Chandrayaan-3: ಸಂಪೂರ್ಣ ಚಂದ್ರನ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತ ಪ್ರಗ್ಯಾನ್‌ನ ಸಂಸ್ಕೃತ ಅರ್ಥವೇನು?

ಚಂದ್ರನ ದಕ್ಷಿಣ ಧ್ರುವವನ್ನು ತಲುಪುವ ಮೂಲಕ ಭಾರತವು ಬಾಹ್ಯಾಕಾಶ ಜಗತ್ತಿನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಚಂದ್ರಯಾನ-3 ರ ಲ್ಯಾಂಡರ್ 'ವಿಕ್ರಮ್' ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡಿದ ನಂತರ ದೇಶಾದ್ಯಂತ ಸಂಭ್ರಮಾಚರಣೆ ಪ್ರಾರಂಭವಾಯಿತು. ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ನಂತರ ಇಸ್ರೋ ವಿಜ್ಞಾನಿಗಳು ವಿಶ್ವದಲ್ಲಿ ಭಾರತದ ಹೆಸರನ್ನು ಹೆಮ್ಮೆಯಿಂದ ಎತ್ತಿ ಹಿಡಿದಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ 'ವಿಕ್ರಮ್' ಇಳಿದ ನಂತರ ಅದರಿಂದ ಹೊರಬಂದ ರೋವರ್ ಪ್ರಗ್ಯಾನ್ ಈಗ ಇಡೀ ಚಂದ್ರನ ಕಾರ್ಯಾಚರಣೆಯ ಜವಾಬ್ದಾರಿಯನ್ನು ಹೊತ್ತಿದೆ. ಅಷ್ಟಕ್ಕೂ ಏನಿದು ರೋವರ್ ಪ್ರಗ್ಯಾನ್? ಪ್ರಗ್ಯಾನ್ ಎಂದು ಹೆಸರು ಬರಲು ಕಾರಣವೇನು? ಅದರ ಅರ್ಥವೇನು ಎಂದು ತಿಳಿಯೋಣ.

Chandrayaan-3

ಲ್ಯಾಂಡರ್ 'ವಿಕ್ರಮ್' ಬಗ್ಗೆ ಮೊದಲ ವಿಷಯ

ಇಸ್ರೋ ಪ್ರಕಾರ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಲ್ಯಾಂಡಿಂಗ್ ಮಾಡುವುದು ಅತ್ಯಂತ ಸವಾಲಿನ ಕೆಲಸ. ಹೀಗಿರುವಾಗ ಲ್ಯಾಂಡರ್ ಅಂಡ್ ರೋವರ್ ಹೆಸರಿಡುವುದರ ಹಿಂದೆ ಬೇರೆಯದೇ ಕಥೆಯಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಮತ್ತು ಶ್ರೇಷ್ಠ ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರ ಹೆಸರನ್ನು ಲ್ಯಾಂಡರ್‌ಗೆ ಇಡಲಾಗಿದೆ. 'ವಿಕ್ರಮ್' ಪದದ ಅರ್ಥವು ಧೈರ್ಯ ಮತ್ತು ಶೌರ್ಯದೊಂದಿಗೆ ಸಂಬಂಧಿಸಿದೆ. ಲ್ಯಾಂಡರ್ ಮತ್ತು ರೋವರ್ ಅನ್ನು ಅವರ ಗೌರವಾರ್ಥವಾಗಿ ಹೆಸರಿಸಲಾಗಿದೆ.

ಚಂದ್ರನ ಮಣ್ಣಿನಿಂದ ಡೇಟಾ ಸಂಗ್ರಹ

ಚಂದ್ರಯಾನ-3 ಲ್ಯಾಂಡಿಂಗ್ ಆದ ಕೆಲವು ಗಂಟೆಗಳ ನಂತರ, ರೋವರ್ ಲ್ಯಾಂಡರ್ ಒಳಗಿನಿಂದ ಚಂದ್ರನ ಮೇಲ್ಮೈಯಲ್ಲಿ ಹೊರಬಂದಿದೆ. ಈಗ ರೋವರ್ 'ಪ್ರಗ್ಯಾನ್' ಚಂದ್ರನ ಮೇಲ್ಮೈಯಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸಲಿದೆ. ರೋವರ್ ಒಂದು ಬಾಕ್ಸ್ ಆಕಾರದ ಚಕ್ರದ ಸಾಧನವಾಗಿದ್ದು, ಇದು ಖನಿಜಗಳು, ನೀರು ಮತ್ತು ಅನಿಲವನ್ನು ಹುಡುಕಲು ಚಂದ್ರನ ಮೇಲೆ ಸ್ಥಳದಿಂದ ಸ್ಥಳಕ್ಕೆ ಚಲಿಸುತ್ತದೆ.

Chandrayaan-3

ಪ್ರಗ್ಯಾನ್ ಅರ್ಥ

ಈ ರೋವರ್‌ಗೆ ಪ್ರಗ್ಯಾನ್ ಎಂದು ಹೆಸರಿಸಲಾಗಿದೆ. ಏಕೆಂದರೆ ರೋವರ್ ತನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ಚಂದ್ರನ ಮೇಲ್ಮೈಯಲ್ಲಿರುವ ಅನೇಕ ವಿಷಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಸಂಸ್ಕೃತದಲ್ಲಿ ಪ್ರಗ್ಯಾನ್ ಅರ್ಥ ಜ್ಞಾನವಾಗಿದೆ. ರೋವರ್ ಪ್ರಗ್ಯಾನ್ ತನ್ನ ಬುದ್ಧಿವಂತಿಕೆಯೊಂದಿಗೆ ಸಂಪೂರ್ಣ ಕಾರ್ಯಾಚರಣೆ ಮಾಡುವುದರಿಂದ ಇದಕ್ಕೆ ಪ್ರಗ್ಯಾನ್ ಎಂಬ ಹೆಸರು ಇಡಲಾಗಿದೆ.

ರೋವರ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ

ಚಂದ್ರಯಾನ -2 ರಲ್ಲಿ ಇದ್ದ ರೋವರ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಇದರ ಕಾಲುಗಳು ಒತ್ತಡವನ್ನು ಸಹಿಸಿಕೊಳ್ಳು ಶಕ್ತಿ ಹೊಂದಿರುತ್ತವೆ. ಇದರೊಂದಿಗೆ ಹೆಚ್ಚಿನ ಇಂಧನಕ್ಕಾಗಿ ಜಾಗವನ್ನು ರಚಿಸಲಾಗಿದೆ. ಲ್ಯಾಂಡಿಂಗ್ ನಂತರ ಲ್ಯಾಂಡರ್ ಮತ್ತು ರೋವರ್ ನಡುವಿನ ಸಂಪರ್ಕವನ್ನು ಬಲಪಡಿಸಲಾಗಿದೆ. ಈಗ ರೋವರ್ ಎಲ್ಲಾ ಡೇಟಾವನ್ನು ಲ್ಯಾಂಡರ್‌ಗೆ ಕಳುಹಿಸುತ್ತದೆ ಮತ್ತು ನಂತರ ಲ್ಯಾಂಡರ್ ಅದನ್ನು ಇಸ್ರೋಗೆ ಕಳುಹಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+