Chandrayaan-3: ವೈಫಲ್ಯ ಉಂಟಾಗಂತೆ ನೂತನ ವಿನ್ಯಾಸ ಅಳವಡಿಸಿಕೊಂಡ ಇಸ್ರೋ: ಸೋಮನಾಥ್
ನವದೆಹಲಿ, ಜುಲೈ 11: ಭಾರತದ ಬಹುನಿರೀಕ್ಷೆಯ ಚಂದ್ರಯಾನ-3 ಉಡಾವಣೆಗೆ ದಿನಗಣನೆ ಆರಂಭವಾಗಿದೆ. ಶುಕ್ರವಾರ ಜುಲೈ 14ರಂದು ಬಾನಿಗೆ ಜಿಗಿಯಲು ಸಜ್ಜಾದ ಚಂದ್ರಯಾನದ ಬಾಹ್ಯಾಕಾಶ ನೌಕೆಗೆ ಹೆಚ್ಚಿನ ಇಂಧನ ಲೋಡ್ ಮಾಡಲಾಗಿದೆ. ಅಗತ್ಯ ಸುರಕ್ಷತಾ ಕ್ರಮಗಳು ಕೈಗೊಳ್ಳಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಚಂದ್ರನ ದಕ್ಷಿಣ ಧ್ರುವದ ಬಳಿ ನಾಲ್ಕು ಕಿಲೋ ಮೀಟರ್ ಉದ್ದ ಮತ್ತು 2.5 ಕಿಲೋ ಮೀಟರ್ ಅಗಲದ ಪ್ರದೇಶದಲ್ಲಿ ಮೂರನೇ ಚಂದ್ರಯಾನದ ನೌಕೆ ಲ್ಯಾಂಡ್ ಆಗಲಿದೆ. ಈ ಲ್ಯಾಂಡಿಂಗ್ ಸ್ಥಳ ಎರಡನೇ ಚಂದ್ರಯಾನಕ್ಕೆ ಸಿಕ್ಕಿದ್ದಕ್ಕಿಂತ ದೊಡ್ಡದು ಎನ್ನಲಾಗಿದೆ.

ಎರಡನೇ ಚಂದ್ರಯಾನಕ್ಕೆ ಹೋಲಿಕೆ ಮಾಡಿದರೆ ಮೂರನೇ ಚಂದ್ರಯಾನದಲ್ಲಿ ವೈಫಲ್ಯ ಆಧಾರಿತ ವಿನ್ಯಾಸದ ಆಯ್ಕೆ ಮಾಡಿಕೊಳ್ಳಲಾಗಿದೆ. ಇದು ಸಣ್ಣಪುಟ್ಟ ಲೋಪಗಳು ಕಂಡು ಬಂದರೂ ಸಹ ರೋವರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುವ ಕೆಲಸ ಮಾಡುತ್ತದೆ ಎಂದು ಇಸ್ರೋ ತಿಳಿಸಿದೆ.
ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಉಡಾವಣೆ
ಸಾಫ್ಟ್‌ವೇರ್ ದೋಷದಿಂದಾಗಿ 2019ರ ಸೆಪ್ಟೆಂಬರ್ ನಲ್ಲಿ ಚಂದ್ರಯಾನ-2 ಕ್ರಾಶ್-ಲ್ಯಾಂಡಿಂಗ್ ಆಗಿತ್ತು. ಅದರ ನಂತರ ಫಾಲೋ-ಅಪ್ ಮಿಷನ್ ಆಗಿರುವ ಚಂದ್ರಯಾನ-3 ಇದೇ ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಉಡಾವಣೆಗೆ ಸಿದ್ದವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.
ಚಂದ್ರಯಾನ-2 ರಲ್ಲಿ ಯಶಸ್ಸು ಆಧಾರಿತ ವಿನ್ಯಾಸದ ಬದಲಿಗೆ, ಬಾಹ್ಯಾಕಾಶ ಸಂಸ್ಥೆ ಚಂದ್ರಯಾನ-3 ರಲ್ಲಿ ವೈಫಲ್ಯ ಆಧಾರಿತ ವಿನ್ಯಾಸ ಅಳವಡಿಸಲಾಗಿದೆ. ಇದು ಏನೇ ವಿಫಲವಾದರೂ ಹೇಗೆ ತನ್ನನ್ನು ರಕ್ಷಿಸಿಕೊಂಡು ಸುರಕ್ಷಿತವಾಗಿ ಲ್ಯಾಂಡ್ ಆಗಬೇಕು ಎಂಬುದನ್ನು ಗಮನಹರಿಸುತ್ತದೆ.

ಸಂವೇದನೆ, ತಾಂತ್ರಿಕ, ಅಲ್ಗಾರಿದಮ್ ವೈಫಲ್ಯ ಸೇರಿದಂತೆ ಹಿಂದಿನಿಂದಲೂ ಇಸ್ರೋ ಅನೇಕ ವೈಫಲ್ಯಗಳನ್ನು ನೋಡಿದೆ. ಅದರ ಆಧಾರದಲ್ಲಿ ಚಂದ್ರಯಾನ ಮೂರರಲ್ಲಿ ಯಾವುದೇ ವೈಫಲ್ಯ ಕಂಡು ಬಂದರೂ ತ್ವರಿತವಾಗಿ ಪರಿಹರಿಸಲು ಸಿದ್ಧರಾಗಿದ್ದೇವೆ.
ಚಂದ್ರಯಾನ-2ನಲ್ಲಾದ ತಪ್ಪುಗಳು
ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಗುರುತಿಸಲಾದ 500ಮೀ x 500ಮೀ ಲ್ಯಾಂಡಿಂಗ್ ಸ್ಪಾಟ್‌ನ ಕಡೆಗೆ ನುಗ್ಗಿದ ವೇಳೆ ಅದರ ವೇಗ ಕಡಿಮೆ ಆಗಬೇಕಿತ್ತು. ಆದರೆ ಕಡಿಮೆ ಮಾಡುವಲ್ಲಿ ವಿಫಲವಾಯಿತು. ನಿರೀಕ್ಷಿಗಿಂತ ಹೆಚ್ಚಿನ ವೇಗ ಇದ್ದಿದ್ದರಿಂದ ಕೆಲವು ತಪ್ಪುಗಳು ಉಂಟಾಗಿದ್ದವು.
ಒಟ್ಟು ಐದು ಇಂಜಿನ್‌ಗಳು ಇರಲಿದ್ದು, ಅವುಗಳು ನೌಕೆಯ ವೇಗ ಕಡಿಮೆ ಮಾಡಿ ಲ್ಯಾಂಡಿಂಗ್‌ಗೆ ಸಹಕರಿಸುತ್ತವೆ. ಇದನ್ನು ರಿಟಾರ್ಡೇಶನ್ ಎಂದು ಕರೆಯಲಾಗುತ್ತದೆ. ಈ ಎಂಜಿನ್‌ಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಒತ್ತಡ ಉಂಟು ಮಾಡುತ್ತವೆ ಎಂದು ಅವರು ತಿಳಿಸಿದರು.
ಇನ್ನೂ ಚಂದ್ರಯಾನ 2 ನಲ್ಲಿ ಪ್ಯಾರಾಮೀಟರ್ ಪ್ರಸರಣವನ್ನು ನಿರ್ವಹಿಸುವ ಸಾಮರ್ಥ್ಯವು ತುಂಬಾ ಕಡಿಮೆ ಇತ್ತು. ಇದು ಒಂದು ವೈಪಲ್ಯವೇ. ಈಗಾಗಲೇ ಕಳೆದ ಬಾರಿಯಲ್ಲಾದ ವೈಫಲ್ಯಗಳು, ತಪ್ಪುಗಳನ್ನು ಗುರುತಿಸಿ ಈ ಭಾರಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದೇವೆ.
ಲ್ಯಾಂಡಿಂಗ್‌ಗೆ ಸ್ಥಳ ವಿಶಾಲಗೊಳಿಸಿದ ಇಸ್ರೋ
ಚಂದ್ರಯಾನ ಮೂರರ ಸಂಬಂಧ ಲ್ಯಾಂಡಿಂಗ್ ಪ್ರದೇಶವನ್ನು 500m x 500m ಬದಲಾಗಿ 4 m X 2.5 km ಗೆ ವಿಸ್ತರಿಸಿದ್ದೇವೆ. ಇಷ್ಟು ದೊಡ್ಡ ಪ್ರದೇಶದಲ್ಲಿ ನೌಕೆ ಎಲ್ಲಿ ಬೇಕಾದರೂ ಇಳಿಯಬಹುದು. ಈ ಬಾರಿ ಲ್ಯಾಂಡಿಂಗ್ ನಿರ್ದಿಷ್ಟ ಬಿಂದು ನಿಗದಿ ಮಾಡಿಲ್ಲ ಎಂದು ಸೋಮನಾಥ್ ಹೇಳಿದರು.
ಚಂದ್ರಯಾನ-3 ಹೆಚ್ಚು ಇಂಧನವನ್ನು ಹೊಂದಿರುವುದರಿಂದ ಪ್ರಯಾಣಿಸಲು ಅಥವಾ ಪ್ರಸರಣವನ್ನು ನಿರ್ವಹಿಸಲು ಅಥವಾ ಪರ್ಯಾಯ ಲ್ಯಾಂಡಿಂಗ್ ಸೈಟ್‌ಗೆ ಚಲಿಸಲು ಅಧಿಕ ಸಾಮರ್ಥ್ಯವನ್ನು ಹೊಂದಿದೆ. ವಿಕ್ರಮ್ ಲ್ಯಾಂಡರ್ ಈಗ ಇತರ ಮೇಲ್ಮೈಗಳಲ್ಲಿ ಹೆಚ್ಚುವರಿ ಸೌರ ಫಲಕಗಳನ್ನು ಹೊಂದಿದೆ. ಅದು ಶಕ್ತಿಯನ್ನು ಉತ್ಪಾದಿಸುತ್ತದೆ ಎಂದರು.












Click it and Unblock the Notifications