ಕೋವಿಡ್-19 ಲಸಿಕೆ: 1 ಕೋಟಿ ಕೋವಿಶೀಲ್ಡ್‌ ಲಸಿಕೆ ಆರ್ಡರ್ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ, ಫೆಬ್ರವರಿ 04: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಆಕ್ಷ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಕೋವಿಶೀಲ್ಡ್‌ ಅನ್ನು ಕೇಂದ್ರ ಸರ್ಕಾರ ಎರಡನೇ ಬಾರಿಗೆ ಆರ್ಡರ್ ಮಾಡಿದ್ದು, ಜಿಎಸ್‌ಟಿ ಸೇರಿದಂತೆ ತಲಾ 210 ರೂಪಾಯಿಯಂತೆ 1 ಕೋಟಿ ಲಸಿಕೆಯನ್ನು ಎಸ್‌ಐಐನಿಂದ ಪಡೆಯಲಿದೆ.

ಎಸ್‌ಎಲ್‌ಐನ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರ ಹೆಸರಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಪೂರೈಕೆ ಆದೇಶ ಹೊರಡಿಸಿದೆ.

ಎಸ್‌ಐಐನೊಂದಿಗಿನ ಸರ್ಕಾರದ ಈ ಎರಡನೇ ಆರ್ಡರ್‌ನಿಂದಾಗಿ ಒಟ್ಟು ವೆಚ್ಚವು 441 ಕೋಟಿ ರೂ.ಗೆ ಏರಿದೆ. ಮೊದಲ ಆರ್ಡರ್‌ನಲ್ಲಿ 11 ಕೋಟಿ ಡೋಸ್ 231 ಕೋಟಿ ರೂಪಾಯಿ ಆಗಿತ್ತು.

Centre Places Second Order Of 1 Crore Covishield Doses

ಈ ಹೊಸ ಆರ್ಡರ್‌ಗಳು ಜನವರಿ 11 ರಂದು ಸೀರಮ್ ಇನ್‌ಸ್ಟಿಟ್ಯೂಟ್‌ನಿಂದ 4.5 ಕೋಟಿ ಡೋಸ್‌ಗಳನ್ನು ಖರೀದಿಸುವ ಸರ್ಕಾರದ ಒಪ್ಪಂದಕ್ಕೆ ಅನುಗುಣವಾಗಿರುತ್ತದೆ. ಏತನ್ಮಧ್ಯೆ, ಭಾರತವು 18 ದಿನಗಳಲ್ಲಿ 4 ಮಿಲಿಯನ್ ಲಸಿಕೆಯನ್ನು ಜನರಿಗೆ ತಲುಪಿಸಿದ ವಿಶ್ವದ ಅತಿ ವೇಗದ ದೇಶವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+