧಾಮ್ ಯಾತ್ರೆ ಮುಕ್ತಾಯದ ಹಂತದಲ್ಲಿದೆ. ಕಳೆದ ದಿನ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗಂಗೋತ್ರಿಯ ಬಾಗಿಲು ಮುಚ್ಚಲಾಯಿತು. ಸದ್ಯ ಯಮುನೋತ್ರಿ ಮತ್ತು ಕೇದಾರನಾಥ ದೇವಾಲಯಗಳ ಬಾಗಿಲು ಮುಚ್ಚುವ ಪ್ರಕ್ರಿಯೆ ಆರಂಭವಾಗಿದೆ. ಭಾನುವಾರ ಬೆಳಗ್ಗೆ 8:30 ಗಂಟೆಗೆ ಕೇದಾರನಾಥದ ಬಾಗಿಲು ಚಳಿಗಾಲಕ್ಕಾಗಿ ಮುಚ್ಚಲ್ಪಟ್ಟಿತು. ಇದರಿಂದಾಗಿ ಕೇದಾರನಾಥ ದೇವಾಲಯವನ್ನು 10 ಕ್ವಿಂಟಾಲ್ ಹೂವಿನಿಂದ ಅಲಂಕರಿಸಲಾಗಿದೆ.

ಬದರಿನಾಥ ಧಾಮದ ಬಾಗಿಲು ನವೆಂಬರ್ 17 ರಂದು ಮುಚ್ಚಲಾಗುತ್ತದೆ. ನವೆಂಬರ್ 3 ರಂದು ಅಂದರೆ ಇಂದು ಕೇದಾರನಾಥ ದೇವಾಲಯದ ಜೊತೆಗೆ ಯಮುನೋತ್ರಿ ಧಾಮದ ಬಾಗಿಲು ಮುಚ್ಚಲಾಗಿದೆ. ಇದಲ್ಲದೇ ಪಂಚಕೇದಾರಗಳಲ್ಲಿ ಸೇರಿರುವ ಮೂರನೇ ಕೇದಾರ ತುಂಗನಾಥನ ಬಾಗಿಲು ನವೆಂಬರ್ 4 ರಂದು ಮತ್ತು ಎರಡನೇ ಕೇದಾರ ಮದ್ಮಹೇಶ್ವರನ ಬಾಗಿಲು ನವೆಂಬರ್ 20ರಂದು ಚಳಿಗಾಲಕ್ಕಾಗಿ ಮುಚ್ಚಲಾಗುವುದು.

Chardham Yatra Yamunotri Kedarnath temple closed today after the onset of winter

ಉತ್ತರಖಂಡದ ನಾಲ್ಕು ಪವಿತ್ರವಾದ ಹಿಂದೂ ದೇವಾಲಯಗಳನ್ನು ಯಾತ್ರಿಕರ ಸಲುವಾಗಿ ಆರು ತಿಂಗಳಿಗೊಮ್ಮೆ ಮಾತ್ರ ತೆರೆಯಲಾಗುತ್ತದೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಯಾತ್ರೆ ನವೆಂಬರ್‌ ತಿಂಗಳಲ್ಲಿ ಕೊನೆಗೊಳ್ಳುತ್ತದೆ. ಚಳಿಗಾಲಕ್ಕೆ ಇಲ್ಲಿ ಹೆಚ್ಚು ಹಿಮಪಾತವಾಗುವುದರಿಂದ ಚಾರ್‌ಧಾಮ್ ಬಾಗಿಲನ್ನು ಮುಚ್ಚಲಾಗುತ್ತದೆ.

ವಿಶ್ವವಿಖ್ಯಾತ ಗಂಗೋತ್ರಿ ಧಾಮದ ಬಾಗಿಲು ಶನಿವಾರ (ನವೆಂಬರ್ 2 ) ಮಧ್ಯಾಹ್ನ 12.14ಕ್ಕೆ ಮುಚ್ಚಲ್ಪಟ್ಟಿದೆ. ಈ ಬಾರಿ 8.22 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಗಂಗೋತ್ರಿ ಧಾಮವನ್ನು ತೆರೆಯುವುದರಿಂದ ಹಿಡಿದು ಬಾಗಿಲು ಮುಚ್ಚುವವರೆಗೆ ದರ್ಶನ ಪಡೆದಿದ್ದಾರೆ.

ನವೆಂಬರ್ 3 ರಂದು ಅಂದರೆ ಇಂದು ಮಧ್ಯಾಹ್ನ 12.05ಕ್ಕೆ ಯಮುನೋತ್ರಿ ಧಾಮದ ಬಾಗಿಲು ಮುಚ್ಚಲಾಗುತ್ತದೆ.

ಈ ಋತುವಿನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ. ಈ ಯಾತ್ರೆಯ ಅವಧಿಯಲ್ಲಿ ಭಾನುವಾರ ಸಂಜೆಯವರೆಗೆ ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ ಯಾತ್ರಿಕರ ಸಂಖ್ಯೆ ಸುಮಾರು 15,20,000 ಇದೆ. ಇಲ್ಲಿಯವರೆಗೆ 7,09,700 ಕ್ಕೂ ಹೆಚ್ಚು ಯಾತ್ರಿಕರು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ. ಸುಮಾರು 8.22 ಲಕ್ಷ ಯಾತ್ರಿಕರು ಗಂಗೋತ್ರಿ ಧಾಮಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. ಈ ಬಾರಿ ಮೇ-ಜೂನ್ ಹೊರತುಪಡಿಸಿ ಸೆ.15ರಿಂದ ಅಕ್ಟೋಬರ್ 15ರವರೆಗೆ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ.

ಗಂಗಾ ಘಾಟ್‌ನಲ್ಲಿ 5100 ದೀಪಗಳ ದೀಪವಾಳಿ

ಶುಕ್ರವಾರದಂದು ಬಾಗಿಲು ಮುಚ್ಚುವ ಮುನ್ನ ಗಂಗೋತ್ರಿ ದೇವಸ್ಥಾನವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಶುಕ್ರವಾರ ಗಂಗೋತ್ರಿ ಧಾಮ ಮತ್ತು ಗಂಗಾ ಘಾಟ್‌ನಲ್ಲಿ 5100 ದೀಪಗಳನ್ನು ಬೆಳಗಿಸಲಾಯಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಮೆಹರ್ಬನ್ ಸಿಂಗ್ ಬಿಷ್ತ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಈ ಎರಡು ಧಾಮಗಳಿಗೆ ಭಕ್ತರ ಸಂಖ್ಯೆ ಮೂವತ್ತು ದಿನಗಳು ಕಡಿಮೆಯಾಗಿದೆ. ಆದರೆ ಈ ಬಾರಿ ಯಮುನೋತ್ರಿ ಮತ್ತು ಗಂಗೋತ್ರಿ ಧಾಮಕ್ಕೆ ದಾಖಲೆ ಪ್ರಮಾಣದಲ್ಲಿ ಯಾತ್ರಾರ್ಥಿಗಳು ಆಗಮಿಸಿದ್ದಾರೆ. ಎರಡೂ ಧಾಮಗಳಲ್ಲಿ ದಿನಕ್ಕೆ ಸರಾಸರಿ 8781 ಭಕ್ತರು ಭೇಟಿ ನೀಡಿದ್ದಾರೆ. ಕಳೆದ ವರ್ಷ ಈ ಎರಡು ಧಾಮಗಳಿಗೆ ಭೇಟಿ ನೀಡಿದ ಸರಾಸರಿ ದೈನಂದಿನ ಭಕ್ತರ ಸಂಖ್ಯೆ 7907 ಆಗಿತ್ತು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+