Get Updates
Get notified of breaking news, exclusive insights, and must-see stories!

ಜಗನ್‌ರಿಂದ ನಮ್ಮಪ್ಪನಿಗೆ ತೊಂದ್ರೆ ಆಗ್ತಿದೆ: ಅಮಿತ್‌ ಶಾ ಮುಂದೆ ಅಳುತ್ತಲೇ ಅಳಲು ತೋಡಿಕೊಂಡ ಚಂದ್ರಬಾಬು ನಾಯ್ಡು ಪುತ್ರ

ಆಂದ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನವಾಗಿ ಹಲವು ದಿನಗಳೇ ಕಳೆದಿವೆ. ಅವರ ಬಂಧನಕ್ಕೆ ಸಿಎಂ ಜಗನ್‌ ಮೋಹನ ರೆಡ್ಡಿ ಕಾರಣವೆಂದು ನಾಯ್ಡು ಕುಟುಂಬದವರು ಆರೋಪಿಸುತ್ತಿದ್ದಾರೆ. ಜಗನ್ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನಾಯ್ಡು ಪುತ್ರ, ಟಿಡಿಪಿ ನಾಯಕ ನಾರಾ ಲೋಕೇಶ್ ಹೇಳಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ.

73 ವರ್ಷದ ಚಂದ್ರಬಾಬು ನಾಯ್ಡು ವಿರುದ್ಧ ಹಲವು ಆರೋಪ ಹೊರಿಸಲಾಗಿದೆ. ಇಷ್ಟೊಂದು ಆರೋಪಗಳನ್ನು ಹೊರಿಸಿ ತೊಂದರೆ ಕೊಡುವುದು ಸರಿಯಲ್ಲ ಎಂಬುದಾಗಿ ನಾರಾ ಲೋಕೇಶ್‌ ಮುಂದೆ ಅಮಿತ್ ಶಾ ಹೇಳಿದ್ದಾರೆ ಎಂದು ವರದಿಯಾಗಿದೆ.

Chandrababu Naidu’s son meets Home Minister Amit Shah, claims father life ‘under threat’

ಕೌಶಲ್ಯಾಭಿವೃದ್ಧಿ ನಿಗಮದ ಹಗರಣದಲ್ಲಿ ತಮ್ಮ ತಂದೆಯನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ನಾರಾ ಲೋಕೇಶ್ ಅವರ ಅಳಲಾಗಿದೆ. ಟಿಡಿಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಂದ್ರಬಾಬು ನಾಯ್ಡು ಅವರ ಪುತ್ರ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ನೇತೃತ್ವದ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಚಂದ್ರಬಾಬು ನಾಯ್ಡು ವಿರುದ್ಧ ಜಗನ್‌ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ನಾರಾ ಲೋಕೇಶ್‌ ಅಮಿತ್‌ ಶಾ ಅವರಿಗೆ ಹೇಳಿದ್ದಾರೆ.

73 ವರ್ಷದ ಹಿರಿಯ ನಾಯಕನಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ತಮ್ಮ ತಂದೆಯನ್ನು ರಾಜಮಂಡ್ರಿ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ. ಅಲ್ಲಿ ಭಯಾನಕ ವಾತಾವರಣವಿದೆ. ಅಲ್ಲಿ ಅವರ ಜೀವಕ್ಕೆ ಬೆದರಿಕೆ ಇದೆ ಎಂದು ನಾ ರಾ ಲೋಕೇಶ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೊಸ್ಟ್‌ ಮಾಡಿದ್ದಾರೆ.

ದೆಹಲಿಗೆ ತೆರಳುವ ಮುನ್ನ ವಿಜಯವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ ಅವರು, 'ಕಳೆದ ಒಂದು ವಾರದಲ್ಲಿ ತಾಪಮಾನ ಏರಿಕೆಯಾಗಿದೆ. ಬಿಸಿಗಾಳಿ ಬೀಸುತ್ತಿದೆ. ನನ್ನ ತಂದೆ ವಿಪರೀತ ತಾಪಮಾನದ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ' ಎಂದು ಅವರು ಹೇಳಿದ್ದಾರೆ.

ಅವರಿಗೆ ಡಿಹೈರ್ಡೆಟ್‌ ಆಗುತ್ತಿದೆ. ಸಾಕಷ್ಟು ಅಸ್ವಸ್ಥತೆಯಲ್ಲಿದ್ದಾರೆ. ಅವರು 73 ವರ್ಷ ವಯಸ್ಸಿನವರಾಗಿದ್ದಾರೆ. ಅವರಿಗೆ ಬಿಪಿ ಶುಗರ್‌ ಇದೆ. ಅವರ ಮೇಲೆ ಸುಳ್ಳು ಪ್ರಕರಣಗಳನ್ನು ಹೇರಿಲಾಗಿದೆ. 32 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಎ ಕ್ಲಾಸ್‌ ಸೌಲಭ್ಯಗಳನ್ನು ನೀಡದಿರುವುದು ಸ್ವೀಕಾರಾರ್ಹವಲ್ಲ ಎಂದು ಲೋಕೇಶ್‌ ತಿಳಿಸಿದ್ದಾರೆ.

ಈ ಹಿಂದೆ ಜಗನ್ ಕೇವಲ ಸಂಸದರಾಗಿದ್ದರು. ಅವರನ್ನು ಚಂಚಲಗುಡ ಜೈಲಿನಲ್ಲಿ ಇರಿಸಲಾಗಿತ್ತು. ಅವರು ಎ ಕ್ಲಾಸ್‌ ಸೌಲಭ್ಯಗಳನ್ನು ಕೋರಿದ್ದಾರೆ. ಅವರಿಗೆ ಈ ಸೌಲಭ್ಯವನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದ ಮಾಜಿ ಸಿಎಂ ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕಳೆದ ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 18 ರ ವರೆಗೆ ವಿಸ್ತರಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+