ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗೆ ಗೂಗಲ್ ನಿಂದ ಭರ್ಜರಿ ಆಫರ್

Posted By:
Subscribe to Oneindia Kannada

ಚಂಡೀಗಢ, ಜುಲೈ 31: ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ಚಂಡೀಗಢದ ವಿದ್ಯಾರ್ಥಿಯೊಬ್ಬ ಸರ್ಚ್ ಇಂಜಿನ್ ದೈತ್ಯ ಗೂಗಲ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾನೆ.

ತನ್ನ ಕನಸಿನ ಉದ್ಯೋಗ ಪಡೆದಿರುವ ಹರ್ಷಿತ್, ಗೂಗಲ್ ನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಒಂದು ವರ್ಷದ ಅವಧಿಗೆ ತರಬೇತಿ ಪಡೆಯಲಿದ್ದಾನೆ. ಸರ್ಕಾರಿ ಶಾಲೆಯಲ್ಲೇ ಎಸೆಸ್ಸೆಲ್ಸಿ ತನಕ ಓದಿರುವ ಹರ್ಷಿತ್ , ಗ್ರಾಫಿಕ್ ಡಿಸೈನಿಂಗ್ ನಲ್ಲಿ ಸ್ವಯಂ ಆಸಕ್ತಿ ಬೆಳೆಸಿಕೊಂಡು ಕಲಿತಿದ್ದಾನೆ.

Harshit

ನನ್ನ ಅಂಕಲ್ ಒಬ್ಬರು ಸಾಫ್ಟ್ ವೇರ್ ಬಗ್ಗೆ ತಿಳಿಸಿಕೊಟ್ಟರು. ಯಾವುದೇ ಶಿಕ್ಷಣ ಸಂಸ್ಥೆಗೆ ಹೋಗಿ ನಾನು ಗ್ರಾಫಿಕ್‌ ಡಿಸೈನ್‌ ಕಲಿತಿಲ್ಲ ಎಂದು ಹರ್ಷಿತ್ ಹೇಳಿದ್ದಾನೆ. ಆಗಸ್ಟ್ 7ರಂದು ಕ್ಯಾಲಿಫೋರ್ನಿಯಾಗೆ ಹೋಗಲಿದ್ದು, ತರಬೇತಿ ನಂತರ 12 ಲಕ್ಷ ರು ನಷ್ಟು ಸಂಬಳ ಪ್ರತಿ ತಿಂಗಳು ಪಡೆಯಲಿದ್ದಾನೆ.
Governemnt Changes College Timings | Students

ಸಿನಿಮಾ ಪೋಸ್ಟರ್ ಹುಚ್ಚು: ಶಾಲಾದಿನಗಳಲ್ಲಿ ಬಾಲಿವುಡ್ ಹಾಗೂ ಹಾಲಿವುಡ್ ಸ್ಟಾರ್ ನಟ, ನಟಿಯರ ಚಿತ್ರಗಳ ಆಕರ್ಷಕ ಪೋಸ್ಟರ್ ವಿನ್ಯಾಸಗೊಳಿಸಿ 4 ರಿಂದ 5 ಸಾವಿರ ರು ಗಳಿಸುತ್ತಿದ್ದ ಹರ್ಷಿತ್ ಗೆ ಗೂಗಲ್ ನಲ್ಲಿ ಉದ್ಯೋಗ ಇರುವುದು ತಿಳಿದ ಕೂಡಲೇ ಅರ್ಜಿ ಹಾಕಿದ್ದಾನೆ. ಜೂನ್ ತಿಂಗಳಿನಲ್ಲಿ ನೇಮಕಾತಿಯಾಗಿರುವ ಬಗ್ಗೆ ಪತ್ರ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chandigarh Class XII boy from govt school bags his dream job at Google. Harshit will receive training in graphic designing for a stipend of Rs 4 lakh per month. After completing training, he will get a remuneration of Rs 12 lakh per month.
Please Wait while comments are loading...