Chandrayaan-3: ಚಂದ್ರನ ಮೇಲೆ ಇಳಿಯಲು ಕೇವಲ 163 ಕಿಮೀ ದೂರದಲ್ಲಿರುವ ಗಗನ ನೌಕೆ!
ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರಯಾನ - 3 ಗಗನ ನೌಕೆ ಉದ್ದೇಶಿಸಿದಂತೆ 153 ಕಿಮೀ x 163 ಕಿಮೀ ಕಕ್ಷೆಯನ್ನು ಪ್ರವೇಶಿಸಿದೆ. ಚಂದ್ರನಿಂದ 153 ಕಿಮೀ x 163 ಕಿ. ಮೀ. ದೂರದ ಕಕ್ಷೆಯ ಒಳಗೆ ಚಂದ್ರಯಾನ - 3 ಗಗನ ನೌಕೆ ಸುತ್ತುತ್ತಿದೆ.
ಆಗಸ್ಟ್ 16 ರಂದು ಬೆಳಗ್ಗೆ 8.30ಕ್ಕೆ ಮತ್ತೊಮ್ಮೆ ಗಗನ ನೌಕೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಚಂದ್ರನಿಗೆ ಮತ್ತಷ್ಟು ಸನಿಹ ಆಗಿರುವ ಪ್ರಯತ್ನಕ್ಕೆ ಇಸ್ರೋ ತಜ್ಞರು ಕೈ ಹಾಕಿದ್ದರು. ನೌಕೆಯು 100 ಕಿ. ಮೀ. ಕಕ್ಷೆ ತಲುಪಿದ ನಂತರ ವಿಕ್ರಂ ಲ್ಯಾಂಡರ್ ಗಗನ ನೌಕೆಯಿಂದ ಬೇರ್ಪಡಲಿದೆ. ಮುಂದಿನ ಕಾರ್ಯಾಚರಣೆ ಆಗಸ್ಟ್ 17 ರಂದು ನಡೆಯಲಿದೆ.

ಎಲ್ಲವೂ ಇಸ್ರೋ ಅಂದುಕೊಂಡ ರೀತಿಯೇ ನಡೆಯುತ್ತಿದೆ, ಭಾರತದ ಮಹತ್ವದ ಮಿಷನ್ ಇನ್ನೇನು ತನ್ನ ಗುರಿ ತಲುಪಲು ಕೊನೇ ಹಂತಕ್ಕೆ ಬಂದಿದೆ. 'ಚಂದ್ರಯಾನ-3' ಕಕ್ಷೆಯನ್ನ ಮತ್ತೊಂದು ಹಂತಕ್ಕೆ ಏರಿಸುವ ಪ್ರಕ್ರಿಯೆ ಸಕ್ಸಸ್ ಆಗಿದ್ದು, ಈಗ ಚಂದ್ರನ ಮೇಲ್ಮೈಯಿಂದ ನಮ್ಮ ಭಾರತದ ನೌಕೆ ಕೇವಲ 163 ಕಿಲೋ ಮೀಟರ್ ಎತ್ತರದಲ್ಲಿ ಹಾರಾಡುತ್ತಿದೆ.
ಈಗಾಗಲೇ ಹಲವಾರು ಬಾರಿ ಕಕ್ಷೆ ಎತ್ತರಿಸುವ ಕಾರ್ಯದಲ್ಲಿ ಇಸ್ರೋ ಯಶಸ್ಸು ಕಂಡಿದ್ದು ಈಗ ಮತ್ತೊಮ್ಮೆ ಸಕ್ಸಸ್ ಆಗಿದೆ. ಆಗಸ್ಟ್ 23ರ ಅಂತಿಮ ಹೋರಾಟಕ್ಕೆ ಸಿದ್ಧತೆ ನಡೆಸಿರುವ ಭಾರತೀಯರ ಹೆಮ್ಮೆ ಇಸ್ರೋ ಸಂಸ್ಥೆ ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ಇನ್ನು ಆಗಸ್ಟ್ 16ಕ್ಕೆ ಇಸ್ರೋ ಇನ್ನೊಂದು ಸುತ್ತಿನ ಕಾರ್ಯಾಚರಣೆ ನಡೆಸಿದ್ದ ಇಸ್ರೋ, ಆ ನೌಕೆ ಚಂದ್ರನ ಮೇಲ್ಮೈ ಮೇಲೆ ಅತಿ ಹತ್ತಿರದಲ್ಲೇ ಹಾರಾಟ ನಡೆಸುವಲ್ಲಿ ಯಶಸ್ವಿಯಾಗಿದೆ. ಇದಾದ ಬಳಿಕ ಅಂತಿಮ ಹಂತದ ಕ್ಷಣಕ್ಕೆ ಕೌಂಟ್‌ಡೌನ್ ಶುರುವಾಗಲಿದ್ದು ಆಗಸ್ಟ್ 23ರಂದು ಶತಕೋಟಿ ಭಾರತೀಯರು ಕಾಯುತ್ತಿದ್ದ ಆ ಕ್ಷಣ ಬಂದೇ ಬಿಡುತ್ತದೆ.












Click it and Unblock the Notifications