• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

6 ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಹೆಚ್ಚಾಗಿರುವುದೆಷ್ಟು?

|

ನವದೆಹಲಿ, ಮಾರ್ಚ್ 22: ಭಾರತದಲ್ಲಿ ಕಳೆದ ಮೂರು ವಾರಗಳಿಂದಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಈ ವರ್ಷಾರಂಭದಲ್ಲಿಯೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ದಾಖಲೆ ಮಟ್ಟಕ್ಕೆ ಏರಿಸಿತ್ತು. ವರ್ಷದ ಮೊದಲ ಎರಡು ತಿಂಗಳಲ್ಲಿ ತೈಲ ಬೆಲೆ 21 ಬಾರಿ ಏರಿಕೆ ಕಂಡು ದಾಖಲೆ ನಿರ್ಮಿಸಿತ್ತು.

ಕೆಲವು ದಿನಗಳಿಂದೀಚೆ ತೈಲ ಬೆಲೆ ಮೇಲಿನ ಅಬಕಾರಿ ಸುಂಕ ತಗ್ಗಿಸುವ ಪ್ರಸ್ತಾಪ ಆಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕುರಿತು ಚರ್ಚೆ ನಡೆಸಲಿರುವುದಾಗಿ ತಿಳಿದುಬಂದಿದೆ.

ಮಾರ್ಚ್ 22: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ

ಸೋಮವಾರ ತೈಲಗಳ ಮೇಲಿನ ಅಬಕಾರಿ ಸುಂಕದ ಕುರಿತು ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಅಬಕಾರಿ ಸುಂಕವು ಕಳೆದ ಆರು ವರ್ಷಗಳಲ್ಲಿ ಶೇ 300ಕ್ಕಿಂತಲೂ ಹೆಚ್ಚಾಗಿದೆ ಎಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ. ಮುಂದೆ ಓದಿ...

 2014-15ರಲ್ಲಿ ಸಂಗ್ರಹವಾದ ಅಬಕಾರಿ ಸುಂಕವೆಷ್ಟು?

2014-15ರಲ್ಲಿ ಸಂಗ್ರಹವಾದ ಅಬಕಾರಿ ಸುಂಕವೆಷ್ಟು?

2014-15ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್‌ನ ಅಬಕಾರಿ ಸುಂಕದಿಂದ 29,279 ಕೋಟಿ ರೂಪಾಯಿ ಹಾಗೂ ಡೀಸೆಲ್ ಮೇಲಿನ ಸುಂಕದಿಂದ 42,881 ಕೋಟಿ ರೂಪಾಯಿ ಸಂಗ್ರಹಿಸಿರುವುದಾಗಿ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.

 ಏಪ್ರಿಲ್ 2020- ಜನವರಿ 2021ರ ಅಂತರದಲ್ಲಿ 2.95 ಲಕ್ಷ ಕೋಟಿ ಸಂಗ್ರಹ

ಏಪ್ರಿಲ್ 2020- ಜನವರಿ 2021ರ ಅಂತರದಲ್ಲಿ 2.95 ಲಕ್ಷ ಕೋಟಿ ಸಂಗ್ರಹ

ಪ್ರಸ್ತುತ ಹಣಕಾಸು ವರ್ಷದ (2020-21) ಮೊದಲ ಹತ್ತು ತಿಂಗಳಿನಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ 2.94 ಲಕ್ಷ ಕೋಟಿ ಅಬಕಾರಿ ಸುಂಕ ಸಂಗ್ರಹವಾಗಿರುವುದಾಗಿ ಪ್ರಶ್ನೆಯೊಂದಕ್ಕೆ ಠಾಕೂರ್ ಅವರು ಉತ್ತರಿಸಿದ್ದಾರೆ. 2014-15ರಲ್ಲಿ ನೈಸರ್ಗಿಕ ಅನಿಲವನ್ನೂ ಒಳಗೊಂಡಂತೆ 74,158 ಕೋಟಿ ರೂಪಾಯಿಯನ್ನು ಸಂಗ್ರಹಿಸಲಾಗಿತ್ತು. ಆದರೆ ಏಪ್ರಿಲ್ 2020 ಇಂದ ಜನವರಿ 2021ರ ಅಂತರದಲ್ಲೇ 2.95 ಲಕ್ಷ ಕೋಟಿಗೆ ಈ ಮೊತ್ತ ಏರಿಕೆಯಾಗಿದೆ.

ಮಾರ್ಚ್‌ 21: ಯಾವ ನಗರದಲ್ಲೂ ಪೆಟ್ರೋಲ್, ದರ ಏರಿಕೆಯಿಲ್ಲ

 ಶೇ 5.4ರಿಂದ ಶೇ 12.2ಕ್ಕೆ ಏರಿಕೆ

ಶೇ 5.4ರಿಂದ ಶೇ 12.2ಕ್ಕೆ ಏರಿಕೆ

ಒಟ್ಟು ಆದಾಯದ ಶೇಕಡಾವಾರು ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲದ ಮೇಲೆ ಸಂಗ್ರಹಿಸಿದ ತೆರಿಗೆಯು 2014-15ರಲ್ಲಿ ಶೇ 5.4 ಇದ್ದದ್ದು, ಈ ಹಣಕಾಸು ವರ್ಷದಲ್ಲಿ ಶೇ 12.2ಕ್ಕೆ ಏರಿದೆ ಎಂದು ಹೇಳಿದರು.

 9.48 ರೂ ಇದ್ದ ಸುಂಕ ಈಗ 32.90ರೂ

9.48 ರೂ ಇದ್ದ ಸುಂಕ ಈಗ 32.90ರೂ

ಪಟ್ರೋಲ್ ಮೇಲಿನ ಅಬಕಾರಿ ಸುಂಕವು 2014ರಲ್ಲಿ ಪ್ರತಿ ಲೀಟರ್ 9.48 ರೂ ಇದ್ದು, ಇದೀಗ ಲೀಟರಿಗೆ 32.90 ರೂಗೆ ಬಂದು ನಿಂತಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವು ಆಗ 3.56 ರೂ ಇದ್ದದ್ದು ಈಗ 31.80 ರೂಪಾಯಿಗೆ ತಲುಪಿದೆ ಎಂದು ಮಾಹಿತಿ ನೀಡಿದರು.

English summary
Central government's tax collections on petrol and diesel have jumped over 300 per cent in the last six years,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X