Namma metro Bengaluru-Mysuru: ಮೈಸೂರಿನಲ್ಲಿ ಮೆಟ್ರೋ ಓಡಾಡಲಿವೆ: ಪಿಎಂ ಮೋದಿ

ಬೆಂಗಳೂರು/ದೆಹಲಿ, ಅಕ್ಟೊಬರ್ 20: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳ ಸಂಚಾರ ನಡೆಸುತ್ತಿವೆ. ಇದರಂತೆ ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿಯೂ ಮೆಟ್ರೋ ರೈಲುಗಳು ಸಂಚರಿಸುವ ದಿನಗಳೂ ದೂರವಿಲ್ಲ. ಇದಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು ಮತ್ತು ಮೈಸೂರು ಜನರಿಗೆ ಸಂತಸದ ಸುದ್ದಿ ತಿಳಿಸಿದರು.

ಶುಕ್ರವಾರ್ ದೆಹಲಿಯಿಂದ ವರ್ಚುವಲ್ ಮೂಲಕ ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದ ಕೆಂಗೇರಿ-ಚಲ್ಲಘಟ್ಟ ಮತ್ತು ಬೈಯ್ಯಪ್ಪನಹಳ್ಳಿ-ಕೆ.ಆರ್‌ಪುರಂ ಮಾರ್ಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Central Govt Will Support for Namma Metro Extended Bengaluru To Mysuru, pm modi said

ಈ ವೇಳೆ ಬೆಂಗಳೂರಿನಿಂದ ಮೈಸೂರುವರೆಗೆ ಮೆಟ್ರೋ ರೈಲು ಜಾಲ ವಿಸ್ತರಣೆ ಮಾಡುವ ಕುರಿತು ಪ್ರಧಾನಮಂತ್ರಿಗಳು ಪ್ರಸ್ತಾಪಿಸಿದರು. ಈಗಾಗಲೇ ನವದೆಹಲಿ, ಉತ್ತರ ಪ್ರದೇಶ ನೋಯಿಡಾ, ಲಕ್ನೋ, ಕಾನ್‌ಪುರ ಸೇರಿದಂತೆ ಅನೇಕಕಡೆಗಳ್ಲಲಿ ಮೆಟ್ರೋ ರೈಲುಗಳು ಓಡಾಡುತ್ತಿವೆ.

ಅದೇ ರೀತಿ ಬೆಂಗಳುರಿನಲ್ಲಿ ಮೆಟ್ರೋ ರೈಲು ಸೇವೆ ಇದೆ. ಮುಂದಿನ ದಿನಗಳಲ್ಲಿ ಮೈಸೂರಿನ ಜನತೆಯು ಮೆಟ್ರೊದಲ್ಲಿ ಓಡಾಡುವ ಕಾಲ ದೂರವಿಲ್ಲ. ಬೆಂಗಳೂರಿನಿಂದ ಮೆಟ್ರೋ ಸಂಪರ್ಕ ಕಲ್ಪಿಸಲು ಅಗತ್ಯ ನೆರವು ನೀಡಲಾಗುವುದು. ಈ ಮೂಲಕ ಬೆಂಗಳೂರು ಮತ್ತು ಮೈಸೂರು ಎರಡು ಜಿಲ್ಲೆಗಳ ಮಧ್ಯೆ ಮೆಟ್ರೋ ಸಂಚಾರದ ಸುಳಿವು ಅವರು ನೀಡಿದ್ದಾರೆ.

ಅದಷ್ಟೆ ಅಲ್ಲದೇ ವೇಗದ ಸಾರಿಗೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಅವರು, ದೇಶದ ಮೆಟ್ರೋ ಯೋಜನೆಗಳಿಗೆ ಒಟ್ಟು 3 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಅವರು ತಿಳಿಸಿದರು.

Central Govt Will Support for Namma Metro Extended Bengaluru To Mysuru, pm modi said

ಸದ್ಯ 'ನಮ್ಮ ಮೆಟ್ರೋ' ಜಾಲ 74 ಕಿ.ಮೀ.

ಬೆಂಗಳೂರಿನ ಜನರಿಗೆ ಸುರಕ್ಷಿತ ಮತ್ತು ವೇಗದ ಸಾರಿಗೆ ಒದಗಿಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ವು ಸದ್ಯ ಪೂರ್ವ-ಪಶ್ಚಿಮ ಮತ್ತು ಉತ್ತರದಿಂದ ದಕ್ಷಿಣ ಕಡೆಗೆ ಹಾಲಿ 74 ಕಿಲೋ ಮೀಟರ್ ಕಾರ್ಯ ನಿರ್ವಹಿಸುತ್ತಿದೆ.

ಈ ಪೈಕಿ ಪಶ್ಚಿಮದಿಂದ ಪೂರ್ವದವರೆಗಿನ ನಮ್ಮ ಮೆಟ್ರೋ ನೇರಳೆ ಮಾರ್ಗ ಪರಿಪೂರ್ಣ ವಾಣಿಜ್ಯ ಸಂಚಾರಕ್ಕೆ ಎಲ್ಲಿಲ್ಲದ ಬೇಡಿಕೆ ಇತ್ತು. ಕಾರಣ ವೈಟ್‌ಪೀಲ್ಡ್‌ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುವ ಮೊದಲ ಮಾರ್ಗ ಇದಾಗಿತ್ತು. ಹೀಗಾಗಿ ಸುಮಾರು 40 ಕಿಮೀ ಉದ್ದದ ಈ ಚಲ್ಲಘಟ್ಟ- ವೈಟ್‌ಫಿಲ್ಡ್‌ ಮಾರ್ಗಕ್ಕೆ ಹೆಚ್ಚಿನ ಬೇಡಿಕೆ ಇತ್ತು.

ಸಿದ್ದರಾಮಯ್ಯ ಪತ್ರಿಕ್ರಿಯೆ

ಅದರಂತೆ ಕಳೆದ ಅಕ್ಟೋಬರ್ 9ರಿಂದ ಈ ಮಾರ್ಗವು ಪೂರ್ಣವಾಗಿ ಕಾರ್ಯಚರಣೆಗೆ ತೆರದುಕೊಂಡಿದೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಬಿಟ್ಟು ಹೋಗಿದ್ದ ಕೆಆರ್ ಪುರಂ-ಬೈಯ್ಯಪ್ಪನಹಳ್ಳಿ ಮತ್ತು ಕೆಂಗೇರಿ ಚಲ್ಲಘಟ್ಟ ಮಾರ್ಗ ಮುಕ್ತಗೊಳಿಸಲಾಗಿದೆ. ಈ ಮೂಲಕ ಉದ್ದೇಶದಂತೆ ಮೆಟ್ರೋ ಜಾಲ ವಿಸ್ತರಣೆ ಆಗಿದೆ. ಕೆಲವೆಡೆ ಇನ್ನೂ ಕೆಲಸಗಳು ನಡೆಯುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+