ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಪೊಲೀಸ್ ಆಧುನೀಕರಣಕ್ಕೆ 26,275 ಕೋಟಿ ರೂ. ಅನುದಾನ

|
Google Oneindia Kannada News

ನವದೆಹಲಿ, ಫೆ. 14: ದೇಶದಲ್ಲಿ ಪೊಲೀಸರಿಗೆ ಗುಣಮಟ್ಟದ ಸಶಸ್ತ್ರ ಖರೀದಿ ಸೇರಿದಂತೆ ಪೊಲೀಸ್ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರ 26,275 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದೆ.

ಪೊಲೀಸ್ ಆಧುನೀಕರಣ, ಗುಣಮಟ್ಟದ ಸಶಸ್ತ್ರ ಖರೀದಿ, ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯಗಳ ಉನ್ನತೀಕರಣಕ್ಕಾಗಿ ಮುಂದಿನ ಐದು ವರ್ಷಗಳ ಅವಧಿಗೆ ಬಳಕೆ ಮಾಡಲು ಇಷ್ಟು ಮೊತ್ತದ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಸಂಬಂಧಿತ ವಿಚಾರ, ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಅತ್ಯುತ್ತಮ ಪ್ರಯೋಗಾಲಯ, ಗುಣಮಟ್ಟದ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ತನಿಖಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಈ ಅನುದಾನ ಬಳಕೆ ಮಾಡಲಾಗುತ್ತದೆ.

Central Govt Approves Rs 26275 Crore Scheme for Police Modernization

ಈ ಕುರಿತು ಕೇಂದ್ರ ಗೃಹ ಇಲಾಖೆ ನೀಡಿರುವ ಹೇಳಿಕೆ ಪ್ರಕಾರ, ಭಾರತದ ಪೊಲೀಸ್ ವ್ಯವಸ್ಥೆ ಆಧುನೀಕರಣ, ಅದರ ಉಪ ಯೋಜನೆಗಳಿಗೆ ಬಳಕೆಗೆ 26, 275 ಕೋಟಿ ರೂ. ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ.

ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ, ಪೊಲೀಸ್ ಆಧುನೀಕರಣ, ಮಾದಕ ವಸ್ತು ನಿಯಂತ್ರಣ, ನ್ಯಾಯ ವ್ಯವಸ್ಥೆ ಬದಲಾವಣೆ, ವಿಧಿ ವಿಜ್ಞಾನ ಪ್ರಯೋಗಾಲಯ ನಿರ್ಮಾಣಕ್ಕೆ ರಾಜ್ಯಗಳು ಈ ಅನುದಾನ ಸದ್ಭಳಕೆ ಮಾಡಿಕೊಳ್ಳಬಹುದು.

Central Govt Approves Rs 26275 Crore Scheme for Police Modernization

ಐದು ವರ್ಷದ ಅವಧಿಗೆ ದುಬಾರಿ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

Recommended Video

Suresh Raina ಪರಿಸ್ಥಿತಿ ನೋಡಿ ನೊಂದ ಅಭಿಮಾನಿಗಳು | Oneindia Kannada

ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ನಕ್ಸಲ್ ಪೀಡಿತ ಈಶಾನ್ಯ ವಲಯದ ರಾಜ್ಯಗಳಿಗೆ 18,839 ಕೋಟಿ ರೂ. ಬಳಕೆ ಮಾಡಲಾಗುತ್ತದೆ. ಉಳಿದ 4856 ಕೋಟಿ ರೂ. ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲು ಕೇಂದ್ರ ಗೃಹ ಇಲಾಖೆ ಮುಂದಾಗಿದೆ. ಉಳಿದ 2080 ಕೋಟಿ ರೂ. ಅನುದಾನವನ್ನು ವೈಜ್ಞಾನಿಕ ತನಿಖಾ ವ್ಯವಸ್ಥೆ ಬಲ ಪಡಿಸಲು ರಾಜ್ಯಗಳಿಗೆ ನೀಡಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

English summary
Central Government approved the umbrella scheme of modernization of police force for the next five years with a financial outlay of Rs 26,275 crore. More than Rs 18,000 crore of this money will go towards security related expenditure in Jammu and Kashmir, Left Wing Extremism areas and the Northeast. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X