• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ V ಲಸಿಕೆ ತಯಾರಿಕೆ, ಪ್ರಯೋಗಕ್ಕೆ ಒಪ್ಪಿಗೆ

|

ನವದೆಹಲಿ, ಸೆಪ್ಟೆಂಬರ್ 09: ಸ್ಪುಟ್ನಿಕ್ 5 ಲಸಿಕೆಯ ಮೂರನೇ ಹಂತದ ಪ್ರಯೋಗ ಮತ್ತು ಲಸಿಕೆ ತಯಾರಿಕೆ ಕುರಿತು ರಷ್ಯಾದ ಮನವಿಯನ್ನು ಭಾರತ ಸ್ವೀಕರಿಸಿದೆ ಎಂದು ಸರ್ಕಾರ ತಿಳಿಸಿದೆ. ರಷ್ಯಾದ ಮನವಿಗೆ ಅನುಕೂಲವಾಗುವಂತೆ ಭಾರತ ಕಾರ್ಯ ನಿರ್ವಹಿಸಲಿದೆ. ರಷ್ಯಾವು ಸೂಕ್ತ ಕಾರಣಗಳ ಮೂಲಕ ಭಾರತವನ್ನು ತಲುಪಿದೆ. ಹಾಗೂ ಎರಡು ಕಡೆಗಳಲ್ಲಿ ಭಾರತದ ಸಹಾಯವನ್ನು ಕೋರಿದೆ.

   Sputnik V Vaccine ಎಲ್ಲಾ ಪ್ರಯೋಗಗಳಲ್ಲೂ ಯಶಸ್ಸು ,Russiaದ ಮತ್ತೊಂದು ಮೈಲುಗಲ್ಲು | Oneindia Kannada

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   ಲಸಿಕೆ ತಯಾರಿಕಾ ಕಂಪನಿ ಕೂಡ ಉತ್ತಮವಾಗಿದೆ. ಭಾರತದ ಕಂಪನಿ ಜೊತೆ ಸೇರಿ ದೊಡ್ಡ ಮಟ್ಟದಲ್ಲಿ ಲಸಿಕೆ ತಯಾರಿಕೆಯ ಗುರಿ ಹೊಂದಿದೆ ಎಂದು ಹೇಳಿದೆ. ಸಮಗ್ರ ದತ್ತಾಂಶವನ್ನು ನೀಡಲಾಗಿದ್ದು, ಭಾರತದಲ್ಲಿ ಮೂರನೇ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಕೋರಿದ್ದಾರೆ. ಭಾರತದಿಂದ ಅನುಮೋದನೆ ಸಿಕ್ಕಿದ ನಂತರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಭಾರತದಲ್ಲಿ ಆರಂಭವಾಗುತ್ತದೆ.

   ಕೊರೊನಾ ಕೊನೆಯ ಸಾಂಕ್ರಾಮಿಕವಲ್ಲ: ಭವಿಷ್ಯದ ಸವಾಲುಗಳಿಗೆ ಸಿದ್ಧರಾಗಿ

   ಸ್ಪುಟ್ನಿಕ್ 5 ವೆಬ್‌ಸೈಟ್ ಮಾಹಿತಿ ಪ್ರಕಾರ ಸೌದಿ ಅರೇಬಿಯಾ, ಯುಎಇ, ಬ್ರೆಜಿಲ್ ಮತ್ತು ಫಿಲಿಪೈನ್ಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ರಷ್ಯಾ ಮುಂದಾಗಿದೆ.

   ಸ್ಪುಟ್ನಿಕ್ 5 ಲಸಿಕೆಯ 3ನೇ ಹಂತದ ಪ್ರಯೋಗ ಭಾರತದಲ್ಲಿ

   ಸ್ಪುಟ್ನಿಕ್ 5 ಲಸಿಕೆಯ 3ನೇ ಹಂತದ ಪ್ರಯೋಗ ಭಾರತದಲ್ಲಿ

   ಸ್ಪುಟ್ನಿಕ್ 5 ಲಸಿಕೆಯ ಒಂದು ಮತ್ತು ಎರಡನೇ ಹಂತದ ಪ್ರಯೋಗ ಈಗಾಗಲೇ ಮುಗಿದಿದೆ. ಮೂರನೇ ಹಂತದ ಪ್ರಯೋಗವನ್ನು ಭಾರತದಲ್ಲಿಯೇ ಮುಂದುವರೆಸಲು ನಿರ್ಧರಿಸಿದ್ದಾರೆ.

   ರಷ್ಯಾ ಮನವಿಗೆ ಸಮ್ಮತಿ

   ರಷ್ಯಾ ಮನವಿಗೆ ಸಮ್ಮತಿ

   ರಷ್ಯಾದ ಮನವಿಗೆ ಭಾರತ ಒಪ್ಪಿಗೆ ನೀಡಿದೆ. ರಷ್ಯಾದೊಂದಿಗೆ ಭಾರತಕ್ಕೆ ಈಗ ತುಂಬಾ ಹತ್ತಿರದ ಗೆಳೆತನವಿದೆ. ಸ್ಪುಟ್ನಿಕ್ 5 ಲಸಿಕೆಯನ್ನು ಭಾರತದಲ್ಲಿಯೇ ತಯಾರಿಸಲು ಮೂರನಾಲ್ಕು ಕಂಪನಿಗಳು ಒಪ್ಪಿಗೆ ನೀಡಿವೆ. ಕಂಪನಿಯೊಂದು ಅಂತಿಮಗೊಳಿಸಿದ ನಂತರ ಭಾರತೀಯ ಸ್ವಯಂಸೇವಕರೊಂದಿಗೆ ಪ್ರಯೋಗಗಳು ಆರಂಭವಾಗುತ್ತವೆ. ಉಭಯ ರಾಷ್ಟ್ರಗಳ ಒಗ್ಗೂಡುವಿಕೆಯಿಂದ ಹೆಚ್ಚೆಚ್ಚು ಲಸಿಕೆಗಳನ್ನು ತಯಾರಿಸಬಹುದಾಗಿದೆ.

   ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ

   ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ

   ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ

   ವಿಶ್ವದ ಮೊಟ್ಟ ಮೊದಲ ಕೊರೊನಾ ಲಸಿಕೆ ಎನಿಸಿಕೊಂಡಿರುವ ರಷ್ಯಾದ ಸ್ಪುಟ್ನಿಕ್ 5 ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆಯಾಗಿದೆ. ಲಸಿಕೆಯನ್ನು ರಷ್ಯಾದ ಗಮಲೇಯ ನ್ಯಾಷನಲ್ ರೆಸರ್ಚ್ ಸೆಂಟರ್ ಆಫ್ ಎಪಿಡೆಮಿಯಾಲಜಿ ಆಂಡ್ ಮೈಕ್ರೋಬಯೋಲಜಿ ಹಾಗೂ ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಈ ಲಸಿಕೆ ಉತ್ಪಾದಿಸಿವೆ. ಭಾರತದೊಂದಿಗೆ ಕೊರೊನಾ ಲಸಿಕೆಯ ಸಂಪೂರ್ಣ ಮಾಹಿತಿ ಹಂಚಿಕೊಂಡ ರಷ್ಯಾ ಈ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತದೆ.ರಷ್ಯಾದ ಆರೋಗ್ಯ ಸಚಿವಾಲಯವು ಆಗಸ್ಟ್ 11 ರಂದು ಸ್ಪುಟ್ನಿಕ್ 5 ಲಸಿಕೆಯನ್ನು ನೋಂದಣಿ ಮಾಡಿತ್ತು. ರಷ್ಯಾದಿಂದ ಲಸಿಕೆ ತರಿಸಿಕೊಳ್ಳುವ ಪ್ರಯತ್ನದಲ್ಲಿ ನಾವಿದ್ದೇವೆ. ರಷ್ಯಾದಲ್ಲಿ ಬಯೋಟೆಕ್ನಾಲಜಿ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್, ಭಾರತೀಯ ರಾಯಭಾರಿ ಡಿಬಿ ವೆಂಕಟೇಶ್ ವರ್ಮ ಅವರ ಬಳಿ ಮಾತುಕತೆ ನಡೆಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.

   ಭಾರತದೊಂದಿಗೆ ಕೊರೊನಾ ಲಸಿಕೆಯ ಸಂಪೂರ್ಣ ಮಾಹಿತಿ ಹಂಚಿಕೊಂಡ ರಷ್ಯಾ

   ಭಾರತದೊಂದಿಗೆ ಕೊರೊನಾ ಲಸಿಕೆಯ ಸಂಪೂರ್ಣ ಮಾಹಿತಿ ಹಂಚಿಕೊಂಡ ರಷ್ಯಾ

   ರಷ್ಯಾವು ವಿಶ್ವದ ಮೊದಲ ಕೊರೊನಾ ಲಸಿಕೆ ಸ್ಪುಟ್ನಿಕ್ 5 ಕುರಿತು ಸಂಪೂರ್ಣ ಅಂಕಿ ಸಂಖ್ಯೆಗಳ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಂಡಿದೆ.

   ಮಾಸ್ಕೋದಲ್ಲಿ ಸ್ಪುಟ್ನಿಕ್ 5 ಲಸಿಕೆಯ ಮೊದಲ ಹಾಗೂ ಎರಡನೇ ಹಂತದ ಪ್ರಯೋಗಗಳು ನಡೆದಿವೆ. ಇದೀಗ ಅಂಕಿ, ಸಂಖ್ಯೆಗಳು ಸೇರಿದಂತೆ ಗೌಪ್ಯ ಮಾಹಿತಿಯನ್ನು ರಷ್ಯಾ ಭಾರತದೊಂದಿಗೆ ಹಂಚಿಕೊಂಡಿದೆ. ಕೊರೊನಾ ಲಸಿಕೆ ತಯಾರಿಕೆಗೆ ಭಾರತದ ಸಹಕಾರ ಕೇಳಿದ ರಷ್ಯಾ ಮೊದಲು ಹಾಗೂ ಎರಡನೇ ಹಂತದ ಪ್ರಯೋಗದಲ್ಲಿ 76 ಮಂದಿಯ ಮೇಲೆ ಪ್ರಯೋಗ ನಡೆಸಲಾಗಿತ್ತು. ಪ್ರತಿಯೊಬ್ಬರಲ್ಲೂ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ.

   ಇದು ರೋಗ ನಿರೋಧಕ ಲಸಿಕೆಯಾಗಿದೆ. ಯಾವುದೇ ರೀತಿಯ ಅಡ್ಡ ಪರಿಣಾಮವನ್ನುಂಟು ಮಾಡುವುದಿಲ್ಲ ಎಂಬುದು ಸಾಬೀತಾಗಿದೆ.

   English summary
   India has received Russia's request for conducting phase 3 human trials and manufacturing the Sputnik V coronavirus vaccine, the government said today. It said India is working to facilitate Russia's request.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X