ಹೆಸರು ಬದಲಿಸೋದು ಬಿಜೆಪಿಗೆ ಕಷ್ಟದ ಕೆಲಸವಲ್ಲ ಬಿಡಿ: ಹರ್ಯಾಣ ಮಾಜಿ ಸಿಎಂ ಹೂಡಾ

ಬಿಜೆಪಿಗೆ ಹೆಸರು ಬದಲಿಸುವುದೇನು ಕಷ್ಟದ ಕೆಲಸವಲ್ಲ. ಅದು ನಗರಕ್ಕೆ, ಹಳ್ಳಿಗೆ, ಇದೀಗ ಪ್ರಾಧಿಕಾರಗಳಿಗೂ ಹೆಸರು ಬದಲಿಸುತ್ತಿದೆ ಎಂದು ಹರ್ಯಾಣ ಮಾಜಿ ಸಿಎಂ ಭುಪಿಂದರ್ ಸಿಂಗ್ ಹೂಡಾ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಹರ್ಯಾಣ, ಜೂನ್ 02: ಹರ್ಯಾಣ ಅರ್ಬನ್ ಡೆವಲಪ್ ಮೆಂಟ್ ಅಥಾರಿಟಿ (ಹೂಡಾ) ವನ್ನು ಇನ್ಮೇಲ್ ಹರ್ಯಾಣ ಶೆಹರಿ ವಿಕಾಸ್ ಪ್ರಾಧಿಕಾರ (ಎಚ್ಎಸ್ ವಿಪಿ) ಎಂದು ಕರೆಯಬೇಕೆಂದು ಹರ್ಯಾಣ ಸಚಿವಾಲಯ ಸಭೆಯಲ್ಲಿ ನಿನ್ನೆ (ಜೂನ್ 01) ನಿರ್ಧರಿಸಲಾಗಿದೆ.

ಹರ್ಯಾಣ ಅರ್ಬನ್ ಡೆವಲಪ್ ಮೆಂಟ್ ಅಥಾರಿಟಿ ಎಂಬುದನ್ನು ಸಂಕ್ಷಿಪ್ತವಾಗಿ ಹೂಡಾ ಎಂದು ಕರೆಯಲಾಗುತ್ತದೆ. ಈ ಉಚ್ಚಾರಣೆ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭುಪಿಂದರ್ ಸಿಂಗ್ ಹೂಡಾ ಹೆಸರಿನಂತೆಯೇ ಕೇಳುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ!

Changing name is not a tough task for BJP: former CM of Haryana, Hooda tells

ಹರ್ಯಾಣದ ಹಾಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಇಲ್ಲಿನ ಆರೋಗ್ಯ ಸಚಿವ ಅನಿಲ್ ವಿಜ್, ಯಾರಾದರೂ ಹರ್ಯಾಣ ಅರ್ಬನ್ ಡೆವಲಪ್ ಮೆಂಟ್ ಅಥಾರಿಟಿಯನ್ನು ಉಲ್ಲೇಖಿಸುವಾಗ ಹೂಡಾ ಎಂದು ಉಚ್ಚಾರಣೆ ಮಾಡಿದರೆ ಕೇಳುಗರಿಗೆ ಮಾಜಿ ಮುಖ್ಯಮಂತ್ರಿಯವರ ಬಗ್ಗೆ ಮಾತನಾಡುತ್ತಿದ್ದಾರೆ ಅನ್ನಿಸುತ್ತದೆ, ಇದರಿಂದ ಗೊಂದಲವಾಗುತ್ತದೆ. ಆದ್ದರಿಂದ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.[ದೆಹಲಿ ಸೇರಿದಂತೆ ಉತ್ತರಭಾರತದ ಹಲವೆಡೆ ಭೂಕಂಪ]

ಈ ಕುರಿತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಭುಪಿಂದರ್ ಸಿಂಗ್ ಹೂಡಾ, ಬಿಜೆಪಿಗೆ ಹೆಸರು ಬದಲಿಸುವುದೇನು ಕಷ್ಟದ ಕೆಲಸವಲ್ಲ. ಅದು ನಗರಕ್ಕೆ, ಹಳ್ಳಿಗೆ, ಇದೀಗ ಪ್ರಾಧಿಕಾರಗಳಿಗೂ ಹೆಸರು ಬದಲಿಸುತ್ತಿದೆ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+