ಒಂದು ದಿನದ ಉಪವಾಸ ಅಂತ್ಯಗೊಳಿಸಿದ ಚಂದ್ರಬಾಬುನಾಯ್ಡು
Recommended Video

ನವದೆಹಲಿ, ಫೆಬ್ರವರಿ 12 : ಟಿಡಿಪಿ ಅಧ್ಯಕ್ಷ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. ನವದೆಹಲಿಯ ಆಂಧ್ರಭವನದಲ್ಲಿ ಉಪವಾಸ ಕೂತಿದ್ದರು.
ಸೋಮವಾರ ಸಂಜೆ ಚಂದ್ರಬಾಬುನಾಯ್ಡು ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಚಂದ್ರಬಾಬುನಾಯ್ಡು ಅವರ ಉಪವಾಸಕ್ಕೆ ಹಲವು ನಾಯಕರು ಬೆಂಬಲ ಸೂಚಿಸಿದ್ದರು.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ನವದೆಹಲಿಯ ಆಂಧ್ರಭವನದಲ್ಲಿ ಚಂದ್ರಬಾಬುನಾಯ್ಡು ಅವರು ನೂರಾರು ಜನರ ಜೊತೆ ಸೋಮವಾರ ಬೆಳಗ್ಗೆ 8 ರಿಂದ ಸಂಜೆ 8 ಗಂಟೆ ತನಕ ಉಪವಾಸ ಕೂತಿದ್ದರು.

ಮಂಗಳವಾರ ಚಂದ್ರಬಾಬುನಾಯ್ಡು ಅವರ ನೇತೃತ್ವದಲ್ಲಿ ಆಂಧ್ರಭವನದಲ್ಲಿ ಬೃಹತ್ ಜಾಥಾ ನಡೆಯಲಿದೆ. ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಕೇಂದ್ರ ಸರ್ಕಾರ ನೀಡಿದ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿ ಟಿಡಿಪಿ ಕಳೆದ ವರ್ಷ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು.
'ನಮಗೆ ನ್ಯಾಯಬೇಕು, ನಾವು ಸಹ ಈ ದೇಶದ ಭಾಗವಾಗಿದ್ದೇವೆ. ಮೋದಿ ರಾಜಧರ್ಮವನ್ನು ಪಾಲಿಸದೇ ಇರುವಾಗ ಅದರ ಬಗ್ಗೆ ನೆನಪಿಸುವುದು ನಮ್ಮ ಕರ್ತವ್ಯ. ಕೇಂದ್ರ ಸರ್ಕಾರದಿಂದಾಗಿ ನಾವು ತೊಂದರೆ ಅನುಭವಿಸುತ್ತಿದ್ದೇವೆ' ಎಂದು ಚಂದ್ರಬಾಬುನಾಯ್ಡು ಹೇಳಿದ್ದಾರೆ.












Click it and Unblock the Notifications