• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಪುನರಾಯ್ಕೆ ಸಾಧ್ಯತೆ ಶೇ 50 ಮಾತ್ರ! ಹಾಗಿದ್ದರೆ ಬದಲಾಗಿದ್ದೇನು?

|
   ಲೋಕಸಭೆ ಚುನಾವಣೆ 2019ಕ್ಕೆ ನರೇಂದ್ರ ಮೋದಿ ಪುನರಾಯ್ಕೆ ಸಾಧ್ಯತೆ ಶೇ 50ರಷ್ಟು ಮಾತ್ರ | Oneindia Kannada

   ನರೇಂದ್ರ ಮೋದಿ ಪುನರಾಯ್ಕೆ ಆಗುವ ಸಾಧ್ಯತೆಗಳು 2017ನೇ ಇಸವಿಯಲ್ಲಿ ಶೇ 99ರಷ್ಟಿತ್ತು. ಆ ಪ್ರಮಾಣ ಈಗ ಶೇ 50ಕ್ಕೆ ಕುಸಿದಿದೆ. 2019ರ ಲೋಕಸಭೆ ಚುನಾವಣೆಗೆ ಮೋದಿ ಪುನರಾಯ್ಕೆ ಸಾಧ್ಯತೆಗಳು ಕಡಿಮೆ ಆಗುತ್ತಿವೆ ಎಂದು ಆರ್ಥಿಕ ವಿಶ್ಲೇಷಕ ರುಚಿರ್ ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ. ವಿಪಕ್ಷಗಳೆಲ್ಲ ಒಟ್ಟಾಗಿ ಸೇರಿ ಚುನಾವಣೆ ಎದುರಿಸುವ ಸಾಧ್ಯತೆ ಇರುವ ಕಾರಣಕ್ಕೆ ಇಂಥ ಫಲಿತಾಂಶ ನಿರೀಕ್ಷಿಸಬಹುದು.

   ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಶೇ 31ರಷ್ಟು ಮತ ಗಳಿಕೆಯೊಂದಿಗೆ ಅದ್ಭುತ ಜಯ ದಾಖಲಿಸಿತ್ತು. ಆಗ ವಿರೋಧ ಪಕ್ಷಗಳು ಒಟ್ಟಾಗಿರಲಿಲ್ಲ. ಸ್ಥಾನ ಹಂಚಿಕೆ ಪ್ರಮಾಣ ಸರಿಯಾದ ರೀತಿಯಲ್ಲಿ ಇರಲಿಲ್ಲ. ಬಿಜೆಪಿಯ ಮತಗಳು ಒಟ್ಟಾಗಿ ಸಿಕ್ಕಿದ್ದವು ಎಂದು ನ್ಯೂಯಾರ್ಕ್ ಮೂಲದ ಅಂಕಣಕಾರ ಮತ್ತು ಆರ್ಥಿಕ ತಜ್ಞ ತಮ್ಮ ಹೊಸ ಪುಸ್ತಕ ಡೆಮಾಕ್ರಸಿ ಆನ್ ದ ರೋಡ್ ನ ಕೆಲಸದಲ್ಲಿ ತೊಡಗಿರುವ ಶರ್ಮಾ ಹೇಳಿದ್ದಾರೆ.

   ಕಾಂಗ್ರೆಸ್ಸಿನ ಅತ್ಯುತ್ತಮ ಪ್ರಧಾನಿ ಅಭ್ಯರ್ಥಿ ಯಾರು? ಸಮೀಕ್ಷೆ ಏನನ್ನುತ್ತೆ?

   2019ರ ಲೋಕಸಭೆ ಚುನಾವಣೆಗೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಾನು ಪಂಥ ಕಟ್ಟುವವನಾಗಿದ್ದರೆ, ಕಳೆದ ವರ್ಷ ಇದೇ ಸಮಯದಲ್ಲಿ ಮೋದಿ ಪುನರಾಯ್ಕೆ ಸಾಧ್ಯತೆ ಶೇಕಡಾ 99ರಷ್ಟು ಎನ್ನುತ್ತಿದ್ದೆ. ಅದೇ ರೀತಿಯಲ್ಲಿ ಉತ್ತರಪ್ರದೇಶ ಚುನಾವಣೆಯಲ್ಲಿ ಭಾರ್ಜರಿ ಜಯ ದಾಖಲಿಸಲು ಸಾಧ್ಯವಾಯಿತು. ಆದರೆ ಪರಿಸ್ಥಿಯು ಈಗ ಬಹಳ ಬದಲಾಗಿದೆ ಎಂದು ರುಚಿರ್ ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ.

   ಭಾರತದ ರಾಜಕಾರಣದ ಬಗ್ಗೆ ವಿಶೇಷ ಒಲವು

   ಭಾರತದ ರಾಜಕಾರಣದ ಬಗ್ಗೆ ವಿಶೇಷ ಒಲವು

   ಆರ್ಥಿಕ ತಜ್ಞರೂ ಆಗಿರುವ ರುಚಿರ್ ಶರ್ಮಾ ವಿಶ್ವ ರಾಜಕೀಯ ಬೆಳವಣಿಗೆಗಳ ಬಗ್ಗೆ ಆಸಕ್ತಿಯಿಂದ ಅಭ್ಯಾಸ ಮಾಡುವವರು. ಅದರಲ್ಲೂ ಭಾರತದ ರಾಜಕಾರಣದ ಬಗ್ಗೆ ವಿಶೇಷ ಒಲವು ಇರುವವರು. ಅವರ ಹೊಸ ಪುಸ್ತಕವು ಮುಂದಿನ ವರ್ಷದ ಫೆಬ್ರವರಿ ಹೊತ್ತಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಭಾರತದ ಪ್ರಜಾತಂತ್ರ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಚುನಾವಣೆ ಮೂಲಕ ನೋಡುವ ಪ್ರಯತ್ನ ಆ ಪುಸ್ತಕದಲ್ಲಿ ಮಾಡಲಾಗಿದೆ.

   ಇಪ್ಪತ್ನಾಲ್ಕು ಚುನಾವಣೆ ವಿಶ್ಲೇಷಣಾತ್ಮಕವಾಗಿ ಗಮನಿಸಿದ್ದಾರೆ

   ಇಪ್ಪತ್ನಾಲ್ಕು ಚುನಾವಣೆ ವಿಶ್ಲೇಷಣಾತ್ಮಕವಾಗಿ ಗಮನಿಸಿದ್ದಾರೆ

   ರುಚಿರ್ ಶರ್ಮಾ ಈ ವರೆಗೆ ಭಾರತದಲ್ಲಿ ಇಪ್ಪತ್ನಾಲ್ಕು ಚುನಾವಣೆಗಳನ್ನು ವಿಶ್ಲೇಷಣಾತ್ಮಕವಾಗಿ ಗಮನಿಸಿದ್ದಾರೆ. 2004ರ ಲೋಕಸಭಾ ಚುನಾವಣೆಯ ಪರಿಸ್ಥಿತಿಯನ್ನು ನೆನಪಿಸಿಕೊಂಡಿರುವ ಅವರು, ಆಗಿನ ಪ್ರಧಾನಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಹಾಗೂ ವಿಪಕ್ಷಗಳ ಮಧ್ಯೆ ಜನಪ್ರಿಯತೆಯ ದೃಷ್ಟಿಯಿಂದ ಇದ್ದ ವ್ಯತ್ಯಾಸವೇ ಈಗ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷಗಳ ಮಧ್ಯೆ ಇದೆ ಎಂದು ಶರ್ಮಾ ಅಭಿಪ್ರಾಯ ಪಡುತ್ತಾರೆ. 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸೋಲನುಭವಿಸಿ, ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದಿತ್ತು. ಮನ್ ಮೋಹನ್ ಸಿಂಗ್ ಪ್ರಧಾನಿಯಾದರು.

   ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿಗೆ ಬಹುಮತವಿಲ್ಲ!

   ಉತ್ತರಪ್ರದೇಶದಲ್ಲಿ ಜಾತಿ ಆಧಾರದಲ್ಲೇ ಮತದಾನ

   ಉತ್ತರಪ್ರದೇಶದಲ್ಲಿ ಜಾತಿ ಆಧಾರದಲ್ಲೇ ಮತದಾನ

   2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಶೇ 31ರಷ್ಟು ಮತ ಗಳಿಸಲು ವಿರೋಧ ಪಕ್ಷಗಳು ಛಿದ್ರವಾಗಿದ್ದದ್ದು, ಸ್ಥಾನ ಹೊಂದಾಣಿಕೆಯು ಸರಿ ಪ್ರಮಾಣದಲ್ಲಿ ಆಗದಿದ್ದದ್ದು ಹಾಗೂ ಬಿಜೆಪಿಯ ಮತಗಳು ಚದುರದೇ ಇದ್ದದ್ದು ಕಾರಣ. ಈ ಸಲ ಉತ್ತರಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಬಹುಜನ ಸಮಾಜ ಪಕ್ಷ ಹಾಗೂ ಸಮಾಜವಾದಿ ಪಕ್ಷ ಹೊಂದಾಣಿಕೆ ಮಾಡಿಕೊಂಡರೆ ಆ ಮೈತ್ರಿ ಕೂಟ ಅಲ್ಲಿ ಭರ್ಜರಿ ಗೆಲುವು ಸಾಧಿಸುತ್ತದೆ. ಎಂಬತ್ತು ಲೋಕಸಭೆ ಸ್ಥಾನಗಳ ಪೈಕಿ ಸಿಂಹಪಾಲು ಅವುಗಳದಾಗುತ್ತವೆ. ಅಲ್ಲಿ ಈಗಲೂ ಜಾತಿ ಆಧಾರದಲ್ಲೇ ಮತದಾನ ನಡೆಯುತ್ತದೆ. ಒಂದು ವೇಳೆ ಆ ಮೈತ್ರಿ ಆಗದಿದ್ದರೆ ಬಿಜೆಪಿ ಗೆಲುವು ಸಲೀಸು ಎಂದು ವಿಶ್ಲೇಷಣೆ ಮಾಡಿದ್ದಾರೆ ಶರ್ಮಾ.

   ಇಪ್ಪತ್ತಾರು ಚುನಾವಣೆ ಪ್ರವಾಸ ಮಾಡಿದ್ದಾರೆ

   ಇಪ್ಪತ್ತಾರು ಚುನಾವಣೆ ಪ್ರವಾಸ ಮಾಡಿದ್ದಾರೆ

   ಮೈತ್ರಿ ಆಧಾರದ ಮೇಲೆ ಜಾತಿವಾರು ಮತಗಳು ಹೇಗೆ ಚಲಾವಣೆ ಆಗುತ್ತವೆ ಎಂಬ ನಿರ್ಧಾರವಾಗುತ್ತದೆ. ಕಳೆದ ಮೂವತ್ತು ವರ್ಷಗಳಲ್ಲಿ ಅಲ್ಲೇನೂ ಬದಲಾವಣೆ ಆಗಿಲ್ಲ. ಯಾರಿಗೆ ಮತ ಹಾಕುವುದು ಎಂಬ ಸಂಗತಿ ಜಾತಿ ಆಧಾರದಲ್ಲೇ ನಿರ್ಧಾರ ಆಗುತ್ತದೆ. ಮೇಲ್ಜಾತಿಯವರು ಬಿಜೆಪಿಗೆ, ದಲಿತರು ಮಾಯಾವತಿಗೆ- ಅಭಿವೃದ್ಧಿ ಅನ್ನೋದು ಚುನಾವಣೆ ವಿಷಯವೇ ಅಲ್ಲವೇ ಎಂದು ಕೇಳಿದರೆ, ಅಲ್ಲಿನ ಜನರು ಅದಕ್ಕೆ ನಗುತ್ತಾರಂತೆ. ಒಟ್ಟು ರುಚಿರ್ ಶರ್ಮಾ ಇಪ್ಪತ್ತಾರು ಚುನಾವಣೆ ಪ್ರವಾಸ ಮಾಡಿದ್ದಾರೆ. ಅದರಲ್ಲಿ ಆರು ಅಥವಾ ಏಳು ಉತ್ತರಪ್ರದೇಶ ಚುನಾವಣೆ ವರದಿ ಮಾಡಿದ್ದಾರೆ.

   lok-sabha-home

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Prime Minister Narendra Modi's chances of getting re-elected in the 2019 elections have slipped from 99 percent in 2017 to 50 percent, says economic analyst Ruchir Sharma, noting that a fragmented opposition is showing signs of coming together.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more